| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಶ್ರೀನಿವಾಸ ವಾಡಪ್ಪಿ | Shrinivasa Vaadappi |
| Publisher: | Manohara Grantha Mala |
| Language: | Kannada |
| Number of pages : | 122 |
| Publication Year: | 2025 |
| Weight | 200 |
| ISBN | 978-93-92192-47-0 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶ್ರೀನಿವಾಸ ವಾಡಪ್ಪಿ ಶೈಕ್ಷಣಿಕ ಕ್ಷೇತ್ರದಾಚೆ ಬ್ಯಾಂಕ್ ಉದ್ಯಮದಲ್ಲಿ ಸೇವೆ ಸಲ್ಲಿಸಿ. ಅಕ್ಷರ ಲೋಕದ ಜೊತೆ ನಿರಂತರ ಅನುಸಂಧಾನ ನಡೆಸುತ್ತಿರುವ ಶ್ರೀನಿವಾಸ ವಾಡಪ್ಪಿ ಅವರದು ಸೃಜನಶೀಲ ಮನಸ್ಸು, ಈ ಪ್ರತಿಭೆ ಪ್ರಸ್ತುತ ಲಲಿತ ಪ್ರಬಂಧಗಳ ಸಂಕಲನದಲ್ಲಿ ದಿನನಿತ್ಯ ಜೀವನದ ಆಳ-ಅಗಲಗಳನ್ನು ಶೋಧಿಸಿರುವುದು ಬೌದ್ಧಿಕ ಧ್ಯಾನವಾಗಿ ಹೊರಹೊಮ್ಮಿದೆ. ಧಾರವಾಡದ ಸಾಹಿತ್ಯ ಸಂಸ್ಕೃತಿಯಲ್ಲಿ ಒಡನಾಡಿದ ವಾಡಪ್ಪಿ ಅವರ ಚಿಂತನೆ ಎಷ್ಟು ಸ್ಥಳೀಯವಾಗಿದೆಯೋ ಅಷ್ಟೇ ವಿಶ್ವಾತ್ಮಕವಾಗಿಯೂ ಇದೆ.
ವಿವಿಧ ದೃಷ್ಟಿಕೋನಗಳಿಂದ ಸಾಮಾಜಿಕ ಜೀವನವನ್ನು ಅನಾವರಣಗೊಳಿಸುವ, ವಿಭಿನ್ನ ವ್ಯಕ್ತಿತ್ವಗಳನ್ನು ಚಿತ್ರಿಸುವ, ಸಮಕಾಲೀನ ದೃಷ್ಟಿಯಿಂದ ಗತವನ್ನು ನೋಡುವ, ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳನ್ನು ಶೋಧಿಸುವ ಇಲ್ಲಿನ ಪ್ರಬಂಧಗಳು "ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ, ಬದುಕನ್ನ ಧನಾತ್ಮಕವಾಗಿ ನೋಡುವ ಬಗೆ ಹೇಗೆ" ಎಂಬ ಪ್ರಶ್ನೆಯನ್ನು ಮುಂದಿಡುತ್ತವೆ. ಪ್ರತಿನಿತ್ಯದ ವಾಟ್ಸಅಪ್ ಫಾರ್ವಡ್್ರಗಳ ಆಕ್ರಮಣದಿಂದ ಇಂದಿನ ನಮ್ಮ ವ್ಯಕ್ತಿತ್ವ ಸಾವಧಾನವಾಗಿ ಬದುಕನ್ನು ನೋಡುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆಯೇನೂ ಎಂದೆನಿಸುತ್ತಿರುವಾಗ, ಇಂತಹ ಪುಸ್ತಕಗಳು ಮನದ ಭಾರವನ್ನು ಕಳಚುವುದಷ್ಟೇ ಅಲ್ಲದೆ, ಲೋಕವನ್ನು ವ್ಯವಧಾನದಿಂದ ಗ್ರಹಿಸುವ ಅವಕಾಶವನ್ನು ಒದಗಿಸುತ್ತವೆಂದು ಹೇಳಬಹುದು.
ಈಗಾಗಲೇ ವ್ಯಕ್ತಿತ್ವ ವಿಕಸನ ಕುರಿತು ಬರೆದ ಅಂಕಣಗಳ ಸಂಗ್ರಹ 'ಬೆಳಕಿನ ದಾರಿ' ಓದುಗರ ಮನವನ್ನು ಸೆಳೆದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡ ಆದ್ಯನಾಟಕಕಾರ ಶ್ರೀರಂಗರ ಕುರಿತು ಬರೆದ ಪುಸ್ತಕ ಅವರ ಬರಹದ ಎತ್ತರವನ್ನು ತೋರಿಸುತ್ತದೆ. ಶ್ರೀನಿವಾಸ ವಾಡಪ್ಪಿಯವರ ತಂದೆಯವರಾದ ಲಲಿತ ಪ್ರಬಂಧಕಾರ ದಿ. ಬಿ. ಆರ್. ವಾಡಪ್ಪಿ ಅವರ ಸಮಗ್ರ ಕೃತಿಗಳನ್ನ ಅವರ ಸಹೋದರ ರಂಗನಾಥ ವಾಡಪ್ಪಿಯವರೊಂದಿದೆ ಸಂಪಾದಿಸಿ ಹೊರತಂದಿದ್ದಾರೆ.
ಈ ಕೃತಿ ಲೋಕಚಿಂತನೆಗೆ ಬಳಸಿರುವ ಕನ್ನಡ ಹೆಚ್ಚು ಆತ್ಮೀಯವಾಗಿದೆ. ಸಹಜವಾಗಿದೆ. ಬಹುಶಃ ಬದುಕನ್ನು ಪ್ರಾಮಾಣಿಕವಾಗಿ ನೋಡಿದಾಗ, ಬಾಷೆಯನ್ನು ಪ್ರೀತಿಯಿಂದ ಒಲಿಸಿಕೊಂಡಾಗ ಇಂತಹ ಜೀವಂತಿಕೆಯ ಬರಹಗಳು ಹುಟ್ಟುತ್ತವೆಂದು ಕಾಣಿಸುತ್ತದೆ. ಸಾಹಿತ್ಯಕವೆಂಬುದು ಕಾಂತಾಸಂಹಿತೆ ಎಂಬ ಹಿರಿಯರ ನುಡಿಯನ್ನು ಶ್ರೀನಿವಾಸ ವಾಡಪ್ಪಿಯವರ ಈ ಲಲಿತ ಪ್ರಬಂಧಗಳು ನಿಜಗೊಳಿಸುತ್ತವೆ.
ಡಾ. ಎನ್. ಎಸ್. ಗುಂಡೂರ ಆಂಗ್ಲ ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾಲಯ
ಶ್ರೀನಿವಾಸ ವಾಡಪ್ಪಿ | Shrinivasa Vaadappi |
0 average based on 0 reviews.