ಪಾಕಿಸ್ತಾನದ ಐ.ಎಸ್.ಐ

Original price was: ₹ 295.Current price is: ₹ 263.

SKU: Pakistanada ISI Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಪಾಕಿಸ್ತಾನದ ಬಾಹ್ಯ ಬೇಹುಗಾರಿಕಾ ದಳ ಐ.ಎಸ್‌.ಐ ತನ್ನ ಕ್ರಿಮಿನಲ್‌ ಕೃತ್ಯಗಳಿ೦ದಲೇ ಅಪಖ್ಯಾತಿಯನ್ನು ಪಡೆದಿದ್ದರೂ ಅದರ ಎಲ್ಲ ಚಟುವಟಕೆಗಳ ಬಗ್ಗೆ ಹೆಚ್ಚಿನ ವಿವರಗಳು ನಮಗೆ ಲಭ್ಯವಿರಲಿಲ್ಲ. ಆದರೆ ಇದೇ ಮೊದಲಬಾರಿಗೆ ಬೇಹುಗಾರಿಕಾ ವಿಷಯಗಳ ತಜ್ಞರಾದ ಡಾ.ಡಿ.ವಿ.ಗುರುಪ್ರಸಾದ್‌ ಈ ದಳವು ಹೊದ್ದಿದ್ದ ಮುಸುಕಿನ ಪರದೆಯನ್ನು ತೆರೆದು ಅದರ ನಿಜಸ್ವರೂಪವನ್ನು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

1948ರಲ್ಲಿ ತಾನು ಸ್ಥಾಪನೆಗೊ೦ಡಾಗಿನಿ೦ದ 2024ರ ಜೂನ್‌ವರೆಗೆ ಐ.ಎಸ್‌.ಐ ಭಾರತದಲ್ಲಿ ನಡೆಸಿರುವ ಇಲ್ಲವೇ ಪ್ರೋತ್ಸಾಹಿಸಿರುವ ಆತಂಕವಾದಿ ಕೃತ್ಯಗಳು, ಪಾಕಿಸ್ತಾನದ ಸೈನ್ಯದ ಜತೆ ಅದಕ್ಕಿರುವ ಸಂಬಂಧ, ಪಾಕಿಸ್ತಾನದ ರಾಜಕೀಯವನ್ನು ತನಗೆ ಬೇಕಾದಂತೆ ತಿರುಗಿಸಿ ತನ್ನ ಸ್ವಾರ್ಥಕ್ಕೆ ಅದು ಬಳಸಿಕೊಂಡಿರುವ ಪರಿ, ತನಗಾಗದವರನ್ನು ನಿರ್ದಯದಿಂದ ನಿರ್ನಾಮ ಮಾಡುವ ಅದರ ನಡೆಗಳು ಮುಂತಾದ ನಾವು ಕೇಳರಿಯದಿದ್ದ ಅನೇಕ ಕುತೂಹಲಕರ ಮಾಹಿತಿಗಳನ್ನು ಲೇಖಕರು ಹೆಕ್ಕಿ ತೆಗೆದು ನಮ್ಮ ಮುಂದಿಟಿದ್ದಾರೆ.

ಐ.ಎಸ್‌.ಐ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದನ್ನು ಮುನ್ನಡೆಸುವವರು ಯಾರು? ಆತಂಕವಾದಿ ಸಂಘಟನೆಗಳ ಜತೆಗೆ ಅದಕ್ಕಿರುವ ಸಂಬಂಧವೇನು? ಮುಂತಾದವುಗಳ ಬಗ್ಗೆ ತಿಳಿಯಬೇಕೆನ್ನುವವರಿಗೆ ಈ ಪುಸ್ತಕದಲ್ಲಿ ಎಲ್ಲ ಮಾಹಿತಿಯೂ ಸಿಗುತ್ತದೆ. ಕೇವಲ ಭದ್ರತೆ, ಬೇಹುಗಾರಿಕೆ ಮತ್ತು ವಿದೇಶಾಂಗ ವ್ಯವಹಾರಗಳ ವಿಷಯಗಳ ಬಗ್ಗೆ ಆಸಕ್ತಿ ಹೊ೦ದಿರುವವರಲ್ಲದೆ ಸಾಮಾನ್ಯ ಓದುಗನೂ ಓದಲೇಬೇಕಾದ ಈ ಕುತೂಹಲಕಾರಿ ಪುಸ್ತಕ ಒ೦ದು ಆಕರ ಗ್ರಂಥವಾಗಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಒಂದು ಮಹತ್ತರ ಕೊಡುಗೆಯಾಗಿದೆ.

ABOUT AUTHOR

1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಪಾಕಿಸ್ತಾನದ ಐ.ಎಸ್.ಐ”

Your email address will not be published. Required fields are marked *

Related Products