| Category: | ಕನ್ನಡ |
| Sub Category: | ಕವನಗಳು |
| Author: | ಡಾ. ಶಾರದಾ ಮುಳ್ಳೂರ | Dr Sharada Mullura |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದೆಂಥಾ ಕ್ರೂರ ಮನಸ್ಥಿತಿ! ಅಂತ ಕ್ಷಣ ಓದುಗರು ದಿಗ್ಧಮೆಗೊಂಡರೆ, 'ಜೀವ ತುಂಬಬಲ್ಲ ಶಕ್ತಿ ನನಗಿತ್ತು' ಎಂದು ಕವಯತ್ರಿ ಮುಂದಿನ ಸಾಲಿನಲ್ಲಿ ಹೇಳಿ ಪ್ರೇಮದ ತಾಕತ್ತು, ಅಂತ:ಸತ್ವವನ್ನು ಮೆರೆಯುವುದು ಆಪ್ತವೆನಿಸುತ್ತದೆ.
'ಇಲ್ಲಿನ ರಚನೆಗಳು, ಬದುಕಿನಲ್ಲಿನ ನಾನಾ ಭಾವ ವಿನ್ಯಾಸಗಳು ಭ್ರಮೆಯೋ, ಮಾಯೆಯೋ..! ಈಡೇರದ ಆಸೆ ಆಕಾಂಕ್ಷೆಗಳ ತಂತಿ ಮೀಟುವ ಸ್ವರಾಪಸ್ವರ, ಸ್ವಗತ-ಸಾಂಗತ್ಯಕ್ಕೆ ಮೊರೆ ಹೋಗುವ ಹತಾಶ ಸ್ಥಿತಿಗತಿಗಳನ್ನು ಅನಾವರಣಗೊಳಿಸುತ್ತಲೇ, 'ಎಲ್ಲವೂ ಸ್ಪರ್ಶಕ್ಕೆ ನಿಲುಕುವುದಿಲ್ಲ, ಕೆಲವಷ್ಟು ನೋಟಕ್ಕಷ್ಟೆ 'ಮುಟ್ಟಿ ಬಿಟ್ಟರೆ ಇಬ್ಬನಿ ಒಡೆದು ಹೋಗುವುದು' ಎಂಬ ದಾರ್ಶನಿಕತೆಗೆ ಒಡ್ಡಿಕೊಳ್ಳುತ್ತವೆ.
ಬಳ್ಳಿಯ ತುದಿಯಲಿ ಅರಳಿದ ಹೂವು ಮೆಲ್ಲಗೆ ಹೊಯ್ದಾಡಿತು/ಒಳಸೇರಿ ದುಂಬಿ ಮಿಸುಕಾಡಿ ಅವಸರದಿ ಹೊರ ಹಾರಿತು' ಇಂತಹ ಪ್ರೇಮ ಪ್ರಣಯೋತ್ಕೃಷ್ಟ ಭಾವ ಪರಿಮಳ ಪಸರಿಸುವ, ಪ್ರಬುದ್ಧ ರೂಪಕ ಪ್ರತಿಮೆಗಳುಳ್ಳ ರಚನೆಗಳೊಂದಿಗೆ, ನೆನಪುಗಳನ್ನು ಅದೆಷ್ಟೇ ದಫನ್ ಮಾಡಿದರೂ ಅವು 'ಗೋರಿಯಿಂದೇಳುವ ಎಲುಬುಗಳ ಚೂರಿಯಂತೆ' ಚುಚ್ಚುವಂತಾಹದ್ದು.. ಎ೦ಬ೦ತಹ ಬುದ್ಧಿ ಹೇಳುವ, ಸಾಂತ್ವನಗೈಯುವ, ತನಗೆ ತಾನೇ ಸಂತೈಸಿಕೊಳ್ಳುವ ಎದೆದನಿಗಳನ್ನು ಪಿಸುಮಾತಿನಲ್ಲಿ ಪೋಣಿಸಿದ ಕವಿತೆಗಳು ಭರಪೂರ ಇವೆ
ಹಿರಿಯರಾದ ಡಾ. ಶಾರದಾ ಮುಳ್ಳೂರ ಒಂಥರಾ ಜಾಕ್ ಆಫ್ ಆಲ್ ಆದರೆ ಸವ್ಯಸಾಚಿ ಪ್ರತಿಭೆ. ಇಲ್ಲಿನ ಬಹುತೇಕ ಎಲ್ಲಾ ರಚನೆಗಳು ಗಜಲ್ ಪ್ರಕಾರದೊಂದಿಗೆ ಕಣ್ಣು ಮುಚ್ಚಾಲೆ. ಆಡಿದಂತಿವೆ. ಅತ್ಯುತ್ತಮ ಗಜಲ್ಗಳನ್ನಾಗಿಸುವ ಅವಕಾಶವನ್ನು ಕವಯಿತ್ರಿ ಕೈ ಚೆಲ್ಲಿದ್ದು ಆಶ್ಚರ್ಯ! ಹಠಕ್ಕೆ ಬಿದ್ದ ಮಗುವಿನಂತೆ, ಕೈಗೆಟುಕುವ- ಎಟುಕದ ಎಲ್ಲವನ್ನೂ ಹಿಂಬಾಲಿಸುವ, ಬೊಗಸೆಯೊಡ್ಡಿ ಅಸ್ವಾದಿಸಬಯಸುವ ಅವರ ಜೀವನ್ಮುಖಿ, ಅದಮ್ಮ ಜೀವನಪ್ರೀತಿಗೊಂದು ಸಲಾಮ್ ಹೇಳಲೇ ಬೇಕು.
ಗೋಪಾಲ ತ್ರಾಸಿ.
(ಕವಿ, ಸಾಹಿತಿ, ರಂಗಕರ್ಮಿ, ಮುಂಬೈ)
ಡಾ. ಶಾರದಾ ಮುಳ್ಳೂರ | Dr Sharada Mullura |
0 average based on 0 reviews.