| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಅಪರ್ಣಾ ಲಹರಿ | Aparna Lahari |
| Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ | Sahityaloka Publication |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
-ನಾಲ್ಕು ದಿಕ್ಕುಗಳಲ್ಲಿರುವ ನಾಲ್ಕು ಲಿಂಗ, ಅದರ ಸ್ಥಳವನ್ನು ಪತ್ತೆ ಮಾಡಲು ನಾಲ್ಕು ತುಂಡಾದ ಭೂಪಟ. ಒಂದೊಂದೇ ತುಂಡನ್ನು ಹುಡುಕುತ್ತಾ ಅಪಾಯವನ್ನು ಎದುರಿಸುತ್ತಾ ಸಾಗುವ ಕುತೂಹಲಕಾರಿ ಕಥೆಯು ಇಲ್ಲಿದೆ ಐದನೇ ಲಿಂಗ ಎಲ್ಲಿದೆ? ಅದೇ ನಿರೀಕ್ಷೆಗೂ ಮೀರಿದ ಕುತೂಹಲ. ಪಂಚಭೂತ ಸಿದ್ಧಾಂತದಡಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಲಿಂಗಗಳ ಪ್ರತಿಷ್ಠಾಪನೆ ಮಾಡಿದವರು ಕನಿಷ್ಕ ಮಹರ್ಷಿಗಳು.
"ಅವಳು ನಡೆಯುತ್ತ ನಿಧಾನವಾಗಿ ಸಾಗಿದಳು. ಅವಳ ಕಾಲ ಗೆಜ್ಜೆಗಳ ನಾದಕ್ಕೆ ತಲೆದೂಗುವಂತೆ ಮರಗಳು ಅಲ್ಲಾಡಿದವು. ಮರಗಳಿಂದ ದಾರಿಯುದ್ದಕ್ಕೂ ಹೂಗಳು ಸುರಿಯಲಾರಂಭವಾಯಿತು. ಅವಳ ಕೋಮಲ ಪಾದಗಳು ಮಣ್ಣ ಮೇಲೆ ನೋಯದಂತೆ ಆ ಹೂಗಳು ತಮ್ಮನ್ನು ಹರಡಿಕೊಂಡವು. ಅಲ್ಲಿ ಅವಳು ನಡೆದ ದಾರಿಯೆಲ್ಲಾ ಅದ್ಯಾವುದೋ ಸುಗಂಧ, ಅವಳ ಆ ಕೇದಿಗೆಯ ನೋಟ ಅತ್ತಿತ್ತ ಸಾಗದೆ ಮುಂದೆ ಮಾತ್ರ ನೋಡುತ್ತಿತ್ತು".
ಇಂತಹ ಹಲವಾರು ವರ್ಣನೆಗಳು ಅಪರ್ಣ ಅವರ ಬರವಣಿಗೆಯ ಲೀಲಾಜಾಲ ಶೈಲಿಗೆ ಸಾಕ್ಷಿ, ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯನ್ನು ಉತ್ತಮ ನಿರ್ದೇಶಕರು ಯಾರಾದರೂ ನೋಡಿದರೆ ಇದನ್ನು ಒಂದು ಅದ್ಧೂರಿ, ರೋಮಾಂಚಕ ಚಲನಚಿತ್ರ ಮಾಡುವ ಆಸೆಪಟ್ಟಾರು. ಚಲನಚಿತ್ರವಾಗಬಹುದಾದ ಎಲ್ಲಾ ಅರ್ಹತೆ ಈ ಕಾದಂಬರಿಗೆ ಇದೆ.
ವಿ. ಮನೋಹರ್
ಖ್ಯಾತ ಸಂಗೀತ ನಿರ್ದೇಶಕರು (ಮುನ್ನುಡಿಯಿಂದ)
ಅಪರ್ಣಾ ಲಹರಿ | Aparna Lahari |
0 average based on 0 reviews.