| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಜಯಲಕ್ಷ್ಮಿ ಬಿ | Jayalakshmi B |
| Publisher: | Jeerunde Books |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಜಾತಿ ಮತ್ತು ಅಸ್ಪೃಶ್ಯತೆಯ ಸಮಸ್ಯೆಯು ಧಾರ್ಮಿಕ ಸಮಸ್ಯೆಯಾಗಿರುವುದರಿಂದ ಇದಕ್ಕೊಂದು ಶಾಶ್ವತ ಪರಿಹಾರವನ್ನು ಧರ್ಮದಲ್ಲಿಯೇ ಹುಡುಕಬೇಕಾಗಿದೆ. ಪ್ರಮುಖ ಆಹಾರ ಉತ್ಪಾದಕರಾದ ಶೂದ್ರರ ಬಗ್ಗೆ ವೇದಗಳಲ್ಲಾಗಲೀ ಅಥವಾ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಾಗಲಿ ಅಲ್ಲಲ್ಲಿ ಚರ್ಚೆ ಬಿಟ್ಟರೆ ಇನ್ನೆಲ್ಲಿಯೂ ಹೆಚ್ಚು ಚರ್ಚೆಯಾಗಿಲ್ಲ. ದಲಿತರ ಬದುಕಿನ ಕಥೆಗಳು ಕೂಡ ಆ ಪಠ್ಯಗಳಲ್ಲಿ ಕಾಣಸಿಗುವುದಿಲ್ಲ. ಜಾತ್ಯತೀತತೆಯು ಗಂಭೀರ ತತ್ವಶಾಸ್ತ್ರವನ್ನು ತನ್ನ ಅವಶೇಷಗಳಡಿ ಹೂತುಹಾಕಿದೆ ಹಾಗೂ... ವೈದಿಕಧರ್ಮ ವೃದ್ಧಿ ಹೊಂದಲು ಮತ್ತು ವಿಸ್ತರಿಸಲು ಜಾತ್ಯಾತೀತ ಮೌನ ನೆರವಾಗುತ್ತದೆ. ಇಂತಹ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಒಂದೇ ಊಟದ ಮನೆಯೊಳಗೆ ಕುಳಿತು ಊಟ ಮಾಡದ ಹಿಂದೂ ಬ್ರಾಹ್ಮಣ-ಬನಿಯಾ ಸಸ್ಯಾಹಾರಿಗಳು ಮತ್ತು ಹಿಂದೂ ಶೂದ್ರ/ದಲಿತ/ಆದಿವಾಸಿಗಳು ಹೇಗೆ ತಾನೆ ಸ್ವರ್ಗದಲ್ಲಿ ಒಟ್ಟಾಗಿ ಬದುಕುತ್ತಾರೆ? ಸ್ವರ್ಗದಲ್ಲೇನಾದರೂ ಬೇರೆ ಊಟದ ಮನೆ ಇದೆಯಾ? ಶೂದ್ರರು ತಮ್ಮ ಮಾನಸಿಕ ಗುಲಾಮಗಿರಿಯಿಂದ ಹೊರಬರಲು ಮತ್ತು ತಮ್ಮದಾಗಿರುವುದನ್ನು ಸ್ಥಾಪಿಸಿಕೊಳ್ಳಲು ಆಧ್ಯಾತ್ಮಿಕ, ಸಾಮಾಜಿಕ, ಮತ್ತು ರಾಜಕೀಯವಾಗಿ ಕ್ರಿಯಾಶೀಲತೆಯಿಂದ ಕೂಡಿರುವ ಅಂಬೇಡ್ಕರ್ ಅವರ ಚಳುವಳಿಯಿಂದ ಸ್ಫೂರ್ತಿ ಪಡೆಯಬೇಕು. ದ್ವಿಜರು ಜಾತಿ ಮತ್ತು ಸಮುದಾಯಗಳ ಸಮಾನತೆಯ ಕಲ್ಪನೆಯನ್ನು ಅರ್ಥೈಸಿಕೊಳ್ಳದೇ ಹೋದರೆ ಭಾರತದಲ್ಲಿ ಅಂತರ್-ಯುದ್ಧಗಳು ಅಗತ್ಯವೆನಿಸಬಹುದು.
ಜಯಲಕ್ಷ್ಮಿ ಬಿ | Jayalakshmi B |
0 average based on 0 reviews.