| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಕುಂ ವೀರಭದ್ರಪ್ಪ | Kum Veerabhadrappa |
| Publisher: | ಅಂಕಿತ ಪುಸ್ತಕ | Ankita Pustaka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸ್ವಾನುಭವ ಮತ್ತು ವೈನೋದಿಕ ದರ್ಶನದೊಂದಿಗೆ ಮಿಳಿತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲ್ಮ ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಲೇಖನಗಳ ಕಟ್ಟು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ರವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪರಿಚಯಿಸುತ್ತಿರುವಂತೆ ಅನಿಸುತ್ತದೆ. ಜಗತ್ತು ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಳಿಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ. -ಡಾ. ಎಚ್.ಎಸ್. ಸತ್ಯನಾರಾಯಣ
ಕುಂ ವೀರಭದ್ರಪ್ಪ | Kum Veerabhadrappa |
0 average based on 0 reviews.