
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಡಾ. ಪ್ರದೀಪಕುಮಾರ ಹೆಬ್ರಿ | Dr Pradeepakumara Hebri |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 00919606474289-51 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಡಾ| ಪ್ರದೀಪ್ ಕುಮಾರ್ ಹೆಬ್ರಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಸುಮಾರು 600ರಷ್ಟು ಕೃತಿಗಳನ್ನು ಕೊಟ್ಟ ಧೀಮಂತ ಸಾಹಿತಿ: ಕನ್ನಡದ ಕನ್ನಡಿಗರ ಬಹು ದೊಡ್ಡ ಆಸ್ತಿ. ಇವರ "ಬೆಳೀಪ" ಪ್ರತಿ ಮನೆ-ಮನಗಳನ್ನು ಬೆಳಗಿಸುವ ಅರಣೋದಯದ ಚೈತನ್ಯದೀಪ
ಸ್ವ-ಅವಲೋಕನವೇ ತನ್ನ ಬೆಳವಣಿಗೆ, ತನ್ನವರ ಬೆಳವಣಿಗೆ, ತನ್ನ ಸುತ್ತಣ ಸಮಾಜದ ಬೆಳವಣಿಗೆಯ ಮೂಲ ಬೀಜಮಂತ್ರವಾಗಿದೆ ಎಂಬುದನ್ನು ಲೇಖಕರು ಓದುಗರಿಗೆ ಅರುಹುವ ಪ್ರಯತ್ನವನ್ನಿಲ್ಲಿ ಮಾಡಿದ್ದಾರೆ. ಸರ್ವಜ್ಞ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದ-ಮೊದಲಾದ ಮಹನೀಯರು ಸಾರಿದ ಸಾರ್ವಕಾಲಿಕವಾದ ಜೀವನ ಸಂದೇಶಗಳ ಜೊತೆಯಲ್ಲಿ ಡಾ| ಪ್ರದೀಪ್ ಕುಮಾರ್ ಹೆಬ್ರಿಯವರ ಅನುಭವ-ಅನುಭಾವಲೀನವಾದ ಅದಮ್ಯ ಶಕ್ತಿಯ ಸಮಪಾಕದ ರಸದೌತಣ ಇಲ್ಲಿದೆ. ಆಧ್ಯಾತ್ಮಿಕ ಚಿಂತನೆಗಳನ್ನು ಅತ್ಯಂತ ಸರಳ ಸುಂದರ ಶೈಲಿಯಲ್ಲಿ ಲೇಖಕರು ಚರ್ಚಿಸಿದ್ದು, "ಬೆಳೀಪ"ದಲ್ಲಿ ಅಂತರಂಗದ ಅನುಭೂತಿಯ ನವನೀತದ ಸವಿಯಿದೆ. ಜೀವನದ ಅರ್ಥದ ಹುಡುಕಾಟದ ದಾರಿಯಿದೆ. ಜಾತಿ, ಧರ್ಮ, ಮತ, ಪಂಥಗಳ ಎಲ್ಲೆಯನ್ನು ದಾಟಿನಿಂತ ಮಾನವತೆಯ ದಿವ್ಯತೆಯಿದೆ.
"
3
ವ್ಯಕ್ತಿತ್ವ ನಿರ್ಮಾಣ-ಸ್ವಸ್ಥ ಸಮಾಜ ನಿರ್ಮಾಣ-ಶಾಂತ ಜೀವನ, ನೈತಿಕ ಮತ್ತು ಆಧ್ಯಾತ್ಮಿಕ ಬದುಕಿನ ಸಂಜೀವಿನಿಯ ಸಿಂಚನವಿದೆ. ಸ್ವಾರ್ಥಭರಿತ ಧೂರ್ತ ರಾಜಕೀಯದ ವಿಡಂಬನೆಯಿದೆ. ಪ್ರಾಣಿ-ಪಕ್ಷಿ, ಕ್ರಿಮಿ-ಕೀಟ ಸಕಲ ಜೀವಿ ಸಂಕುಲದ ಬಾಳಿನ ಬಗೆಗಿನ ಹೃದಯದ ಬಡಿತವಿದೆ. ಪರಂಪರೆಯ ಸೊಗಡನ್ನು ಉಳಿಸಿ ಬೆಳೆಸಬೇಕೆನ್ನುವ ತುಡಿತವಿದೆ. ನಡೆ-ನುಡಿ, ಹೃದಯ-ಮನಸ್ಸುಗಳ ಶುದ್ಧ ಚಾರಿತ್ರ್ಯವಿದೆ. ಕರ್ಮಸಿದ್ಧಾಂತ-ಧರ್ಮಸಿದ್ಧಾಂತಗಳ ಪಾಲನೆಯಿದೆ. ಹೇಳುವ ನೀತಿಗೂ ಬಾಳುವ ರೀತಿಗೂ ಸಾಮ್ಯತೆಯಿರಬೇಕೆಂಬ ಅರಿವಿನ ಎಚ್ಚರ; ಎಚ್ಚರದ ಅರಿವು ಇದೆ. ವೃಷ್ಟಿ-ಸಮಷ್ಟಿಯೊಂದಿಗೆ ಸೇರಿಕೊಂಡಾಗಲೇ ಬಾಳ ಸಾರ್ಥಕತೆಯೆಂಬ ಸಂಸ್ಕಾರವಿದೆ. ಬದುಕಿನ ಅನುಭವಗಳ ಸತ್ಯದರ್ಶನದ ಅಚ್ಚಳಿಯದ ಜೀವನಪಾಠಗಳಿವೆ. ಮೂರ್ತದಿಂದ ಅಮೂರ್ತದೆಡೆಗೆ ಪಯಣಿಸಲು ಬೇಕಾದ ದಾರಿದೀಪವಿದೆ.
"ಬೆಳ್ಳಿಪದ ಬೆಳಕಿನ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ. "ಬೆಳ್ಳೇಪ"ದೊಂದಿಗೆ ಪ್ರಜ್ವಲಿಸಿ, ಮಾನವ ಜನ್ಮದ ಸಾರ್ಥಕತೆ ಪಡೆಯೋಣ.
-ಶ್ರೀ ಮುದ್ರಾಡಿ
ಕವಯಿತ್ರಿ, ಲೇಖಕಿ
ಡಾ. ಪ್ರದೀಪಕುಮಾರ ಹೆಬ್ರಿ | Dr Pradeepakumara Hebri |
0 average based on 0 reviews.