
Category: | ಕನ್ನಡ |
Sub Category: | ಇತಿಹಾಸ |
Author: | ಎನ್ ಎಸ್ ಶ್ರೀಧರ ಮೂರ್ತಿ | N S Shreedharamurty |
Publisher: | ಅಂಕಿತ ಪುಸ್ತಕ | Ankita Pustaka |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕ್ಯಾಲೆಂಡರ್ ಇತಿಹಾಸವೆಂದರೆ, ಅಭಿವರ್ಧನೆಯ ಹಂತದಲ್ಲಿ ಸೂರ್ಯ, ಚಂದ್ರ, ಭೂಮಿ ಮತ್ತು ನಕ್ಷತ್ರಗಳ ಸಾಪೇಕ್ಷ ಚಲನೆಯನ್ನು ಗಣನೆ ಮಾಡಿ ಕಾಲವನ್ನು ಖಂಡಗಳಾಗಿ ವಿಭಜಿಸಿದ ರೋಚಕ ಪ್ರಸಂಗ. ಆದರೆ ಇದು ಸರಳೀಕ-ರಿಸಿದಷ್ಟು ಸುಲಭವಲ್ಲ. ಒಂದೊಂದು ನಾಗರಿಕತೆಯೂ ತನಗೆ ತೋಚಿದ ತರ್ಕದ ಹಿನ್ನೆಲೆಯಲ್ಲಿ ಇದನ್ನು ಸಾಧಿಸಿದ ಪರಿ ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ಸಂಗತಿಯಾಗಿ ಕಾಣುತ್ತದೆ. ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರ 'ಕ್ಯಾಲೆಂಡರ್ ಇತಿಹಾಸ ಮತ್ತು ವರ್ತಮಾನ ' ಕೃತಿಯ ಕೇಂದ್ರಬಿಂದುವೇ ಈ ಸಾಹಸ ಯಾತ್ರೆಯನ್ನು ಓದುಗರ ಮುಂದೆ ತೆರೆದಿಡುವ ಪ್ರಯತ್ನ. 26 ಶತಮಾನಗಳ ಈ ಕುತೂಹಲಕಾರಿ ನಡೆಯನ್ನು ಹಿಡಿದಿಡಲು ಆಸಕ್ತಿ ಬೇಕು, ಪರಿಶ್ರಮ ಬೇಕು, ತರ್ಕದ ಹಿನ್ನೆಲೆಯಲ್ಲಿ ಧಾರ್ಮಿಕ ಉದ್ದೇಶಗಳನ್ನು ಮೀರಿದ ವೈಜ್ಞಾನಿಕ ಅನುಭೂತಿ ಬೇಕು. ಇಂಥ ಸಂಶೋಧನಾತ್ಮಕ ಕೃತಿ ರೂಪಿಸಲು ವಿಷಯಕ್ಕೆ ಸಂಬಂಧಿಸಿದ 880 ಕೃತಿಗಳನ್ನು ಲೇಖಕರು ಅಧ್ಯಯನ ಮಾಡಿದ್ದಾರೆಂಬುದೇ ವಿಷಯದ ವ್ಯಾಪ್ತಿಯ ಅರಿವನ್ನೂ, ಲೇಖಕರ ಅಧ್ಯಯನಶೀಲತೆಯನ್ನೂ ನಮ್ಮ ಮುಂದೆ ತೆರೆದಿಡುತ್ತದೆ. ಜಗತ್ತಿಗೆ ಹೆಚ್ಚಿನಮಟ್ಟಿಗೆ ಪರಿಚಯವಿರುವುದು ಪ್ರಮುಖವಾಗಿ ಜ್ಯೂಲಿಯನ್ ಕ್ಯಾಲೆಂಡರ್ ಮತ್ತು ಈಗ ಪರಿಷ್ಕೃತ ರೂಪದಲ್ಲಿ ಬಳಕೆಯಲ್ಲಿರುವ ಗ್ರಿಗೋರಿಯನ್ ಕ್ಯಾಲೆಂಡರ್. ಆದರೆ ಸಾಮಾನ್ಯ ಓದು ಓದುಗರ ಗ್ರಹಿಕೆಗೆ ಹೊರತಾಗಿರುವ ಇನ್ನೂ ಅನೇಕ ಪ್ರಯತ್ನಗಳಿವೆ. ಈಜಿಪ್ಟಿಯನ್ ಕ್ಯಾಲೆಂಡರ್, ಚೀನದ ಕ್ಯಾಲೆಂಡರ್, ಮಯಾ ಕ್ಯಾಲೆಂಡರ್, ಬ್ಯಾಬಿಲೋನಿಯನ್ ಕ್ಯಾಲೆಂಡರ್, ಹೀಬ್ರೂ ಕ್ಯಾಲೆಂಡರ್, ಫ್ರೆಂಚ್ ಕ್ಯಾಲೆಂಡರ್, ಹಿಜರಿ ಕ್ಯಾಲೆಂಡರ್, ಸೌದಿ ಅರೇಬಿಯ, ಪರ್ಷಿಯ ಮತ್ತು ಕುವೈತ್ ಕ್ಯಾಲೆಂಡರ್ಗಳು. ಅಷ್ಟೇ ಏಕೆ, ಶೃಂಗೇರಿಯೂ ಕ್ಯಾಲೆಂಡರನ್ನು ಸಿದ್ಧಪಡಿಸುತ್ತಿತ್ತು. ಲೇಖಕರು ಬರಿ ಪಟ್ಟಿಕೊಡದೆ ಈ ಒಂದೊಂದರ ಬಳಕೆಯಲ್ಲಿನ ಅನುಕೂಲ, ಅನಾನುಕೂಲಗಳನ್ನು ವೈಜ್ಞಾನಿಕ ತರ್ಕದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಭಾರತದ ಪಂಚಾಂಗ ರಚನೆ ಕುರಿತು ಪ್ರತ್ಯೇಕ ಚರ್ಚೆಗಳನ್ನೇ ಓದುಗರ ಮುಂದಿಟ್ಟಿದ್ದಾರೆ. ಮಾಡುವಾಗ ವೇದ. ಖಗೋಳ ಶಾಸ್ತ್ರಜ್ಞರ ಕೃತಿಗಳನ್ನೂ ವ್ಯಾಪಕವಾಗಿ ಅವಲೋಕಿಸಿದ್ದಾರೆ. ಇಲ್ಲಿ ಉಪನಿಷತ್ತುಗಳನ್ನು, ಚರಿತ್ರೆ-ಭೂಗೋಳ-ಖಗೋಳ-ಗಣಿತ ಸಂಗಮಿಸಿವೆ. ಮನೆಯಲ್ಲಿನ ಹಿರಿಯರು ಾಲೆಂಡರ್ ಪರಿಕಲ್ಪನೆಯಲ್ಲಿ ಪರಿಣತರು. ಅವರಿಂದ ಗಳಿಸಿದ ಜ್ಞಾನ ಕಾಲು ಭಾಗವಾದರೆ, ಉಳಿದ ಇವರ ಮುಕ್ಕಾಲು ಪಾಲು ಅರಿವು ಸ್ಪೋಪಜ್ಞತೆಯಿಂದ ಬಂದದ್ದು. ಇದರಿಂದಾದ ಲಾಭವೆಂದರೆ ಕನ್ನಡಕ್ಕೆ ಹೊಸಬಗೆಯ ವೈಚಾರಿಕ, ವೈಜ್ಞಾನಿಕ ಕೃತಿ ಲಭಿಸಿರುವುದು. ಡಾ. ಟಿ. ಆರ್. ಅನಂತರಾಮು
ಎನ್ ಎಸ್ ಶ್ರೀಧರ ಮೂರ್ತಿ | N S Shreedharamurty |
0 average based on 0 reviews.