• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ ೪ | Shilpakala devalayake dhari samputa 4

ಕರ್ನಾಟಕದ ಆಯ್ದ 50 ಸ್ಥಳಗಳಲ್ಲಿನ ಸುಂದರ ಅಪರಿಚಿತ ದೇವಾಲಯಗಳ ಪರಿಚಯ ಹಾಗೂ ಮಾರ್ಗ ಸೂಚಿ

₹235   ₹209

ಸಮಗ್ರ ಲಲಿತ ಪ್ರಬಂಧಗಳು | Samagra Lalita Prabandagalu

ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ ಅವರದು. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಳತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಳನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ. ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪ ಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ.

₹330   ₹294

ಸರಸ | Sarasa

#

₹250   ₹223

ಸಾವೇ ಬರುವುದಿದ್ದರೆ ನಾಳೆ ಬಾ ! (ಬದುಕು ಬದಲಿಸಬಹುದು ಭಾಗ - 2 )|Saave baruvudiddare Naale Baa (Baduku badalisabahudu – 2)

ಸಾವೇ, ಬರುವುದಿದ್ದರೆ ನಾಳೆ ಬಾ !ಬದುಕು ಬದಲಿಸಬಹುದು ಭಾಗ - ೨. ಬದುಕು ಪ್ರೀತಿಯ ಈ ಸಂಕಲನ : `ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡಿಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಾಮ್ಮಲ್ಲಿಯೇ ಇದೆ` ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ. ನಮ್ಮ ಚಿಂತಬೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆರೆ ಲೇಖನಗಳು ಇಲ್ಲಿವೆ.

₹325   ₹289.25

ಸೋಲೆಂಬುದು ಅಲ್ಪವಿರಾಮ (ಬದುಕು ಬದಲಿಸಬಹುದು - ಭಾಗ - 3)|Solembudu Alpaviraama (Baduku badalisabahudu – 3)

ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3 ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ: ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ. ನಮ್ಮ ಬದುಕಿನ ನಿಘಟಿನಿಂದ `ಸೋಲು` ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು.

₹325   ₹289.25

ಸ್ಫೂರ್ತಿವಂತರು | Spoorthyvantaru

ಯಾವ ವ್ಯಕ್ತಿಯನ್ನಾದರೂ ಸುಲಭಕ್ಕೆ ಅರ್ಥ ನ ಮಾಡಿಕೊಳ್ಳುವಷ್ಟು ಅವರ ಬದುಕು, ವಿಚಾರ ಮತ್ತು ಸಾಧನೆ ಸರಳವಾಗಿರುವುದಿಲ್ಲ. ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅವರು ಸಂಕೀರ್ಣವಾಗುತ್ತಾ, ಜಟಿಲವಾಗುತ್ತಾ ಹೋಗುವುದು ಸಹಜ ಕೆಲವೊಮ್ಮೆ ನಾವು ಯಾರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಭಾವಿಸುತ್ತೇವೋ ಅವರೇ ನಮಗೆ ಸರಿಯಾಗಿ ಅರ್ಥವಾಗಿರುವುದಿಲ್ಲ. ಅದರಲ್ಲೂ ಅವರು ಮೇಲಮೇಲಕ್ಕೆ ಹೋದಂತೆಲ್ಲ ನಮ್ಮಿಂದ ದೂರವಾಗುತ್ತಾ ಹೋಗುತ್ತಾರೆ. ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರು ಈ ಕೃತಿಯಲ್ಲಿ ಹಲವು ವ್ಯಕ್ತಿಗಳನ್ನು ನಮಗೆ ಪರಿಚಯಿಸುವ, ಆಪ್ತವಾಗಿಸುವ ಮತ್ತು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜತೆಗೆ ಅವರ ಸಾಧನೆಯನ್ನು ನಮ್ಮ ಮುಂದೆ ಅಡಕಳ್ಳಿಯವರು ತೆರೆದಿಟ್ಟಿದ್ದಾರೆ. ಇಲ್ಲಿನ ಪ್ರತಿಯೊಬ್ಬರೂ ಅನ್ನ ವ್ಯಕ್ತಿತ್ವದವರು, ವಿಶೇಷ ಸಾಧನೆ ಮಾಡಿದವರು. ಅವರೆಲ್ಲರ ಸಾಧನೆ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಸ್ಫೂರ್ತಿಯ ಸೆಲೆ, ಪ್ರೇರಣಿಯ ಧಾರೆ. ಒಬ್ಬರನ್ನು ಪರಿಚಯಿಸಿಕೊಳ್ಳುವುದು ಮತ್ತು ಅವರ ಸಾಧನೆಯಿಂದ ಪ್ರೇರಿತರಾಗುವುದು ಯಾವತ್ತೂ ಒಂದು ದಿವ್ಯ ಅನುಭವವೇ. ಅಂಥ ಒಂದು ವಿಶೇಷ ಅನುಭವ ಈ ಕೃತಿಯನ್ನು ಓದಿದಾಗ ಆಗುತ್ತದೆ. ಅಡಹಳ್ಳಿಯವರ ಭಾಷೆ, ಶೈಲಿ, ಓಘ, ನಿರೂಪಣೆ ಅಪರೂಪವಾದುದು. ಅವರ ಬರಹಕ್ಕೆ ಸಹಜ ಓದಿನ ಗತಿ, ವೇಗವನ್ನು ಸಂಪಾದಿಸುವ ಕಥನಶಕ್ತಿ ಇದೆ. ವ್ಯಕ್ತಿಯನ್ನು ಪರಿಚಯಿಸುವ ಕಾಳಜಿ, ಆಪ್ತವಾಗಿಸುವ ಕಲೆಗಾರಿಕೆ ಅವರಿಗೆ ಸೊಗಸಾಗಿ ಸಿದ್ಧಿಸಿದೆ. ಅದಕ್ಕೆ ಈ ಕೃತಿಯೇ ನಿದರ್ಶನ ಒಬ್ಬರನ್ನು ಪರಿಚಯಿಸುವ ಏಕತಾನತೆ, ಧಾವಂತದಲ್ಲಿ ಅದು ಶುಷ್ಕ ಬಯೋಡೇಟಾ ಅಥವಾ ವ್ಯಕ್ತಿ ಕಿರ್ದಿಯಾಗದಂತೆ ಎಚ್ಚರವಹಿಸಿರುವುದು ಅವರ ಬರವಣಿಗೆಯ ಇನ್ನೊಂದು ವಿಶೇಷ. ಒಬ್ಬ ವ್ಯಕ್ತಿಯನ್ನು ನೋಡುವುದು, ಅವರ ಸಾಧನೆಯ ಬದುಕಿನಲ್ಲಿ ಅಂತರನೋಟ ಬೀರುವುದು ಹಾಗೂ ನಂತರ ಅವರ ಇಡೀ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಅತ್ಯಂತ ಹೊಣೆಗಾರಿಕೆಯ ನಡೆ. ಕಾರಣ ವ್ಯಕ್ತಿಗೆ, ಅವರ ವಿಚಾರ ಮತ್ತು ಸಾಧನೆಗೆ ಎಲ್ಲೂ ಅಪಚಾರವಾಗಬಾರದಲ್ಲ? ಈ ಕೃತಿಯಲ್ಲಿ ಅಂಥ ಒಂದು ವಿಶೇಷ ಪ್ರಯತ್ನವನ್ನು ಗಮನಿಸಬಹುದು. ಈ ಕೃತಿಯಲ್ಲಿನ ಒಬ್ಬೊಬ್ಬ ವ್ಯಕ್ತಿಯ ಕುರಿತು ಓದುತ್ತಾ ಹೋದಂತೆಲ್ಲ ನಮ್ಮೊಳಗೆ ಸ್ಫೂರ್ತಿಯ ಒಳಹರಿವು ಹೆಚ್ಚಾಗಿ, ಪ್ರೇರಣೆಯ ಅಣೆಕಟ್ಟು ಭರ್ತಿಯಾಗುತ್ತಾ ಹೋಗುತ್ತದೆ. ವಿಶ್ವೇಶ್ವರ ಭಟ್

₹245   ₹218