#
nil
ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳವಳಿಯೂ ಆಗಿತ್ತು. ಅದು ಪುರುಷ, ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು. ಆದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಿಗೆ ಹೋಲಿಸದರೆ, ಮಹಿಳೆಯರು ವಹಿಸಿದ ಪಾತ್ರವು ಇತಿಹಾಸದ ಪುಟಗಳಲ್ಲಿ ಮಬ್ಬು ಮಬ್ಬಾಗಿ ದಾಖಲಾಗಿದೆ. ಆ ಹಿನ್ನಲೆಯಲ್ಲಿ ನೋಡಿದಾಗ ಬೆಳವಡಿ ಮಲ್ಲಮ್ಮ ಕೃತಿಯ ಮಹತ್ವ ನಮಗೆ ಅರಿವಾಗುತ್ತದೆ. ಬೆಳವಡಿ ಮಲ್ಲಮ್ಮ ಯುದ್ಧವ್ಯೂಹಗಳಿಗೆ, ಗಾಳಿವೇಗದ ಪ್ರಹಾರಗಳಿಗೆ, ಸ್ವಾಭಿಮಾನ, ಧೈರ್ಯ ಸಾಹಸಗಳಿಗೆ ಹೆಸರಾದವರು.
"ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್ದು. ಬದುಕಿನ ಬವಣೆಗಳನ್ನು, ಕ್ಲಿಷ್ಟ ಸಮಸ್ಯೆಗಳನ್ನು ತಾಳ್ಮೆಯಿಂದ ಧೈರ್ಯದಿಂದ ಅಂತಃಕರಣದಿಂದ ಬಿಡಿಸುತ್ತಾ ಸಾಗಬೇಕೇ ಹೊರತು ಕೋಪತಾಪ ಆತುರದ ನಿರ್ಧಾರಗಳು ಬದುಕನ್ನು ಹಾಳುಗೆಡವುತ್ತವೆಂಬುದನ್ನು ಲೇಖಕಿ ಮಾಲತಿಯವರು ಈ ಕಾದಂಬರಿಯ ಮೂಲಕ ಚಂದದಲ್ಲಿ ಕಟ್ಟಿಕೊಡುತ್ತಾರೆ. ಯುವ ಮನಸ್ಸುಗಳು ಎದುರಿಸುವ ಅನೇಕ ಸಂಘರ್ಷಗಳಿಗೆ ಪ್ರೀತಿ ಬೆಂಬಲ ಪ್ರೋತ್ಸಾಹದ ಕೊರತೆ ಕಾರಣವಾಗಿರುವುದನ್ನು ಕುರಿತು ಹೇಳುವ ಲೇಖಕಿ, ಹಾಗೆಯೇ ಅತೀ ಕೊಂಡಾಟ ಕೂಡಾ ಅವರನ್ನು ದಿಕ್ಕುಗೆಡಿಸುತ್ತದೆ ಎಂಬ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯನ್ನು ಇಲ್ಲಿ ಕುತೂಹಲಕಾರಿಯಾಗಿ, ಆಪ್ತವಾಗಿ ಚಿತ್ರಿಸಿದ್ದಾರೆ. ತಲ್ಲಣಗಳನ್ನು ಎದುರಿಸುವ, ಅದರಿಂದ ಹೊರಬರುವ ಮಾರ್ಗಗಳನ್ನು ಕಥಾನಕ ಸರಳ, ಸುಂದರವಾಗಿ ಚಿತ್ರಿಸಿದರೂ, ಬದುಕೆಂಬುದು ಅಷ್ಟು ಸಲೀಸಲ್ಲ, ಅನೂಹ್ಯವಾದದ್ದು ಎಂಬ ಧ್ವನಿಯೂ ಅಂತರ್ಗತವಾಗಿದೆ. ಆಶಾದಾಯಕ, ಭರವಸೆಯ ದಿಕ್ಕಿನೆಡೆ ಕಥೆ ಮುಖಮಾಡಿರುವುದು ವಿಶೇಷವಾಗಿದೆ.
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರತಿವಾರ ಕಲಾವಿದರ ಕುರಿತು ಬರೆದ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಅಂಕಣ ಬರಹ ಈಗ ಪುಸ್ತಕವಾಗಿದೆ.
ರಘುನಾಥ ಚ ಹ
ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರನಾಥ್ ಒಬ್ಬ ಭಾರತೀಯ ಕಾದಂಬರಿಕಾರರು ಮತ್ತು ಚಿತ್ರಕಥೆಗಾರರು. ಇವರು ತೆಲುಗು ಭಾಷೆಯಲ್ಲಿನ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.ಅವರು ತಮ್ಮ ಸಾಮಾಜಿಕವಾಗಿ ಸಂಬಂಧಿತ ಬರಹಗಳು ಮತ್ತು ಯೂಟ್ಯೂಬ್ ವೀಡಿಯೊಗಳೊಂದಿಗೆ ಯುವ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತಾರೆ. ಅವರ ಬರಹಗಳಲ್ಲಿ ಅವರು ಬಡತನ, ಪೂರ್ವಾಗ್ರಹಗಳು ಮತ್ತು ಮೂಢನಂಬಿಕೆಗಳಂತಹ ಭಾರತದಲ್ಲಿನ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಅವರು ಸಾಹಿತ್ಯದ ಆದರ್ಶವಾದಿ ಮತ್ತು Read More...
“ಬೇವಾಚ್” ಕತ್ತಲಾಗುತ್ತಿದ್ದಂತೆ ಎಚ್ಚರವಾಗುವ ಲೈವ್ ಬ್ಯಾಂಡಿನ ಝಗಮಗಿಸುವ ಬೆಳಕಿನಡಿಯಲ್ಲಿ, ಕಿವಿಗಡಚಿಕ್ಕುವ ಅಬ್ಬರದ ಹಾಡಿಗೆ ಅರೆಬರೆ ಬಟ್ಟೆತೊಟ್ಟು ಮೈ ಬಳಕಿಸುತ್ತಾ, ಗ್ರಾಹಕರನ್ನು ಕಣ್ಣಲ್ಲೇ ಸೆಳೆಯುವ ಯುವತಿಯೊಬ್ಬಳ ಸುತ್ತ ಹೆಣೆದ ಕಾದಂಬರಿ ಪರಿಸ್ಥಿತಿ ಮತ್ತು ಜವಾಬ್ದಾರಿ ಒಬ್ಬ ಮುಗ್ಧ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ; ಮುಂದೆ, ಬದಲಾಗುವ ಅವಕಾಶ ಇದ್ದರೂ ಹಣದಾಸೆಗೆ ಬಿದ್ದ ಅವಳು ಯಾವ್ಯಾವ ಕುಕೃತ್ಯದಲ್ಲಿ ತೊಡಗಿಕೊಳ್ಳುತ್ತಾಳೆ ಎಂಬುದರ ಜೊತೆಗೆ ಬಡತನ, ಮೋಸ, ವ್ಯಭಿಚಾರ, ಗಂಡು ಮಗುವಿನ ವ್ಯಾಮೋಹ, ಪೊಲೀಸರ ಕ್ರೌರ್ಯ, ಕ್ರೈಂ ಮಿಗಿಲಾಗಿ ಬೆಲೆವೆಣ್ಣುಗಳ ಸಹವಾಸ ಮಾಡುವುದರಿಂದಾಗುವ ಪರಿಣಾಮವನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ.
Showing 3181 to 3210 of 5159 results