| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ ಡಿ ಎಸ್ ಶ್ರೀನಿವಾಸ್ ಪ್ರಸಾದ್ | Dr D S Sreenivas Prasad |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9789348 355102 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬದುಕು ಅನಿಶ್ಚಿತತೆಗಳ ಸಾಗರ; ಆದರೆ ಆ ಸಾಗರವನ್ನು ಈಜುವ ಛಲವೊಂದಿದ್ದರೆ ಅಲೆಗಳೂ ಮೆಟ್ಟಿಲಾಗುತ್ತವೆ. ಸೋಲಿನ ಸುಳಿಯಲ್ಲಿ ಸಿಲುಕಿ ಕೈಚೆಲ್ಲಿ ಕುಳಿತವರಿಗೆ ಭರವಸೆಯ ಹಸ್ತ ಚಾಚುವ ಅದ್ಭುತ ಕೃತಿ 'ಬಿದ್ದು ಮೇಲೆದ್ದವರು. ಇಲ್ಲಿ ಕೃತಿಕಾರರಾದ ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಪರಿಚಯಿಸುವ ವ್ಯಕ್ತಿಗಳು ಕೇವಲ ಸಾಧಕರಲ್ಲ; ಅಸಾಧ್ಯವಾದುದನ್ನು ಅಪೂರ್ವ ಚೇತನಗಳು. ಸುಸಾಧ್ಯವಾಗಿಸಿದ
ಕಿತ್ತಳೆ ಹಣ್ಣು ಮಾರುತ್ತಲೇ ಪದ್ಮ ಪಡೆದ ಹರೇಕಳ ಹಾಜಬ್ಬ, ಅಪಘಾತದಲ್ಲಿ ಕಾಲು ಕಳೆದುಕೊಂಡರೂ ವಿಶಪಸಿದ ವಿಶ್ವಪ್ರಸಿದ್ಧ ನೃತ್ಯಗಾರ್ತಿಯಾದ ಸುಧಾಚಂದ್ರನ್, ಗಣಿತಲೋಕದ ಮಾನವ ಕಂಪ್ಯೂಟರ್ ಶಕುಂತಲಾ ದೇವಿ, ಕಾಲಿಲ್ಲದಿದ್ದರೂ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಹಾಗೂ ತರಕಾರಿ ಮಾರುತ್ತಲೇ ಸಿ.ಎ. ಪಾಸಾದ ಸುದರ್ಶನ್ ನಿಕಂ... ಹೀಗೆ ಇಲ್ಲಿನ ಪ್ರತಿಯೊಂದು ವ್ಯಕ್ತಿಚಿತ್ರವೂ ಕಣ್ಣಂಚನ್ನು ತೇವಗೊಳಿಸಿ, ಎದೆಯೊಳಗೆ ಆತ್ಮವಿಶ್ವಾಸದ ಕಿಚ್ಚು ಹಚ್ಚುತ್ತದೆ. ಬಡತನ, ಅಂಗವೈಕಲ್ಯ ಹಾಗೂ ವೈಫಲ್ಯಗಳನ್ನು ಮೆಟ್ಟಿ ನಿಂತ ಇವರ ಸಾಹಸಗಾಥೆ ಇಂದಿನ ಪೀಳಿಗೆಗೆ ಬದುಕಿನ ದೊಡ್ಡ ಪಠ್ಯಪುಸ್ತಕ.
ಈ ಕೃತಿಯ ಸೃಷ್ಟಿಕರ್ತ ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಸ್ವತಃ ಅಕ್ಷರಲೋಕದ ಅನ್ವೇಷಕರು. ಕಳೆದ ಎರಡೂವರೆ ದಶಕಗಳಿಂದ ಅಧ್ಯಾಪನ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು. 1000ಕ್ಕೂ ಅಧಿಕ ಲೇಖನ ಹಾಗೂ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
"ಬೀಳುವುದು ಅಪರಾಧವಲ್ಲ, ಆದರೆ ಬಿದ್ದಲ್ಲೇ ಇರುವುದು ಅಕ್ಷಮ್ಯ" ಎಂಬ ಮಾತಿಗೆ ಅನ್ವರ್ಥವಾಗಿರುವ ಈ ಪುಸ್ತಕ, ಪ್ರತಿ ಮನೆಯ ಜ್ಞಾನದ ಗುಡಿಯಲ್ಲಿ ಇರಬೇಕಾದ ಅಕ್ಷರ ಬುತ್ತಿ. ಸೋಲನ್ನು ಗೆಲುವಾಗಿಸುವ ಸ್ಫೂರ್ತಿಯ ಹಾದಿಗೆ ಇದೊಂದು ಅತ್ಯುತ್ತಮ ದಾರಿದೀಪ.
-ರೂಪಾ ಗುರುರಾಜ್
ಮಾಧ್ಯಮ ವೃತ್ತಿಪರರು, ಅಂಕಣಗಾರ್ತಿ
ಡಾ ಡಿ ಎಸ್ ಶ್ರೀನಿವಾಸ್ ಪ್ರಸಾದ್ | Dr D S Sreenivas Prasad |
0 average based on 0 reviews.