Nil
‘ವ್ಯಗ್ರ’ ‘ಅಳಿವು’ ‘ಅವಸಾನ’ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು.
ಡಾ. ಟಿಸ್ವಿ ಪರಿಸರವನ್ನು ಕುರಿತು ತಮ್ಮ ಅಧ್ಯಯನಗಳಿಂದಾಗಿ ಕನ್ನಡ ಸಂವೇದನಾಶೀಲ ಮನಸ್ಸುಗಳಿಗೆ ಪರಿಚಿತರು. ಬಹುತೇಕರ ಹಾಗೆ ಪರಿಸರ ಅಧ್ಯಯನವೆಂದರೆ ಜೀವವೈವಿಧ್ಯ ಕುರಿತ ವಿಸ್ಮಯಕಾರಿಯಾದ ಶುಪ್ಕ ಮಾಹಿತಿಗಳನ್ನು ಒದಗಿಸುವುದು ಎನ್ನುವ ಕ್ರಮ ಇವರದ್ದಲ್ಲ, ಬದಲಾಗಿ ಇದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕತೆಗಳ ಸಂಕಥನವೆಂದು ಇವರು ಪರಿಭಾವಿಸುವುದರಿಂದಾಗಿ ಇವರ ಪರಿಸರ ಅಧ್ಯಯನ ಜೀವಪರ ನೆಲೆಗಳ ಹುಡುಕಾಟದ ವೇದಿಕೆಯಾಗಿ ರೂಪಗೊಂಡಿದೆ.
ಪುಸ್ತಕದ ಈ ಹತ್ತೂ ಕಥೆಗಳು ನನ್ನದೇ ಬಾಲ್ಯದಿಂದ ರೂಪು ತಳೆದಂತಹವು. ಒಂದಲ್ಲಾ ಒಂದು ರೀತಿಯಲ್ಲಿ ನನ್ನನ್ನು ತೀವ್ರವಾಗಿ ಕಾಡಿದ ಕಥೆಗಳಿವು. ಬಾಲ್ಯಕಾಲದ ನನ್ನೂರಿನ, ನನ್ನ ಬೀದಿಯ, ಕೇರಿಯ ಆತ್ಮಪ್ರಜ್ಞೆ ಈ ಕಥೆಗಳು, ಇವು ನಿಜಕ್ಕೆ ನಿಜ, ಕಲ್ಪನೆಗೆ ಕಲ್ಪನೆಯಂತಹದ್ದೇ ರೂಪಕಗಳು. ಇವು ಕೇವಲ ನನ್ನ ಬಾಲ್ಯದ ಕಥೆಗಳಾಗಿರದೆ, ಪುಟ್ಟ-ಪಟ್ಟಣಗಳಲ್ಲಿ ಬೆಳೆದ ನನ್ನಂಥ ಅನೇಕರು ತಮ್ಮ ಬಾಲ್ಯವನ್ನು ಸಮೀಕರಿಸಿಕೊಳ್ಳಬಹುದಾದ ಕಥೆಗಳು. ಇವು ಮಕ್ಕಳ ಕಥೆಗಳೂ ಹೌದು, ದೊಡ್ಡವರ ಕಥೆಗಳೂ ಹೌದು! ಎಲ್ಲಾ ವಯಸ್ಸಿನವರಿಗೂ ದಕ್ಕುವ ಹಾಗೆ, ನನಗೆ ಒಲಿದಿರುವ ಸರಳ ಭಾಷೆಯಲ್ಲಿ ಕಥೆಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಕಥೆಯು, ಸರಳವಾದ ಭಾಷೆ ಮತ್ತು ನಿರೂಪಣೆಯಲ್ಲಿದ್ದರೆ ಮಕ್ಕಳೂ ಕೂಡ ಸಲೀಸಾಗಿ ಓದಬಹುದೆಂಬ ಸಣ್ಣ ಉದ್ದೇಶವೂ ಇದರ ಹಿಂದಿದೆ.
ಹೆಣ್ಣೂಬ್ಬಳು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು.
1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಜ್ಯ ಗುಪ್ತಚರ ಇಲಾಖೆ ಮತ್ತು ರಾಜ್ಯ ಮಾಹಿತಿ ಇಲಾಖೆಯ ಮುಖ್ಯಸ್ಥರಾಗಿದ್ದರು. ಅವರು ರಾಜ್ಯ ಪೊಲೀಸ್‌ನಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು ಮತ್ತು ಅತ್ಯಂತ ಪಾರದರ್ಶಕ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅದು ಅವರಿಗೆ ಹೆಚ್ಚು ಪ್ರಶಸ್ತಿಗಳನ್ನು ತಂದಿತು. ಅವರು ಹೊಸದಿಲ್ಲಿಯ ಸಿಐಎಸ್‌ಎಫ್‌ನಲ್ಲಿಯೂ ತಮ್ಮ ಸೇವೆಯನ್ನು ಹೊಂದಿದ್ದರು. ಅವರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ಬೃಹತ್ ಘಟಕವನ್ನು ನಾಲ್ಕು ಸ್ವತಂತ್ರ ಘಟಕಗಳಾಗಿ ವಿಭಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಯು.ಕೆ.ಯಲ್ಲಿ ಪೊಲೀಸ್ ತರಬೇತಿಯ ಸಣ್ಣ ಅವಧಿಯನ್ನು ಹೊಂದಿದ್ದಾರೆ. ಅವರು ಕರ್ನಾಟಕ ಅಪರಾಧ ತನಿಖಾ ಇಲಾಖೆಯ ಮಹಾನಿರ್ದೇಶಕರಾಗಿ ಕೆಲಸ ಮಾಡಿದರು ಮತ್ತು 2011 ರಲ್ಲಿ ಡಿಜಿಪಿ ಹೋಮ್ ಗಾರ್ಡ್ಸ್, ಅಗ್ನಿಶಾಮಕ ಮತ್ತು ಸಿವಿಲ್ ಡಿಫೆನ್ಸ್ ಆಗಿ ನಿವೃತ್ತರಾದರು. ಅವರು ಭಾರತೀಯ ಪೊಲೀಸ್ ವ್ಯವಸ್ಥೆ ಮತ್ತು ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಂಬಂಧಿತ ವಿಷಯಗಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರವಾಸ ಕಥನಗಳು. ಅವರು ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್‌ನ ಅಂಕಣಕಾರರೂ ಆಗಿದ್ದಾರೆ. ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಲವಾರು ಪುಸ್ತಕಗಳ ಲೇಖಕರಾಗಿದ್ದಾರೆ.
ಸಕಲ ಭಾಷಾಮಯೀ ಸರಸ್ವತಿ ಸರ್ವಭಾಷಾಮಯೀ ಸರಸ್ವತೀ ಎನ್ನುವ ಮಾತಿದೆ.
ಕನ್ನಡದ ಪ್ರತಿಭಾಶಾಲಿ ಲೇಖಕಿ, ಅಧ್ಯಾಪಕರಾದ ದೀಪಾ ಹಿರೇಗುತ್ತಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ಬರಹದ ಪುಸ್ತಕ ಇದಾಗಿದೆ. ಜೀವನದಲ್ಲಿ ಸೋಲು, ಗೆಲುವು ಸಹಜ. ಗೆಲುವಿನಿಂದ ನಾವು ಪಾಠ ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಪಾಠ ಕಲಿಸುತ್ತೆ. ಅದಕ್ಕೇ ಲೇಖಕರು ಇಲ್ಲಿ ‘ಸೋಲೆಂಬ ಗೆಲುವು’ ಎಂಬ ಹೆಸರನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. ಹಲವು ಸಾಧಕರ ಹಿಂದೆ ನೋವು, ಅಪಮಾನ, ತಾತ್ಸಾರ, ನಿಂದನೆಗಳು ಇರುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಛಲ ಬಿಡದೆ ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವವನೇ ನಿಜವಾದ ಸಾಧಕ ಆಗುತ್ತಾನೆ ಎಂಬ ಗುಣಾಂಶ ಈ ಪುಸ್ತಕದಲ್ಲಿದೆ. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಇಲ್ಲಿದೆ. ಇವರೆಲ್ಲರೂ ಪುಸ್ತಕ ಓದುವವರಿಗೆ ಸ್ಫೂರ್ತಿ, ಪ್ರೇರಣೆ ನೀಡುತ್ತಾರೆ.
ಬರ್ಡ್ ವಾಚಿಂಗ್ ಅನ್ನೋದು ತುಂಬಾ ತಾಳ್ಮೆ ಬೇಡುವ ಕೆಲಸ. ಅಂಥಹ ತಾಳ್ಮೆಯನ್ನು ಇಡೀ ಪುಸ್ತಕದುದ್ದಕ್ಕೂ ಸೆರೆಹಿಡಿದಿರುವ ಹಕ್ಕಿಗಳ
ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ʼಕಾವ್ಯಸಂಕ್ರಾಂತಿ ಸ್ಪರ್ಧೆʼಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. -ಎಚ್.ಎಸ್.ವೆಂಕಟೇಶಮೂರ್ತಿ, ತೀರ್ಪುಗಾರರು
ತಾರಕ್ಕನನ್ನು ಮನೆಯ ಹೊರಕಟ್ಟೆಯಿಂದ ಹಿಡಿದು ಹಿತ್ತಲವರೆಗೂ ಹುಡುಕಿದ. ಎದೆಬಡಿತ ಹೆಚ್ಚಾಗುತ್ತಿದ್ದಂತೆ ಕಟ್ಟಕಡೆಯದಾಗಿ ದೇವರಮನೆಯ ಬಾಗಿಲು ದೂಡಿದ. ನಂದಾದೀಪದ ಬೆಳಕಲ್ಲಿ ತಾರಕ್ಕನ ಮುಖ ಕಂಡಿತು. ಸಮಾಧಾನಕ್ಕಿಂತ ಹೆಚ್ಚಾಗಿ ಅಚ್ಚರಿ ಆಯಿತು. ನಿಟ್ಟುಸಿರು ಬಿಟ್ಟ. ಮೊಣಕಾಲುಗಳ ಮೇಲೆ ಗದ್ದವನ್ನಿಟ್ಟುಕೊಂಡು ದೀಪವನ್ನೇ ದಿಟ್ಟಿಸುತ್ತಿದ್ದ ಆಕೆಯ ಕಣ್ಣುಗಳು, ಉನ್ನತ್ತ ಗಂಧರ್ವನೊಬ್ಬನ ಕೈಯಿಂದ ಜಾರಿಬಿದ್ದ ಕಪ್ಪು ದ್ರಾಕ್ಷಿಗಳನ್ನು ಹಿಡಿದಿಟ್ಟುಕೊಂಡು ಮತ್ತೆ ಅವನ ಬರುವಿಕೆಗಾಗಿ ಕಾಯುತ್ತಿವೆಯೇನೋ ಎಂಬಂತಿದ್ದವು. ಆ ನಿಶ್ಚಲ ಕಣ್ಣುಗಳನ್ನೇ ನೋಡುತ್ತ ಗೋಡೆಗಾತು ಕುಳಿತ. ಸ್ವಲ್ಪ ಹೊತ್ತಿನ ನಂತರ ತಾನೂ ಅದೇ ದೀಪ ನೋಡಹತ್ತಿದ. ತಾರಕ್ಕನ ಪ್ರಭೆಯೆದುರು ಅಲ್ಲಿದ್ದ ದೇವ-ದೇವತೆಯರು ತಮ್ಮ ಪ್ರಭಾವಳಿಗಳನ್ನು ಕಳೆದುಕೊಂಡು ಕೇವಲ ಪಟದಲ್ಲಿ ಲೋಹದಲ್ಲಿ ಮೂಡಿಸಿಕೊಂಡ ನಿರ್ಜೀವ ಆಕೃತಿಗಳಂತೆ ಕಂಡರು.
ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.
“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ.
ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕೆನ್ನುವುದು.
ಈ ಜಗತ್ತಿನಲ್ಲಿ ಕ್ರೂರ ಪ್ರಾಣಿಗಳಿವೆ. ನರ ಭಕ್ಷಕ ಜೀವಿಗಳಿವೆ. ಆದರೆ ಪ್ರಕೃತಿಯ ದೃಷ್ಟಿಯಲ್ಲಿ ನೋಡಿದರೆ ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಎನ್ನುತ್ತಾರೆ. ಅಂತಹ ಕ್ರೂರ ಮನುಷ್ಯರ ಪೈಕಿ ಹಿಟ್ಲರ್ ನಂಬರ್ ಒನ್ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಒಬ್ಬ ಸರ್ವಾಧಿಕಾರಿಯಾಗಿ, ರಾಜಕಾರಣಿಯಾಗಿ, ದೇಶಭಕ್ತನಾಗಿ ಮೆಚ್ಚುಗೆ ಗಳಿಸುತ್ತಾನೆ. ಆದರೆ ಆತ ಮಾಡಿದ ನರ ಮೇಧ ಇದೆಯಲ್ಲ ಕಣ್ಣಂಚಿನಲ್ಲಿ ನೀರಲ್ಲ ರಕ್ತವನ್ನು ತೊಟ್ಟಿಕ್ಕಿಸುತ್ತದೆ.
ಕರಾವಳಿಯ ಪುಟ್ಟ ಊಲಗೆ ಮಾತ್ರ ಲಗತ್ತಾಗುವ ಈ ಚಿಟಿಜ ನೋಟಗಳು, ಜೀವಗಳು ಈಗ ಅಲ್ಲಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು ಮುಂದೊಮ್ಮೆ ಹೊಸಕಾಲದ ಹೊಸಪೀಱಗೆಯ ಕುತೂಹಲದ ಹಾಗೆ ಬೆಚ್ಚನೆಯ ಹೊಏಕಯಾಗಿ ಒದಗಬಹುದು, ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಭೀಜಗಳವೆ,
ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ.
ಅಸಲಿಗೆ ಹೃದಯವೆಂದರೆ ಏನು? ಪ್ರೀತಿ, ದ್ವೇಷ, ಕೋಪ-ತಾಪ, ಆಘಾತ ಎಲ್ಲವನ್ನೂ ಯಾಕೆ ಹೃದಯಕ್ಕೆ ಸಮೀಕರಿಸುತ್ತೇವೆ? ‘ಅವನು ಬಹಳ ಹೃದಯವಂತ ಬಿಡಲೇ’ ಎಂದು ಮೆಚ್ಚುಗೆಯಿಂದ ಮಾತನಾಡುವ ನಾವು ‘ತೀರಾ ನೊಂದ ಹೃದಯ ಕಣೋ ಅವಳದ್ದು!’ ಎಂದೂ ಉದ್ಗಾರ ತೆಗೆಯುತ್ತೇವೆ. ಅಂದರೆ ಒಂದು ಮುಟಿಗೆಯಷ್ಟಿರುವ ಅದು ಕೇವಲ ರಕ್ತ-ಮಾಂಸದ ಮುದ್ದೆ ಅಲ್ಲ. ನಾವು ಎದುರಿಸುವ ಎಲ್ಲ ಆಘಾತಗಳ ‘ಶಾಕ್ ಅಬ್ಬರ್ವರ್’ ಅದು. ಹೃದಯವೆಂದರೆ ಮನಸ್ಸು ಕೂಡ ಹೌದು. ನಮ್ಮ ಇಡೀ ದೇಹದ ‘ಜೀವ’ ಭದ್ರವಾಗಿರುವುದು ಈ ಕವಾಟದಲ್ಲಿ. ಮನಸ್ಸು ಮತ್ತು ಹೃದಯ ಒಂದೇ ದೇಹದ ಎರಡು ಮುಖಗಳು. ಮನಸ್ಸು ಕುದ್ದು ಹೋದರೆ ಹೃದಯವೆಂದೂ ಹಿರಿಹಿರಿ ಹಿಗ್ಗುವುದಿಲ್ಲ. ನಮ್ಮ ಭಾವಕ್ಕೆ ಧಕ್ಕೆಯಾದರೆ ಅದರ ನೇರ ಪರಿಣಾಮ ಬೀರುವುದು ಹೃದಯದ ಮೇಲೆ, ಒಬ್ಬ ಕವಿ ಹೃದಯಕ್ಕೆ ರಮ್ಯತೆಯ ಪ್ರಭಾವಳಿಯನ್ನು ತೊಡಿಸುತ್ತಾನೆ. ಅದು ಸದಾ ನೆಮ್ಮದಿಯ ಗೂಡಾಗಿರಲಿ ಎಂದು ಅದನ್ನು ಪ್ರೀತಿಯಿಂದ ಅದ್ದಿ ತೆಗೆಯುತ್ತಾನೆ. ಆದರೆ ಒಬ್ಬ ವೈದ್ಯ ಅದರ ಕವಾಟದಲ್ಲಿ ಸರಿಯಾಗಿ ರಕ್ತದ ಚಲನೆ ನಡೆಯುತ್ತಿದೆಯೇ ಎಂದು ನೋಡುತ್ತಾನೆ. ಅದಕ್ಕೆ ಯಾವುದೇ ರೀತಿಯಲ್ಲಿ ಆಘಾತವಾಗದಂತೆ ವಹಿಸಬೇಕಾದ ಎಚ್ಚರಿಕೆಗಳನ್ನು ಸೂಚಿಸುತ್ತಾನೆ. ಹಾಗೆ ನೋಡಿದರೆ ಇಬ್ಬರದ್ದೂ ಚಿಕಿತ್ಸಕ ದೃಷ್ಟಿಕೋನವೇ ಆಗಿದೆ.
Showing 121 to 146 of 146 results