nil
ಡಾ. ಲಕ್ಷ್ಮಣ ವಿ. ಎ. ಬೆಳಗಾವಿ ಜಿಲ್ಲೆ ಅಥಣಿ (ಈಗ ಕಾಗವಾಡ) ತಾಲೂಕಿನ ಮೋಳೆ ಗ್ರಾಮದಲ್ಲಿ ೧೯೭೭ರಲ್ಲಿ ಜನನ, ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ ಪಿಯೂಸಿ ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ, ವೈದ್ಯಕೀಯ ಪದವಿ ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ, ಮೈಸೂರು ವಿ.ವಿ.ಯಿಂದ 'ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ'ದಲ್ಲಿ ಡಿಪ್ಲೋಮಾ ಪದವಿ ಮತ್ತು ಡಿಪ್ಲೋಮಾ ಇನ್ ಫಾರ್ಮಾಸಿ ತುಮಕೂರಿನ ಜಿಲ್ಲೆ ಕೊರಟಗೆರೆ ಕಾಲೇಜಿನಿಂದ, ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ Read More...
Nil
NA
#
ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು. ವಿದ್ವತ್ತಿನ ಗತ್ತು, ಕಾವ್ಯಪ್ರತಿಭೆಯ ಮೇಲರಿಮೆ, ಸಿಟ್ಟು, ಸೆಡವು, ಜಗಳಗಂಟಿತನ, ವಾಗ್ವಿಲಾಸದ ವೈಖರಿ, ಬಹುಶ್ರುತ ಆಸಕ್ತಿ, ಅಪಾರವಾದ ಜ್ಞಾನಾಕಾಂಕ್ಷೆ, ಜಗದೆಲ್ಲ ಚಟುವಟಿಕೆಗಳನ್ನು ಕಾವ್ಯ ಪರಿಪ್ರೇಕ್ಷ್ಯದಲ್ಲಿ ಕಾಣುವ, ಕಾಣಿಸುವ ಬಗೆ, ಮಗು ಸಹಜ ಮುಗ್ಧತೆ ಈ ಎಲ್ಲ ಗುಣಗಳ ಸಮ್ಮಿಲನದ ಗಾರುಡಿಗ ವ್ಯಕ್ತಿತ್ವ ಬೇಂದ್ರೆಯವರದು. ಇವರ ಬಗೆಗೆ ಪ್ರಚಲಿತದಲ್ಲಿರುವ ಕತೆಗಳನ್ನು, ಸಂಗತಿಗಳನ್ನು, ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿ ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣದಿಂದ ಎಚ್. ಎಸ್. ಸತ್ಯನಾರಾಯಣ ಅವರ 'ಅಂಬಿಕಾತನಯದತ್ತನ ಹಾಡ ಬೆಳುದಿಂಗಳು ನೋಡಾ...' ಎಂಬ ಕೃತಿ ಮಹತ್ವದ್ದು.
Showing 181 to 210 of 5100 results