ರಾಯಲ ಸೀಮಾ ಕಥೆಗಳು
Original price was: ₹ 160.₹ 142Current price is: ₹ 142.
Book Details
Weight | .2 kg |
---|---|
Author | Kum Veerabhadrappa |
Page Nos | 197 |
ISBN | 9789354562259 |
Publications | Sapna |
SYNOPSIS
ಡಾ. ತುಮ್ಮಲ ರಾಮಕೃಷ್ಣ ಕುಪ್ಪಂನಲ್ಲಿರುವ ದ್ರಾವಿಡನ್ ವಿಶ್ವವಿದ್ಯಾಲಯದ ಕುಲಪತಿಗಳು. ಇವರು ಹಲವು ವಿಶ್ವವಿದ್ಯಾಲಯಗಳಲ್ಲಿ, ಪ್ರತಿಷ್ಠಿತ ಸಭೆ ಸಮಾರಂಭಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ, ತಮ್ಮ ನೂರಾರು ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ್ದಾರೆ, ತಮ್ಮ ಕ್ಷೌರಿಕ ಸಮುದಾಯದ ಸ್ವಾಭಿಮಾನವನ್ನು ಬೆಳಗಲು ಶ್ರಮಿಸಿದ್ದಾರೆ. ಈ ನಮ್ಮ ತುಮ್ಮಲ ರಾಮಕೃಷ್ಣ ಹೆಸರಾಂತ ಕಥೆಗಾರರು ಸಹ. ಇವರು ಬರೆದಿರುವುದು ಕಡಿಮೆ, ಆದರೆ ಇವರ ಖಾತೆಯಲ್ಲಿರುವ ಕಥೆಗಳು ವಿಮರ್ಶಕರ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಕಥೆಗಳಲ್ಲಿ ಕುಲಕಸುಬುಗಳ ಅವನತಿಯ ಚಿತ್ರಣವಿದೆ. ಶೋಷಿತ ಸಮುದಾಯಗಳ ಸಂಕಟಗಳ ಅನುರಣನವಿದೆ. ರಾಯಲಸೀಮಾ ಪ್ರಾಂತದ ಬದುಕಿನ ವಿವಿಧ ನಮೂನೆಗಳಿವೆ, ಈ ಸಮಾಜ ಅಮೂಲಾಗ್ರ ಬದಲಾಗಬೇಕೆಂಬ ಅದಮ್ಯ ಹಂಬಲವಿದೆ, ಚಿತ್ತೂರು ಕಡೆಯ ಜಮೀನ್ದಾರಿ ವ್ಯವಸ್ಥೆಯ ಹಲವು ಮುಖಗಳ ಚಿತ್ರಣವಿದೆ. ಪ್ರತಿ ಕಥೆಯ ಶೈಲಿ ಮನೋಜ್ಞವಾಗಿದೆ.
ABOUT AUTHOR
Opinion of Others
There are no others opinion yet.
Reviews
There are no reviews yet.