| Category: | ಕನ್ನಡ |
| Sub Category: | ಕಾದಂಬರಿ |
| Author: | kavya Kadame Nagarakatte |
| Publisher: | Jeerunde Books |
| Language: | Kannada |
| Number of pages : | |
| Publication Year: | 2025 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಮ್ಮೊಡನೆ ಜೈವಿಕವಾಗಿ ಹೆಣೆದುಕೊಂಡಿರದ ಆದರೆ ನಾವು ಅನಿವಾರ್ಯವಾಗಿ ಕಟ್ಟಿಕೊಂಡ ಬದುಕಿನ ದೈನಿಕ ಲಯಗಳಲ್ಲಿ ಏನನ್ನೊ ಹುಡುಕುವುದು; ಅನೂಹ್ಯವಾದ, ಅತೀತವಾದ ಹಾಗೆಯೇ ಅಗಮ್ಯವಾದ ಮತ್ತಾವುದೋ ಸೆಳೆತಕ್ಕೆ ಈ ದೈನಿಕ ಲಯಗಳ ನಡುವೆ ಸಿಲುಕುವುದು; ಈ ಎರಡು ತುಯ್ತಗಳ ನಡುವೆ ಸಾಗುವ ಕಥನವಿದು. ಈ ಸೆಳೆತ ಕಾಣದುದರ ಎಡೆಗಿನ ತುಯ್ತವೋ ಅಥವಾ ಕಳೆದ ಅನುಭವವೊಂದರ ಮರುಕಳಿಕೆಯೋ ಎಂಬ ದ್ವಂದ್ವ ಕಾಣುತ್ತದೆ. ದೈನಿಕ ಲಯಗಳ ನಿರೂಪಣೆಯಲ್ಲಿ ನಿರೂಪಕರು ಹೊರಗೆ ನಿಂತು ನೋಡುವ, ಮತ್ತು ಒಳಹೊಕ್ಕು ವಿವರಿಸುವುದನ್ನು ಎಚ್ಚರದಿಂದ ನಿವಾರಿಸಿಕೊಳ್ಳುವ ನೆಲೆಯನ್ನು ಅನುಸರಿಸುತ್ತಾರೆ. ಆದರೆ ಈ ದೈನಿಕ ಲಯಗಳ ನಡುವೆ ತಲೆಯೆತ್ತುವ ದೂರದ ಕರೆಯು ಪದಗಳಲ್ಲಿ, ಕವಿತೆಗಳಲ್ಲಿ, ನಾದದಲ್ಲಿ ಮೈಮುರಿದೇಳುತ್ತಿರುತ್ತದೆ. ಈ ಸೆಳೆತದ ಉತ್ಕಟತೆಗಳು ಒಂದು ಕಡೆ. ಆ ದೂರದ ಕರೆಯು ವಾಸ್ತವವಾಗಿ ಮೈದಳೆಯುವಾಗಿನ ಅನುಭವದಲ್ಲಿ ದಿಟ ಸಟೆಗಳ ನಡುವಣ ಗಡಿಗೆರೆಗಳು ಅಳಿಸಿ ಹೋಗುವುದು ಇನ್ನೊಂದು ಕಡೆ. ಈ ಎರಡು ತುದಿಗಳ ನಡುವಣ ಶೋಧವೇ ಈ ಕಾದಂಬರಿಯ ಗುರಿ ಎಂದು ತಿಳಿದಿರುವೆ. ಅನುಭವ ಕಥನದ ನುಡಿಗಟ್ಟಿಗೂ ಅನುಭವ ಮಂಥನದ ನುಡಿಗಟ್ಟಿಗೂ ಇಲ್ಲಿ ಅಪಾರ ವ್ಯತ್ಯಾಸವಿದೆ. ಅನುಭವ ಕಥನದಲ್ಲಿ ಲೋಕದ ಬಿಂಬವಾಗಲು ನುಡಿಯು ಹವಣಿಸುತ್ತದೆ. ಆದರೆ ಅನುಭವ ಮಂಥನದಲ್ಲಿ ನುಡಿಯು ಮೈದಳೆಯುವ ಮೂಲಕವೇ ಅನುಭವವು ಆಕಾರ ಪಡೆಯುತ್ತದೆ. ಇದೇ ಕಾರಣದಿಂದ ಈ ಎರಡನೆಯ ನೆಲೆಯ ನಿರೂಪಣೆಯು ತೀವ್ರಗೊಂಡಾಗ ಕವಿತೆಗಳಾಗಿ ಮಾರ್ಪಡುವುದನ್ನು ಕಾಣುತ್ತೇವೆ. ಅನುಭವ ಶೋಧದ ಹೊಸ ಮಾದರಿಯನ್ನು ಈ ಕಾದಂಬರಿಯಲ್ಲಿ ಭಾಷಿಕವಾಗಿ ಶೋಧಿಸಿರುವ ಕಾವ್ಯಾ ಕಡಮೆಯವರನ್ನು ಅಭಿನಂದಿಸಲೇಬೇಕು. ಕೆ. ವಿ. ನಾರಾಯಣ
kavya Kadame Nagarakatte |
0 average based on 0 reviews.