ಕುಂ. ವೀರಭದ್ರಪ್ಪ

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಕುಂ.ವೀರಭದ್ರಪ್ಪ. ಕುಂ.ವಿ ಎಂದೇ ಖ್ಯಾತಿ ಘಳಿಸಿರುವ ಕುಂ.ವೀರಭದ್ರಪ್ಪ ಅಕ್ಟೋಬರ್ 1. 1953ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕೊಟ್ಟೂರಿನಲ್ಲಿ ಕುಂಬಾರ ಹಾಲಪ್ಪ ಹಾಗೂ ತಾಯಿ ಕೊಟ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ್ರು. ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ.ವೀರಭದ್ರಪ್ಪ ಅವರು ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಹಾಗೂ ನುಡಿಗಟ್ಟುಗಳಿಂದ. ಕುಂ.ವೀ ಲೇಖನಗಳು ಅದೆಷ್ಟರ ಮಟ್ಟಿಗೆ ಖ್ಯಾತ ಘಳಿಸಿವೆ ಎಂಬುದಕ್ಕೆ ಕನ್ನಡದ ಕೆಲವೊಂದು ಸಿನಿಮಾಗಳೇ ಸಾಕ್ಷಿ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಟನೆಯ ‘ಮನ ಮೆಚ್ಚಿದ ಹುಡುಗಿ’ ಸಿನಿಮಾ ಕುಂ.ವೀ ಅವರ ಭೇಟೆ ಕಾದಾಂಬರಿ ಆಧರಿಸಿದ ಚಿತ್ರ. ಬೇಲಿಯ ಹೂಗಳು ಕಾದಂಬರಿ ಆಧರಿಸಿ ದೊರೆ ಸಿನಿಮಾ, ಕೊಟ್ರೇಶಿ ಕನಸು, ಕೆಂಡದ ಮಳೆ ಸಿನಿಮಾಗಳು ಕುಂವಿ ಅವರ ಕುಂಚದಲ್ಲಿ ಅರಳಿ ಸಿನಿಮಾದ ಸ್ಪರ್ಶ ಪಡೆದುಕೊಂಡವುಗಳು. ಜೊತೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ ಕೂರ್ಮಾವತಾರ ಕುಂವಿ ಲೇಖನಿಯಲ್ಲಿ ಪುಸ್ತಕದ ಸ್ಪರ್ಶ ಪಡೆದುಕೊಂಡಿತ್ತು. ಕುಂ ವಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಕುಂ.ವಿ ಅವರನ್ನು ಅರಸಿಕೊಂಡು ಬಂದಿವೆ.