
Category: | ಕನ್ನಡ |
Sub Category: | ವಿಜ್ಞಾನ |
Author: | ಎಲ್.ಪಿ. ಕುಲಕರ್ಣಿ | L P Kulakarni |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 970-01-904009-2-7 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಎಲ್.ಪಿ. ಕುಲಕರ್ಣಿ
ನಮ್ಮ ಆತ್ಮೀಯ ಸಹೃದಯಬಂಧು ಎಲ್.ಪಿ.ಕುಲಕರ್ಣಿ, ಬಾದಾಮಿ, ಒಬ್ಬ ಅದರ್ಶ ಶಿಕ್ಷಕ. ಇವರ ಚಟುವಟಿಕೆ ನಿತ್ಯ ಪಾದರಸದಂತೆ ಚೂಟಿಯೋ ಚೂಟಿ, ದಿನನಿತ್ಯದ ಕಾಲವನ್ನು ಹರಣ ಮಾಡದಲೇ ಹೂರಣವಾಗಿಸುವ ಪ್ರವೃತ್ತಿ ಇವರದು. ಓದು-ಬರಹ ಇವರ ನಿತ್ಯ ಅವಿಭಾಜ್ಯ ಅಂಗ. ದಿನ ನಿತ್ಯ ಓದುವುದು, ಬರೆಯುವುದು; ತನಗೆ ತಿಳಿದ ವಿಚಾರವನ್ನು ಮತ್ತೊಬ್ಬರಿಗೆ ತಿಳಿಸುವುದು; ಪುಟ್ಟ ಪುಟ್ಟ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಸಾರಸ್ವತ ಲೋಕಕ್ಕೆ ಜ್ಞಾನವನ್ನು ಪಸರಿಸುವ ವಿಜ್ಞಾನ ಬೋಧಕ ಇವರು ವಿಜ್ಞಾನ ಬುದ್ಧಿ, ತತ್ವ ಜ್ಞಾನಿ ಮನಸ್ಸು, ಕವಿ ಹೃದಯ ಮೂರನ್ನೂ ಮೇಳೆಸಿಕೊಂಡಿರುವ ಆತ್ಮೀಯ ನಮ್ಮ ಈ ಕುಲಕರ್ಣಿ ಜಟ್ಟಿಯಂತೆ ಕುಳಿತು ಗಟ್ಟಿತನದಿಂದ ವಿಜ್ಞಾನದ ವಿಚಾರಗಳನ್ನು ಭಟ್ಟಿ ಇಳಿಸುವ ಇವರ ಬರಹ ಓದುಗನ ಮೆದುಳಿಗೆ ವಿಚಾರ ಪ್ರಚೋದಕ್ಕೆ ವಿಜ್ಞಾನ ಬುದ್ದಿಗೆ, ವೈಚಾರಿಕ ತನಕ್ಕೆ ದಾರಿಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಜ್ಞಾನ ಸಾಹಿತ್ಯಕ್ಕೆ 'ಕಿರಿದರೋಳ್ ಹಿರಿದರ್ಥಮಮ್ ಅಡಕಿದಂತೆ' ಚಿಕ್ಕ ಚಿಕ್ಕ ಲೇಖನಗಳ ಮೂಲಕ ಚೊಕ್ಕ ತನದಿಂದ ಅಚ್ಚುಕಟ್ಟಾಗಿ ಬರೆಯುವ ಬರವಣಿಗೆ ಇವರಿಗೆ ಸಿದ್ದಿಸಿದೆ. ಕನ್ನಡ ತಾಯಿಯ ನಾಡಿನಲ್ಲಿ ಅದರಲ್ಲೂ ಕನ್ನಡದಲ್ಲಿ ಇವರ ಬರವಣಿಗೆಯ ಮೆರವಣಿಗೆ ನಿತ್ಯೋತ್ಸವದಂತೆ ಸಂಭ್ರಮದಿಂದ ಸಾಗುತ್ತಿರಲಿ.
"ವಿಚಾರವನ್ನು ಬಿತ್ತು; ಕೃತಿಯನ್ನು ಬೆಳೆಸು.
ಕೃತಿಯನ್ನು ಬಿತ್ತು; ಸ್ವಭಾವವನ್ನು ಬೆಳೆಸು.
ಸ್ವಭಾವವನ್ನು ಬಿತ್ತು, ಚಾರಿತ್ರ್ಯವನ್ನು ಬೆಳೆಸು.
ಚಾರಿತ್ರ್ಯವನ್ನು ಬಿತ್ತು; ಭವಿಷ್ಯವನ್ನು ಬೆಳೆಸು" ಎನ್ನುವ ತತ್ವದಂತೆ ಅತ್ಮೀಯ ಕುಲಕರ್ಣಿಯ ಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ನಿಂತ ನೀರಾಗದೇ ನಿತ್ಯ ಪ್ರವಹಿಸುತ್ತಾ ಓದುಗರಿಗೆ ಸುಜ್ಞಾನದಿಂದ ಕಣ್ಣೆರೆಯುವಂತೆ ವಿಶ್ವಮಾನವತ್ವದ ಮೂಲಕ ಬದುಕುವ ಹಾದಿಗೆ ಕೈದೀವಿಗೆ ಎನಿಸಲಿ.
ಕನ್ನಡದ ಪೂಜಾರಿ
ಹಿರೇಮಗಳೂರು ಕಣ್ಣನ್
ಎಲ್.ಪಿ. ಕುಲಕರ್ಣಿ | L P Kulakarni |
0 average based on 0 reviews.