• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Authors

Languages

Book Type

Clear All
Filter
ಅವಳೀಗ ನೆನಪು ಮಾತ್ರ | Avaliga Nenapu matra

ಆತ್ಮೀಯ ಸಹೋದರಿ ಕನ್ನಡ ಕವಯಿತ್ರಿ ಡಾ. ಸುಮಂಗಲಾ ಅತ್ತಿಗೇರಿ ಅವರಲ್ಲಿ ಅಮೂರ್ತ ರೂಪದಲ್ಲಿದ್ದ ಭಾವನೆಗಳ ಹೂವುಗಳು ಮೊಗ್ಗಿನಾವಸ್ಥೆಯಿಂದ ವಾಚಿಸುವ ಕಣ್ಮನಗಳಿಗೆ ಹೂವಾಗಿ ಅರಳಿ ಮಕರಂದ ಸೂಸಿದೆ. ಹೆಣ್ಣಿನ ಗುಣಕ್ಕೆ ತಕ್ಕಂತೆ ರಚನೆಗಳು ಹೊರಬಂದಿವೆ. ಮಹಿಳೆಯ ನೋವು, ನಲಿವು, ಆಸೆ. ಆಕಾಂಕ್ಷೆ, ನಿರಾಸೆ, ದುಗುಡ, ದುಮ್ಮಾನಗಳ ಅನುಭವದ ಪಾಕದಿಂದ ಹೆತ್ತವರ ನೆನಪಿನವರೆಗೆ ತಮ್ಮ ಚಿತ್ರದಲ್ಲಿನ ಚಿತ್ರಗಳು ಹದ ತಪ್ಪದೆ ಪದ ರೂಪದಿಂದ ಎದೆಯ ಕದ ತೆರೆದು ಓದುಗರ ಮಂಗಳ ಮನಸ್ಸಿಗೆ ಸುಮಂಗಲವೆನಿಸಿದೆ. ಅವಳೀಗ ನೆನಪು ಮಾತ್ರ ಕವನ ಸಂಕಲನ ಇದವರ ಎರಡನೆಯ ಕೂಸು. ಇವರ ರಚನೆಯ ಸಾಲುಗಳೆಲ್ಲ ಕರುಳ ಬಳ್ಳಿಯಂತೆ ಬಳ್ಳಿ ಬಳ್ಳಿಯಾಗಿ ಹಸುರಿನಂತೆ ಅವರದೆಯಾದ ಅನುಭವದ ಉಸಿರಿನಿಂದ ಇದೀಗ ಎಲ್ಲರ ಮನೆ ಮತ್ತು ಮನಕ್ಕೆ ಹಬ್ಬಿ ಕಂಗೊಳಿಸಿದೆ. ಅಧ್ಯಯನದ ಜೊತೆ ಜೊತೆಗೆ ಅನುಭವದ ಮೂಸೆಯಿಂದ ಇವರ ಕವನ ಕುಲಾವಿ ತೊಟ್ಟಿದೆ. ಓದುಗರ ಮನ ಮುಟ್ಟುವಲ್ಲಿ ಕವಯಿತ್ರಿಯ ಕೈ ರಚನೆ ಕೈ ಹಿಡಿದಿದೆ. ಮನ ಮುಟ್ಟಿದೆ. ಎದೆ ತಟ್ಟಿದೆ. ಇಲ್ಲಿಯ ಸಾಲುಗಳೆಲ್ಲ ಕವಯಿತ್ರಿಯ ಅಂತರಾಳದ ದೀಪಗಳು, ಆ ದೀಪದಲ್ಲಿ ವಿನಯ, ವಿಸ್ಮಯ, ವೈಖರ್ಯ ರೂಪಗಳೇ ನುಡಿ ಬೆಳಕಾಗಿ ಬೆಳಗಿವೆ. ಒಟ್ಟಿನಲ್ಲಿ ಕನ್ನಡ ನಾಡಿನ ನರನಾಡಿಗೆ ಇಂತವರ ಸಾಹಿತ್ಯ ವ್ಯವಸಾಯವೇ ಜೀವನಾಡಿ, ಕವಯಿತ್ರಿಯ ಕೈರಚನೆಯ ಕೈಂಕರ್ಯ್ಯ ನಮ್ಮ ನಾಡಿನಲ್ಲಿ ಸತ್ಯಂ. ಶಿವಂ, ಸುಂದರಂ ನಂತೆ ದಿನನಿತ್ಯ ಕಂಗೊಳಿಸುತ್ತಿರಲಿ.

₹120   ₹107

Buy Now
ಅವಿತಿದ್ದ ಕವಿತೆಗಳು | Avitidda Kavitegalu

ಕವನ ಸಂಕಲನಗಳ ಅಂಗಳದಲ್ಲಿ ಬಿರಿದ ಮಲ್ಲಿಗೆಯ ಘಮ ಸದಾ ಹೊಸತು. ರೋಹಿತ್ ನಾಗೇಶ್ ಹೆಸರು ಇದೀಗ ಹೊಸ ಸೇರ್ಪಡೆ. ದೂರದರ್ಶನ ಮತ್ತು ಸಿನಿಮಾ ಕಲಾವಿದರಾಗಿ ನಮ್ಮೆಲ್ಲರಿಗೂ ಪರಿಚಿತರಾಗಿರುವ ರೋಹಿತ್ ನಾಗೇಶ್ ಅವರು ಉದ್ಯಮಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುವ ಗುರುವೂ ಹೌದು. ಸಕಲೇಶಪುರದ ಹತ್ತಿರದ ವಿಶಾಲ ಹುಲ್ಲುಹಾಸು, ಗಗನಚುಂಬಿಸಿದಂತೆ ಕಾಣುವ ಗುಡ್ಡಗಳು, ಹಾಗೂ ಕಾಫಿ ಎಸ್ಟೇಟ್‌ಗಳ ಪರಿಸರದಿಂದ ಹೊರಟ ಅವರ ಬದುಕಿನ ಯಾನ, ಬೆಂಗಳೂರು ಹಾಗೂ ಅನೇಕ ದೇಶಗಳನ್ನು ಸುತ್ತುವ ಮೂಲಕ ಅವರನ್ನು ಗಟ್ಟಿಗೊಳಿಸಿದೆ. ಏಕಕಾಲಕ್ಕೆ ಅವರೊಳಗಿನ ಕವಿಯನ್ನೂ ಸಲಹಿದೆ. ಭಾವನೆಗಳ ಅಭಿವ್ಯಕ್ತಿಗೆ ಕವನ ರಚನೆ ಸರಳ ಮಾರ್ಗ. ಈ ಸರಳ ಮಾರ್ಗದಲ್ಲಿ ತಮ್ಮ ಮಾರ್ಗವನ್ನು ಹುಡುಕಿಕೊಂಡಿರುವ ರೋಹಿತ್ ನಾಗೇಶ್ ಅವರ ಕವಿತೆಗಳಲ್ಲಿ ಬದಲಾದ ಕಾಲ ಮತ್ತು ಗತಿಗಳನ್ನು ದಾಖಲಿಸಿದ ಸಾಲುಗಳಿವೆ. ಮನುಷ್ಯ ಸಹಜ ಭಾವನೆ ಮತ್ತು ಕಲ್ಪನೆಗಳ ಮೊತ್ತವಿದೆ. ರೋಹಿತರ ಈ ಚಾರಣ ಆರೋಹಣವಾಗಲಿ, ಮುಂದಿನ ದಿನಗಳಲ್ಲಿ ಅವರ ಭಾವ ಪ್ರಭಾವಳಿಯೊಳಗೆ ಇನ್ನಷ್ಟು ಅನುಭವ ಮತ್ತು ಕಲ್ಪನೆಗಳು ದಕ್ಕಲಿ, ಆ ಮೂಲಕ ಕಾವ್ಯಪ್ರಭೆ ಹೊರಹೊಮ್ಮಲಿ ಎಂದು ಆಶಿಸಿ ಶುಭಕೋರುತ್ತೇನೆ. ನಿಮ್ಮ ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರ ಸಾಹಿತಿ ನಿರ್ದೇಶಕರು

₹170   ₹144.5

Buy Now
ಅಶ್ರು | Ashru

nil

₹280   ₹249

Buy Now
ಅಸಂಗತ | Asangata

'ರಾಜೀ'-ನಾಟಕವು ದಾಂಪತ್ಯದಲ್ಲಿ ಇರಬೇಕಾದ ನಿಷ್ಠೆಯನ್ನು ಪ್ರಶ್ನಿಸುವ ನಾಟಕ, ಸಂಭಾಷಣೆಗಳ ಸರಣಿಯಿಂದಲೇ ಗಟ್ಟಿತನವನ್ನು ಕಾಯ್ದುಕೊಂಡು ಬಂದಿದೆ. ರಾಜಿ ನೀಡುವ ಉತ್ತರಗಳು, ಒಟ್ಟು ಅವಳದ್ದಾಗದೆ ಒಟ್ಟು ಇಂತಹ ಸ್ತ್ರೀ ಜಗತ್ತಿನ ಪ್ರಾತಿನಿಧಿಕ ಮಾತಾಗುವಂತೆ ಅಕ್ಷತಾ ಎಚ್ಚರವಹಿಸಿದ್ದಾರೆ. ಇದಂತೂ ಭಾವದೊಂದಿಗೆ ಬುದ್ಧಿಯನ್ನು ಬೆಸೆಯುವ ಅಪೂರ್ವ ಪ್ರತಿಭೆ. 'ರಾಜೀ' ಪ್ರಕೃತಿ-ಪುರುಷ ಇಬ್ಬರನ್ನೂ ಚಿಂತನೆಗೆ ಹಚ್ಚುವ ಆಟ. (ನಾಟಕಕ್ಕೆ ಕನ್ನಡದಲ್ಲಿ 'ಆಟ' ಎನ್ನುತ್ತಾರೆ). ಅಕ್ಷತಾ ಈ 'ಆಟ'ವನ್ನು ಆರೋಗ್ಯಕರ ಮನಸ್ಸಿನಿಂದ ಆಡಿದ್ದಾರೆ. -ಡಾ. ಆನಂದ್ ಗೋಪಾಲ್ ಕತೆಗಾರರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರು, ಮೈಸೂರು

₹100   ₹89

Buy Now