| Category: | ಕನ್ನಡ |
| Sub Category: | ಕಾದಂಬರಿ |
| Author: | ಹೇಮಂತ್ ಪಾರೇರಾ | Hemanth Paarera |
| Publisher: | ನಂದಿತಾ ಪ್ರಕಾಶನ | Nandita Prakashana |
| Language: | Kannada |
| Number of pages : | 328 |
| Publication Year: | 2026 |
| Weight | 300 |
| ISBN | 9789391874193 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶಕುನದ ಹಕ್ಕಿ" ಕಾದಂಬರಿಯ ಕರ್ತೃವಾದ ಹೇಮಂತ್ ಪಾರೇರಾರವರು ಕೊಡಗಿನ ಕಾಡಂಚಿನಲ್ಲಿರುವ ಕ್ರಿಯಾಶೀಲ ಮನುಷ್ಯ.
ಪುಟ್ಟದಾದ ಕಾಫಿ ತೋಟದ ನಡುವಿನಿಂದ ಎದ್ದು ಬರುತ್ತಿರುವ ಪ್ರತಿಭೆ. ನಿಸರ್ಗದ ಮಡಿಲಿನಲ್ಲಿ ಬೆಳೆದ ಕಾರಣ ಅವರ ಬರಹಗಳಲ್ಲಿ ನಿಸರ್ಗದ ದಟ್ಟ ಪ್ರಭಾವವನ್ನು ಕಾಣಬಹುದು. ಈ ಕಾದಂಬರಿಯೂ ನಿಸರ್ಗದ ಮಡಿಲಿನಲ್ಲಿ ಜನ್ಮ ತಾಳಿದೆ. ನಗರವಾಸಿ ಓದುಗರಿಗೆ ಹೊಸ ಪರಿಸರದ ಪರಿಚಯವನ್ನು ಈ ಪುಸ್ತಕ ನೀಡಬಹುದು. ಲೇಖಕರು ಕವಿಯೂ ಆಗಿರುವ ಕಾರಣ ಅಲ್ಲಲ್ಲಿ ಕಾವ್ಯ ಛಾಯೆ ಕಂಡುಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
"ಮೌನಮುರಿದ ಕನವರಿಕೆಗಳು", "ಒಲವಿನ ಸವಾರಿ", "ಬೆಳ್ಳಿ ಗೆಜ್ಜೆ" ಕೃತಿಗಳ ಮೂಲಕ ಓದುಗರ ಮನಸ್ಸಿಗೆ ಹತ್ತಿರವಾದ ಲೇಖಕರು.ಮನುಷ್ಯ - ಸಂಬಂಧಗಳ ಆಳ ಮತ್ತು ಸಮಾಜದ ನೈಜ ಚಿತ್ರಣವನ್ನು ತಮ್ಮ ಬರಹಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.
ಹಳ್ಳಿಗಳಲ್ಲಿ ಸಮಯ ಕೊಲ್ಲಲು ಹಲವು ಹವ್ಯಾಸಗಳನ್ನು ಜನರು ಹೊಂದಿರುತ್ತಾರೆ. ಹವ್ಯಾಸಗಳು ಅತಿರೇಕಕ್ಕೆ ಹೋದಾಗ ಏನೇನು ಅನಾಹುತಗಳಾಗಬಹುದು ಎನ್ನುವುದನ್ನು ಲೇಖಕರು ಚಿತ್ರಿಸಿದ್ದಾರೆ. ಹೊರನೋಟಕ್ಕೆ ಕಾದಂಬರಿಯ ಘಟನೆಗಳು ಸಣ್ಣವು ಎಂದು ಆನಿಸಿದರೂ ಕೂಡ ಅಂತಿಮವಾಗಿ ತಲುಪುವ ಜಾಗವಿದೆಯಲ್ಲ, ಅದು ಬೆಚ್ಚಿ ಬೆಳೆಸುವಂತದ್ದು. ಸಣ್ಣ ಸಣ್ಣ ಘಟನೆಗಳ ಎಳೆಯನ್ನು ಒಟ್ಟು ಮಾಡಿ ನೋಡಿದಾಗ ಅಲ್ಲೊಂದು ಆಶ್ಚರ್ಯ ಮತ್ತು ಭಯದ ಚಿಹ್ನೆ ಹುಟ್ಟುತ್ತದೆ. ವಿದ್ಯಾವಂತ ಕೃಷಿಕರ ಬದುಕಿನ ಹಲವು ಮಜಲುಗಳನ್ನು ಈ ಪುಸ್ತಕ ಸ್ವಾರಸ್ಯಕರವಾಗಿ ತೋರಿಸಿಕೊಡುತ್ತದೆ. ಒಮ್ಮೆ ಪುಸ್ತಕ ಓದಿ ಹೇಮಂತ್ ರವರಿಗೆ ಪ್ರತಿಕ್ರಿಯಿಸಿ.
ಭಾರದ್ವಾಜ ಕೆ. ಆನಂದತೀರ್ಥ ಹಿರಿಯ ಸಾಹಿತಿಗಳು, ಕೊಡಗು ಜಿಲ್ಲೆ
ಹೇಮಂತ್ ಪಾರೇರಾ | Hemanth Paarera |
0 average based on 0 reviews.