ಜೈಲು ಕತೆಗಳು

 151

SKU: Jailu Kategalu Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
Publications

SYNOPSIS

ಈ ಪುಸ್ತಕದಲ್ಲಿ ಒಟ್ಟು ಇಪ್ಪತ್ತ ಮೂರು ಕಥನಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರೂಪಣೆಯ ಧಾಟಿಯಲ್ಲಿ ಮತ್ತು ಕಥನದ ಉದ್ದೇಶದಲ್ಲಿ ಕೂಡ ಇವು ವಿಭಿನ್ನವಾಗಿ, ಏಕತಾನತೆಯನ್ನು ಹೊಂದಿಲ್ಲದೇ ಇರುವುದು ವಿಶೇಷ *. ಈ ಕಥನಗಳು ಎಲ್ಲಿಯೂ ಬೋರ್ ಹೊಡೆಸದೇ ಸರಾಗವಾಗಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲ ಕೆಲವೊಂದು ಕೌತುಕದ ಕಥನಗಳಾಗಿಯೂ ಓದಿಸಿಕೊಂಡು ಹೋಗುತ್ತವೆ. ಆದರೆ ಈ ಎಲ್ಲ ಸಾಹಿತ್ಯಕ ಮೆಚ್ಚುಗೆಯನ್ನೂ ಮೀರಿ, ಕೃತಿಕಾರನನ್ನೂ ಮೀರಿ ನಿಲ್ಲುವ ಗುಣ. ಶಕ್ತಿ ಎರಡೂ ಈ ಕೃತಿಗಿರುವುದು ವಿಶೇಷ. ಅದು ಬಹುಶಃ ಈ ಕೃತಿ ಮೌನವಾಗಿ ಆಗ್ರಹಿಸುವ, ನಮಗೆ ನಾವೇ ಹೇಳಿಕೊಳ್ಳಬೇಕಾದ ಮತ್ತು ನಮಗೆ ಕೊಟ್ಟುಕೊಳ್ಳಬೇಕಾದ ಕೆಲವು ಪ್ರಶ್ನೆಗಳಿಗಾಗಿ ಎನಿಸುತ್ತದೆ. ನಾವೇ
ಈ ಕೃತಿ ನಮ್ಮೆದುರು ತೆರೆದಿಡುವುದು ನಮಗೆ ತಿಳಿದಿಲ್ಲದ, ನಮಗೆ ತಿಳಿದಿರಬೇಕು ಎಂದು ಯಾವತ್ತೂ ಅನಿಸದ, ಆದರೆ ತೀರ ನಮಗೇ ಸಂಬಂಧಿಸಿದ ಮತ್ತು ನಮ್ಮ ಬದುಕಿನ ಯಾವ ಒಂದು ಸಣ್ಣ ತಿರುವೂ ಇದನ್ನು ನಮ್ಮದೇ ಆಗಿಸಿಬಿಡಬಹುದಾಗಿದ್ದ ಜಗತ್ತನ್ನು ಹಾಗಾಗಿಯೇ ಓದುತ್ತ ಓದುತ್ತ ನಮ್ಮೊಳಗೇ ಛಳ್ಳೆನ್ನಿಸುವ ಒಂದು ನಡುಕವನ್ನು ಇದು ಹುಟ್ಟಿಸಿದರೆ ಅಚ್ಚರಿಯೇನಿಲ್ಲ
ಇವು ಸದಾ ಕಾಲ ಕಾಡುತ್ತಲೇ ಇರುವ ಸತ್ತವರ ನೆರಳಿನಂತೆ, ನಮ್ಮೊಂದಿಗೇ ಇರತಕ್ಕ ಪ್ರಶ್ನೆಗಳು ಎನ್ನುವುದು ನಿಜ ಆದರೆ ಉತ್ತರ ಇರದಿದ್ದರೂ ಕೂಡ ಇಂಥ ಪ್ರಶ್ನೆಗಳ ಜೊತೆ ಆಗಾಗ ಒಡನಾಡುವುದು, ಇವುಗಳಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವುದು ಮುಖ್ಯ. ಇದು ಕೆ ಸತ್ಯನಾರಾಯಣರ ಕೃತಿಯ ಬಹುಮುಖ್ಯ ಕಾಣೆ. ಇದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕು.
– ನರೇಂದ್ರ ಪೈ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಜೈಲು ಕತೆಗಳು”

Your email address will not be published. Required fields are marked *