nil
#
ಅಡುಗೆ ಮನೆಯಲ್ಲೊಂದು ಹುಲಿ ಒಂದು ಸುಳ್ಳಿನ ಆಟವನ್ನು ಅನಾವರಣ ಮಾಡಿಕೊಡುವಂತಹ ನಾಟಕ. ಹಾಗೆ ನೋಡಿದರೆ ನಾಟಕ ಎನ್ನುವುದೇ ಒಂದು ಸುಳ್ಳಿನ ಆಟ. ಆದರೆ ಈ ಆಟ ಸುಳ್ಳಿನ ಮೂಲಕ ಸತ್ಯವನ್ನು ಶೋಧಿಸುವಂತಹದ್ದು. ಹೀಗೆ ಸುಳ್ಳಿನ ಮುಖಾಂತರ ನಮ್ಮ ಸಮಾಜದ ಅನೇಕ ಸತ್ಯಗಳನ್ನು ಹುಡುಕುವ ಒಂದು ಅಪರೂಪದ ನಾಟಕ 'ಬಿ ಸುರೇಶರ ಅಡುಗೆ ಮನೆಯಲ್ಲೊಂದು ಹುಲಿ'
ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು. ಸಾಂಸ್ಕೃತಿಕ ಸಂಗತಿಗಳು. ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ. ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು. ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಫೂರ್ತಿದಾಯಕವಾಗಿರಬೇಕು, ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿ ಮುಖ್ಯ. ಉದ್ಯೋಗ, ಗೃಹಕೃತ್ಯ, ಸಂಸಾರ ನಿರ್ವಹಣೆಯ ಹೊಣೆಗಳ ನಡುವೆಯೂ ಬರಹಗಾರ್ತಿಯಾಗಿ ಓರ್ವ ಮಹಿಳೆ ಯಶಸ್ವಿಯಾಗಬಲ್ಲಳು ಎಂಬುದಕ್ಕೆ 'ಅಂತರಂಗದ ಸ್ವಗತ' ಕೃತಿಯೇ ಸಾಕ್ಷಿ.
ಅಂತರಿಯ ಒಂದು ದಿನ, ನಿಮಗೆ ಯಾವಾಗಲಾದರೂ ನಿಮ್ಮ ದಿನಚರಿ ಬೇಸರವಾಗಿದೆಯಾ? ಇಲ್ಲೊಬ್ಬಳು ಅಂತರಿ ಎನ್ನುವ ಇರುವೆಗೆ ಕೂಡ ದಿನಚರಿ ಬೇಸರವಾಗಿದೆ. ಆಗ ಅಂತರಿ ಏನು ಸಾಹಸ ಮಾಡಿದಳು ಎಂದು ತಿಳಿದುಕೊಳ್ಳಲು ಕಥೆ ಓದಿ.
Showing 91 to 120 of 5244 results