ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾಶೂನ್ಯತೆ ಅನುಪಮಾ ತಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಇಲ್ಲಿ ನಮಗೆ ಎದುರಾಗುವ ಎಲ್ಲಾ ಪಾತ್ರಗಳು ದಿನನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿಬರುವ ಆಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು; ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕಥೆಗಳೂ ಊರು ಮನೆಗಳ ಆವರಣವನ್ನೂ ಕಾಲದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು. ಜಿ ರಾಜಶೇಖರ