Delivery between 2-8 Days
No returns accepted. Please refer our full policy
Your payments are 100% secure
ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ
ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ
ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ
ಆಸಕ್ತಿ ಚಿಕ್ಕಂದಿನಿಂದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ
ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು
ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು
ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ .
- ಶ್ರುತಿ ಬಿ.ಆರ್
Shruti B R |
0 average based on 0 reviews.