| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ನಳಿನಿ ಟಿ. ಭೀಮಪ್ಪ | Nalini T Bheemappa |
| Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ | Sahityaloka Publication |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಾವು ಸಾಮಾನ್ಯವೆಂದುಕೊಳ್ಳುವ ಅನೇಕ ಸನ್ನಿವೇಶಗಳಲ್ಲಿ ನಳಿನಿಯವರು ತಮ್ಮ ಮಂತ್ರದಂಡದಿಂದ ಹಾಸ್ಯವನ್ನು ಕೊನರಿಸುವ ರೀತಿ ಎಂಥವರನ್ನೂ ಆಕರ್ಷಿಸುತ್ತದೆ. ಇಲ್ಲಿನ ಹೆಚ್ಚಿನ ಬರಹಗಳು ಬಹುತೇಕ ನಮ್ಮೆಲ್ಲರ ನಮ್ಮೆಲ್ಲರ ಅನುಭವಗಳೂ ಆಗಿರುವುದರಿಂದ ಅವರು ಓದುಗರೊಂದಿಗೆ ಆತ್ಮೀಯತೆ ಸಾಧಿಸುತ್ತಾರೆ.
ದೊಡ್ಡ ಪ್ರಸ್ತುತ ಸಂಕಲನದಲ್ಲಿ ಎಲ್ಲಾ ಲೇಖನಗಳೂ ಶುದ್ದ ಮನರಂಜನೆ ಒದಗಿಸುವಂಥವೇ. ನಮ್ಮ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುತ್ತಾ ಅದರ ನಿವಾರಣೆಯ ದಾರಿಗಳನ್ನು ಸೂಚ್ಯವಾಗಿ ಹೇಳುತ್ತವೆ. ಪ್ರಮಾಣದಲ್ಲಿ ಸತತವಾಗಿ ಬರೆದರೂ ಗುಣಮಟ್ಟ ಕೆಡದಂತೆ ನೋಡಿಕೊಂಡಿರುವುದು ನಳಿನಿಯವರ ಹೆಚ್ಚುಗಾರಿಕೆ. ಪರಿಸ್ಥಿತಿಯಿಂದಲೇ ಹೊಮ್ಮುವ ಹಾಸ್ಯ ತನ್ನಿಂದ ತಾನೇ ತನ್ನ ಸುತ್ತೆಲ್ಲ ಬೆಳಕನ್ನು ಚೆಲ್ಲುವಂತೆ ಇವರ ಹಾಸ್ಯ ಸಹಜವಾಗಿ ಅರಳುವ ಗುಣವುಳ್ಳದ್ದು.
ಹೀಗೆ ಧಾರವಾಡದ ಕುಸುಮವೊಂದು ನಗೆ ಮುಗುಳು ಬಿರಿದು ತನ್ನ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಬಗೆ ನಿಜಕ್ಕೂ ವಿಸ್ಮಯಕಾರಿ. ನಳಿನಿ ಅವರು ದೈನಂದಿನ ಆಗುಹೋಗುಗಳಿಗೆ ಸ್ಪಂದಿಸುವ ರೀತಿ ತುಂಬಾ ತಾಜಾ. ಆದ್ದರಿಂದಲೇ ಅದರಲ್ಲಿ ಹೊಸತನವಿದೆ, ನೈಜತೆ ಇದೆ. ಲೇಖಕಿಯ ಬರವಣಿಗೆಯ ಲವಲವಿಕೆ ಎಂದೂ ಮಾಸದಿರಲಿ. ಬಹಳ ಕಾಲ ಇಂತಹ ನಗೆ ಬಗ್ಗೆಗಳು ನಮ್ಮ ಮಧ್ಯೆ ಚಿಮ್ಮುತ್ತಾ ಜೀವನವನ್ನು ಹಸಿರಾಗಿಡಲಿ ಎಂದು ಹಾರೈಸುವೆ.
ಸುಮಾ ರಮೇಶ್ ಲೇಖಕಿ, ಹಾಸನ
ನಳಿನಿ ಟಿ. ಭೀಮಪ್ಪ | Nalini T Bheemappa |
0 average based on 0 reviews.