ಮಹಾಮಾಯಿ
Original price was: ₹ 70.₹ 62Current price is: ₹ 62.
Book Details
Weight | .2 kg |
---|---|
Author | Dr Chandrashekhara Kambara |
Page Nos | 68 |
ISBN | 5551234010793 |
Publications | Ankita Pustaka |
![](https://veeralokabooks.com/wp-content/uploads/2023/03/CHANDRASEKHAR-B_KAMBARA.jpg)
SYNOPSIS
ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಜಗತ್ತಿನಾದ್ಯಂತ ಸಾಹಿತ್ಯದ ವಸ್ತುವಾಗಿದೆ. ಮಾರ್ಕಂಡೇಯ ಪುರಾಣದಲ್ಲಿ ಅದನ್ನು ಭಕ್ತಿಯ ಮೂಲಕ ಸಾಧಿಸಲಾಗುತ್ತದೆ. ಸಾವಿತ್ರಿ ಕತೆಯಲ್ಲಿ ಜ್ಞಾನದ ಮೂಲಕ, ಹರ್ಕ್ಯುಲೆಸ್ ಪುರಾಣದಲ್ಲಿ ಬರೇ ಶಾರೀರಿಕ ಶಕ್ತಿಯಿಂದ ಈ ವಸ್ತುವಿಗೆ ಬಹಳ ಸಂಕೀರ್ಣವೂ, ನವೀನವೂ ಆದ ತಿರುವನ್ನು ‘ಮಹಾಮಾಯಿ’ ನಾಟಕ ನೀಡಿದೆ. ಇದರಲ್ಲಿ ಪೂರ್ವ ನಿಗದಿತವಾದ ಸಾವು ಮುಟ್ಟದ ಹಾಗೆ ರಾಜಕುಮಾರಿಯನ್ನು ಕಾಪಾಡುವುದು ಕಥಾನಾಯಕನ ವೈದ್ಯಕೌಶಲವಲ್ಲ; ಪ್ರೇಮ.
‘ಮಹಾಮಾಯಿ’ಯಲ್ಲಿ ಕಂಬಾರರು ನಾಟಕ, ನಿರೂಪಣೆ, ಕಾವ್ಯ- ಹೀಗೆ ಮೂರು ಮಾದರಿಗಳನ್ನು ಏಕತ್ರಗೊಳಿಸಿದ್ದಾರೆ. ಬೇರೆ ಮೂಲಗಳಿಂದ ವಿಸ್ಮಯಕಾರಿಯಾದ ಸಂಕೇತಗಳ ಸರಮಾಲೆಯೇ ಇಲ್ಲಿ ಕಂಡುಬಂದಿದ್ದು, ಅದರ ದೃಶ್ಯಯ ಹಾಗೂ ಕಾಲ್ಪನಿಕ ಶಕ್ತಿಯನ್ನು ಗಮನಿಸಿದರೆ ಕನ್ನಡ ನಾಟಕಗಳಲ್ಲಿ ಏಕೆ, ಭಾರತೀಯ ನಾಟಕಗಳಲ್ಲೇ ಇದಕ್ಕೆ ಸರಿಸಮಾನವಾದ ಇನ್ನೊಂದು ಕೃತಿ ಇದೆ ಎಂದು ಅನ್ನಿಸುವುದಿಲ್ಲ.
ಈ ನಾಟಕ ಕಂಬಾರರ ಅತ್ಯಂತ ಯಶಸ್ವೀ ಕೃತಿಗಳ ಸಾಲಿಗೆ ಸೇರುತ್ತದೆ. ಪಾಶ್ಚಾತ್ಯ ಮಾದರಿಗಳನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು ದೇಶೀಯ ಮಿಥ್ ಹಾಗೂ ಸಂಕೇತಗಳನ್ನು ಬಳಸಿಕೊಳ್ಳುವ ಮೂಲಕ ಈ ನಾಟಕ ಹೊಸ ದಾರಿ ತೆರೆದಿದೆ. ಆಫ್ರಿಕನ್ ಸಂದರ್ಭದಲ್ಲಿ ವೋಲೆ ಸೋಯಿಂಕಾನ ಸಾಧನೆಯಿದ್ದಂತೆ ಕನ್ನಡದಲ್ಲಿ ಕಂಬಾರರ ಸಾಧನೆಯಿದೆ.
ಜಿ ಎಸ್ ಆಮೂರ
ABOUT AUTHOR
Opinion of Others
There are no others opinion yet.
Reviews
There are no reviews yet.