| Category: | ಕನ್ನಡ |
| Sub Category: | ಕಾದಂಬರಿ |
| Author: | ಧನಪಾಲ ನಾಗರಾಜಪ್ಪ | Dhanapala Naagarajappa |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನನ್ನ ನೆತ್ತಿಯ ಮೇಲೆ ಏನೋ ವಿಸ್ಫೋಟವಾದಂತೆ ದೊಡ್ಡ ಶಬ್ದವಾಯಿತು. ಸಾವಿರಾರು 66 ಬಾವಲಿಗಳು ಒಮ್ಮೆಲೇ ಆಹಾರಕ್ಕಾಗಿ ಗುಹೆಯಿಂದ ಹೊರಗೆ ಬಂದಿದ್ದರಿಂದ ಇದ್ದಕ್ಕಿದ್ದಂತೆಯೇ ಕತ್ತಲೆ ಕವಿದಂತಾಯಿತು. ಅದರೊಂದಿಗೆ ಗಾಳಿಯ ತುಂಬಾ ಅಮೋನಿಯಾದ ವಾಸನೆ ವ್ಯಾಪಿಸಿತು. ನಾನು ಆಕಸ್ಮಿಕವಾಗಿ ತಲೆಯೆತ್ತಿ ನೋಡಿದೆ. ಅದು ಖರೀ ಕ್ಷಣಕಾಲವಷ್ಟೇ...! ಕೂಡಲೇ ನಾನು ಮಾಡುತ್ತಿದ್ದ ತಪ್ಪು ಅರಿವಾಗಿ ತಲೆ ತಗ್ಗಿಸಿದೆ. ಆದರೆ ಆಗಬೇಕಾಗಿದ್ದ ಅನಾಹುತ ಆ ಕ್ಷಣಕಾಲದಲ್ಲೇ ಆಗಿಹೋಗಿತ್ತು ಬಾವಲಿಗಳ ಮಲ 'ಗ್ಯಾನೋ' ತೇವಾಂಶದಿಂದ ಕೂಡಿದ ಮುದ್ದೆಯಂತೆ ನನ್ನ ಎಡಗಣ್ಣಿನ ಒಳಗೆ ಬಿದ್ದುಪಟ್ಟಿತ್ತು ಕಣ್ಣಿನೊಳಗೆ ಬೆಂಕಿಯ ಕಿಡಿಯೊಂದು ಬಿದ್ದಂತೆ ಭಗಭಗನೆ ಉರಿಯತೊಡಗಿತು. ತುಂಬಾ ದೊಡ್ಡ ಅಪಾಯದೊಳಗೆ ಸಿಲುಕಿದೆನೆಂದು ನನಗೆ ಕೂಡಲೇ ಅರಿವಾಯಿತು. ಭಯಂಕರವಾದ ರೋಗಗಳನ್ನು ಪಸರಿಸಬಲ್ಲಂತಹ ವೈರಸ್ಗಳುಳ್ಳ ಗ್ಯಾನೋದೊಂದಿಗೆ ನನ್ನ ಕಣ್ಣಿನ ಪೊರೆಗಳು ಸಂಪರ್ಕಕ್ಕೆ ಬಂದ ಮಹಾ ವಿಪತ್ಕರವಾದ ಕ್ಷಣ ಅದು!
ನಿಮ್ಮಲ್ಲಿ ಕೆಲವರನ್ನು ಬಿಟ್ಟರೆ ಹೆಚ್ಚಿನವರು ಮಾಸ್ಕುಗಳನ್ನೇ ಹಾಕಿಲ್ಲ. ಸಾಲದ್ದಕ್ಕೆ ಪಕ್ಕ ಪಕ್ಕದಲ್ಲೇ ಗುಂಪು ಗುಂಪಾಗಿ ನಡೆಯುತ್ತಿದ್ದೀರಿ. ಇದು ಎಷ್ಟು ಅಪಾಯಕಾರಿಯೋ ನಿಮಗೆ ಗೊತ್ತಾ? ನಿಮ್ಮಲ್ಲಿ ಯಾರಿಗಾದರೂ ಕರೋನಾ ರೋಗ ಬಂದಿದ್ದರೆ ಅದು ಎಲ್ಲರಿಗೂ ಹರಡುತ್ತದೆ. ಇಲ್ಲಿಂದ ನಿಮ್ಮನ್ನು ನಿಮ್ಮ ಊರುಗಳಿಗೆ ಹೋಗಲು ಬಿಟ್ಟರೆ ಅಲ್ಲೂ ಸಹ ಕರೋನಾವನ್ನು ಹರಡುತ್ತೀರಿ. ಕರೋನಾ ಎಷ್ಟು ಭಯಂಕವಾದುದ್ದೋ ಗೊತ್ತಾ? ಈಗ ಜನರು ಹೇಗೆ ಸಾಯುತ್ತಿದ್ದಾರೋ ಗೊತ್ತಾ? ಅನ್ಯಾಯವಾಗಿ ದಿನಕ್ಕೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ.ನನ್ನ ಮಾತು ಕೇಳಿ ನೀವೆಲ್ಲರೂ ಹಿಂದಕ್ಕೆ ಹೊರಟು ಹೋಗಿ.
ಕರೋನಾ ಸೋಂಕು ನಮಗೆ ಹರಡುವುದೋ ಇಲ್ಲವೋ ತಿಳಿಯದು. ಒಂದು ವೇಳೆ ಆ ಸೋಂಕು ನಮಗೆ ಹರಡಿದರೂ ಅದರಿಂದ ನಾವು ಸಾಯುತ್ತೇವೋ ಇಲ್ಲ ಬದುಕುಳಿಯುತ್ತೇವೋ ನಮಗೇನೂ ತಿಳಿಯದು. ಆದರೆ ಇಲ್ಲಿಂದ ಹಿಂದಕ್ಕೆ ಹೋದರಂತೂ ಹಸಿವಿನಿಂದಲೇ ನಾವು ಸತ್ತು ಹೋಗುತ್ತೇವೆ ಸರ್. ಹಸಿವು ಎಷ್ಟು ಭಯಂಕರವಾದುದ್ಯೋ ನಿಮಗೆ ತಿಳಿಯದು ಸರ್ ಅದನ್ನು ಅನುಭವಿಸಿರುವ ನಮಗೆ ಗೊತ್ತು ಆ ಕಷ್ಟ ಹಸಿವು ಕರೋನಾಗಿಂತಲೂ ಭಯಂಕರವಾದುದು.
ಧನಪಾಲ ನಾಗರಾಜಪ್ಪ | Dhanapala Naagarajappa |
0 average based on 0 reviews.