#
nil
ವಸಾಹತುಪೂರ್ವ ಮತ್ತು ವಸಾಹತುಕಾಲೀನ ಭಾರತದ ಸಂದರ್ಭದಲ್ಲಿ ಆರ್ಥಿಕತೆಯ ಜೀವನಾಡಿಯಾಗಿದ್ದುದು ಕೃಷಿ ಮತ್ತು ಅದಕ್ಕೆ ಪೂರಕವಾಗಿದ್ದ ಕೈಗಾರಿಕೆಗಳ ವ್ಯವಸ್ಥೆಯೇ ಆಗಿದ್ದರೂ ಕರ್ನಾಟಕಕ್ಕೆ ಸಂಬಂಧಿಸಿ ಆ ಕುರಿತ ಅಧ್ಯಯನಗಳು ನಡೆದದ್ದು ಕಡಿಮೆಯೇ. ಈ ದೃಷ್ಟಿಯಿಂದ ಗೆಳೆಯ ಸಿದ್ದಲಿಂಗಸ್ವಾಮಿಯವರ ''ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ'' ಎಂಬ ಈ ಕೃತಿ ಸ್ವಾಗತಾರ್ಹವಾದುದು. 19ನೆಯ ಶತಮಾನಾರಂಭದಿಂದ ಹಿಡಿದು 20ನೇ ಶತಮಾನದ ಪೂರ್ವಾರ್ಧದ ವರೆಗಿನ ಅವಧಿಯ ಕರ್ನಾಟಕದ ಕೃಷಿ, ಕೃಷಿ ವ್ಯವಸ್ಥೆ, ಭೂ ಹಿಡುವಳಿ, ಭೂಕಂದಾಯ ವ್ಯವಸ್ಥೆಗಳು, ಔದ್ಯಮೀಕರಣ ಹಾಗೂ ನಗರೀಕರಣಗಳ ಪ್ರಕ್ರಿಯೆಯಲ್ಲಿ ಉಂಟಾದ ಕೃಷಿಯ ವಾಣಿಜೀಕರಣದಿಂದ ಉಂಟಾದ ಸ್ಥಿತ್ಯಂತರಗಳೇ ಮೊದಲಾದ ವಿಷಯಗಳನ್ನು ಸಿದ್ದಲಿಂಗಸ್ವಾಮಿಯವರು ವಿಮರ್ಶಾತ್ಮಕವಾಗಿ ಪರಿಶೀಲಿಸಿದ್ದಾರೆ.
ವಾಬಿ ಸಾಬಿ – ಅಪರಿಪೂರ್ಣತೆಯಲ್ಲಿನ ವಿವೇಕ ನೀವು ಅದೆಷ್ಟು ಅತ್ಯುತ್ತಮ ಅಪರಿಪೂರ್ಣ ವ್ಯಕ್ತಿಯಾಗಬಲ್ಲಿರೋ, ಆಗಿರಿ! ಸರಳ ಹಾಗೂ ಸುಲಭಗ್ರಾಹ್ಯವಾದ ಶೈಲಿಯಲ್ಲಿ, ನಮ್ಮ ಅಪರಿಪೂರ್ಣತೆ ಮತ್ತು ಅಶಾಶ್ವತತೆಯನ್ನು ಅಪ್ಪಿಕೊಳ್ಳುವುದರಿಂದ ಅದು ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಹೇಗೆ ಮುಕ್ತವಾಗಿರಿಸುತ್ತದೆ, ಹಾಗೂ ‘ಉತ್ತಮಗೊಳ್ಳುವುದು’ ಎಂಬ ಪದದ ಅರ್ಥವನ್ನು ಅದು ಹೇಗೆ ಒಂದು ರೀತಿ ಮೌಲ್ಯೀಕರಿಸುತ್ತದೆ, ಹಾಗೆ ನೋಡಿದರೆ ನಿಜಕ್ಕೂ ಅದೇ ಲೆಕ್ಕಕ್ಕೇ ಬರುವಂತಹದ್ದು, ಮತ್ತು ಅದನ್ನೇ ನಾವು ನಿಜಕ್ಕೂ ಬಯಸಿರುವುದು ಎಂಬುದನ್ನು ‘ವಾಬಿ ಸಾಬಿ’ ತೋರಿಸುತ್ತದೆ. ನೀವು ಮತ್ತು ನಿಮ್ಮ ಅಪರಿಪೂರ್ಣ ಜೀವನ ಇವೆರಡೂ ಕೂಡ, ನೀವು ಅವನ್ನು ಹೇಗೆಂದು ತಿಳಿದುಕೊಂಡಿದ್ದಿರೋ ಅವಕ್ಕಿಂತ ಬಹಳ ಬಹಳ ಉತ್ತಮವಾಗಿವೆ ಎಂದು ಆವಿಷ್ಕಾರ ಮಾಡಲು ಈ ಪುಸ್ತಕ ನಿಮಗೆ ಸಹಾಯ ಮಾಡಬಲ್ಲದ್ದು, ಹಾಗೂ ನಿಮ್ಮ ಪಾಲಿಗೆ ಬಂದುದ್ದನ್ನು ಸ್ವೀಕರಿಸಿ, ಬಾರದ್ದನ್ನು ಬಿಡುವುದಿದೆಯಲ್ಲ, ಅದು ನಿಮ್ಮನ್ನು ಅತ್ಯುತ್ತಮ ಮತ್ತು ಸಂತೋಷದಾಯಕವಾಗಿರುವ ನಿಮ್ಮತ್ತಲೇ ಕರೆದೊಯ್ಯಬಲ್ಲುದು.
ವಾರೆನ್ ಬಫೆಟ್ ವಿಶ್ವದ ಅತ್ಯಂತ ಶ್ರೀಮಂತ ಹೂಡಿಕೆದಾರರಲ್ಲಿ ಒಬ್ಬರು. ಲಕ್ಷಾಂತರ ಸ್ವತಂತ್ರ ಹೂಡಿಕೆದಾರರು ಅವರ ಪ್ರತಿಯೊಂದು ನಡೆಯನ್ನೂ ಅನುಸರಿಸುತ್ತಾರೆ. ಆದರೆ ಬಫೆಟ್ ಅವರೇ ಏಕೆ? ಹೂಡಿಕೆ ಮತ್ತು ಆರ್ಥಿಕ ಯಶಸ್ಸಿನ ಬಫೆಟ್‌ನ ಹಾದಿಯನ್ನು ಅನುಸರಿಸಲು ಹೂಡಿಕೆದಾರರು ಏನು ಮಾಡಬಹುದು? ಬಫೆಟ್ ಅವರು ಹೇಗೆ ಹೂಡಿಕೆ ಮಾಡುತ್ತಾರೆ? ಅವರ ಯಶಸ್ಸಿನ ತಂತ್ರಗಳೇನು? ವಾರೆನ್ ಬಫೆಟ್ ಅವರ ವಿಧಾನವು ಮೌಲ್ಯ ಹೂಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ – ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಷೇರುಗಳನ್ನು ಖರೀದಿಸುವುದು ಮತ್ತು ಅವುಗಳನ್ನು ದೀರ್ಘಕಾಲೀನವಾಗಿ ಹಿಡಿದಿಟ್ಟುಕೊಳ್ಳುವುದು. ಅವರು ಊಹಾಪೋಹಗಳಿಗಿಂತ ಸರಳತೆ, ತಾಳ್ಮೆ ಮತ್ತು ತಾರ್ಕಿಕ ಚಿಂತನೆಗೆ ಒತ್ತು ನೀಡುತ್ತಾರೆ. ಈ ಪುಸ್ತಕದಲ್ಲಿ ಅವರ ಹೂಡಿಕೆಯ ಮೂಲಭೂತ ಅಂಶಗಳನ್ನು ಸೇರಿಸಿ ನೀಡಲಾಗಿದೆ. ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವವರಿಂದ ಹಿಡಿದು, ಅನುಭವಿ ಹೂಡಿಕೆದಾರರು ಈ ಪುಸ್ತಕದಲ್ಲಿನ ಅಂಶಗಳನ್ನು ಅಳವಡಿಸಿಕೊಂಡು ಲಾಭ ಗಳಿಸಬಹುದು. ಶುಭ ಲಾಭವಾಗಲಿ! - ಚಂದ್ರಶೇಖರ ಮದಭಾವಿ
ಇದು, ಹಿಂದಿಯ ಧೀಮಂತ ಲೇಖಕ ಶ್ರೀ ಉದಯ ಪ್ರಕಾಶ್‌ರ 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್" ಎಂಬ ಕಿರು ಕಾದಂಬರಿಯ ಭಾವಾನುವಾದ. ಈ ಸಮಾಜೋ- ಆರ್ಥಿಕ ರಾಜಕೀಯ ಕಟಕಿಯಲ್ಲಿ ವಾರೆನ್ ಹೇಸ್ಟಿಂಗ್ಸ್ ಮತ್ತು ಅವನ ಹೋರಿ ರೂಪಕಗಳಾಗಿ ಬಳಸಲ್ಪಟ್ಟಿವೆ. ಉದಯ ಪ್ರಕಾಶರು ಒಂದು ವಿಲಕ್ಷಣ ಭ್ರಮೆ (Fantasy) ಯನ್ನು ಈ ಕಿರು ಕಾದಂಬರಿಯಲ್ಲಿ ಸೃಷ್ಟಿಸಿದ್ದಾರೆ. ಅದ್ಭುತಗಳ ನಾಡಾದ ಭಾರತವೆಂಬ ಕೂಟ ಪ್ರಶ್ನೆಯೊಂದಿಗೆ ವಾರೆನ್ ಹೇಸ್ಟಿಂಗ್ಸ್‌ನ ಒಡನಾಟ ಹಾಸ್ಯಾಸ್ಪದವೂ ಅಸಮಂಜಸವೂ ಆಗಿದೆ. ತನ್ನ ಸುತ್ತಲಿನ ಎಲ್ಲದರೊಂದಿಗೆ ಅವನ ನಡವಳಿಕೆ ಸಂವೇದನಾರಹಿತವಾಗಿದೆ; ಇದರಲ್ಲಿ ಆಳ ತಿಳುವಳಿಕೆ ಯಾಗಲೀ, ಒಳನಾಡಿ ಅರಿವಾಗಲೀ ಇಲ್ಲ, ಹಾಗಾಗಿ ಸತ್ವವೂ ಇಲ್ಲ. 'ವಾರೆನ್ ಹೇಸ್ಟಿಂಗ್ಸ್‌ನ ಹೋರಿ' ಇಂದು ನಮ್ಮ ಸುತ್ತ ನಡೆಯುತ್ತಿರುವ ಜಾಗತಿಕ ವಿದ್ಯಮಾನಗಳತ್ತ ನಮ್ಮನ್ನ ಕೊಂಡೊಯ್ಯುತ್ತದೆ. ಇಂದು ಭೋಗಲೋಲುಪತೆ ಮತ್ತು ಅಧಿಕಾರದಾಹ ವಿಕೃತಿಯ ರೂಪತಳೆದಿವೆ. ನಿಲ್ಲಪ್ತತೆ- ಸಂವೇದನಾರಾಹಿತ್ಯಗಳ ನಡುವೆಯೂ ಕೆಲವು ಜೀವಿಗಳು. ಕೆಲವು ಚಳುವಳಿಗಳು ಹೋರಿಯ ಕೋಡು ಹಿಡಿದು ಮಣಿಸುವ, ಜಗತ್ತಿನ ಗಡ್ಡಹಿಡಿದು ಜಗ್ಗುವ ಧೈರ್ಯ ಹೊಂದಿವೆ. ವಿನಾಶದ ಅಂಚಿನಲ್ಲಿರುವ ತಳಿಯೊಂದಕ್ಕೆ ಕೊಟ್ಟ ಪ್ರಶಸ್ತಿಯಂತಿದೆ ಈ ಕಾದಂಬರಿ, ಡಾ. ಪ್ರಕಾಶ್ ಗರುಡರ ಭಾವಾನುವಾದ ಮೂಲದೊಂದಿಗೆ ಅನುಸಂಧಾನ ಮಾಡುತ್ತಲೇ ತಿಳಿಗನ್ನಡದಲ್ಲಿ ಚೊಕ್ಕವಾಗಿ ಹರಿದು ಬಂದಿದೆ. ಪ್ರೊ. ಎಚ್.ಆರ್. ಅಮರನಾಥ
Showing 4111 to 4140 of 5198 results