nil
#
‘ನೀವು ಈ ವರ್ಷ ಕೇವಲ ಒಂದೇ ಪುಸ್ತಕವನ್ನು ಓದಲು ಬಯಸಿದರೆ, ಅದು ಖಂಡಿತವಾಗಿಯೂ ವಿಕ್ಟರ್ ಫ್ರಾಂಕಲ್‌ರದ್ದೇ ಆಗಿರಬೇಕು.’ – ಲಾಸ್ ಏಂಜಲೀಸ್ ಟೈಮ್ಸ್ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’, ಹತ್ಯಾಕಾಂಡದಿAದ ಹೊರಟ ಒಂದು ಅದ್ಭುತ ಹಾಗೂ ಉಲ್ಲೇಖನೀಯ ಪುಸ್ತಕವಿದು. ಇದು ವಿಕ್ಟರ್ ಈ.ಫ್ರಾಂಕಲ್ ಅವರ ಸಂಘರ್ಷದ ದರ್ಶನವನ್ನು ನೀಡುತ್ತದೆ, ಅದನ್ನು ಅವರು ಆಶ್ವೀಜ್ ಮತ್ತು ಇನ್ನಿತರ ನಾಜಿû ಯಾತನಾ ಶಿಬಿರಗಳಲ್ಲಿ ಜೀವಂತವಾಗಿ ಉಳಿಯಲು ನಡೆಸಿದ ಸಂಘರ್ಷವಾಗಿತ್ತು. ಈ ಉಲ್ಲೇಖನೀಯ ಶ್ರದ್ಧಾಂಜಲಿ ನಮಗೆ ನಮ್ಮ ಬದುಕಿನ ಮಹಾನ್ ಅರ್ಥ ಮತ್ತು ಉದ್ಧೇಶಗಳ ಪ್ರಾಪ್ತಿಗಾಗಿ ಒಂದು ಮಾರ್ಗದರ್ಶನವಾಗಿ ಸಾದರಪಡಿಸಲಾಗಿದೆ. ವಿಕ್ಟರ್ ಫ್ರಾಂಕಲ್ ಇಪ್ಪತ್ತನೇ ಶತಮಾನದ ನೈತಿಕ ನಾಯಕರಲ್ಲಿ ಒಬ್ಬರು. ಮಾನವೀಯ ಯೋಚನೆ, ಗೌರವ ಹಾಗೂ ಅರ್ಥದ ಶೋಧಕ್ಕೆ ಸಂಬAಧಿಸಿದ ಅವರ ನಿರೀಕ್ಷಣೆ ಗಾಢವಾದ ಮಾನವತೆಯಿಂದ ಪರಿಪೂರ್ಣ ಎನ್ನಬಹುದು. -ಪ್ರಮುಖ ರಬ್ಬೀ, ಡಾಕ್ಟರ್ ಜೋನಾಥನ್ ಸೇಕ್ ‘ವಿಕ್ಟರ್ ಫ್ರಾಂಕಲ್ ಘೋಷಣೆ ಮಾಡುತ್ತಾರೆ- ಕೆಟ್ಟದ್ದು ಅಥವಾ ಯಾತನೆ ನಮ್ಮನ್ನು ಅಂತ್ಯಗೊಳಿಸುವುದಿಲ್ಲ… ನಾವು ಹೃದಯದಿಂದೇಳುವ ಫೀನಿಕ್ಸ್ನ ತರಹ, ಅದು ಜೀವನ ಮತ್ತು ಪಾಲಾಯನದ ನಡುವೆ ಜೀವನವನ್ನು ಅಪ್ಪಿಕೊಳ್ಳುತ್ತದೆ. -ಬ್ರಿಯಾನ್ ಕೀನನ್, ಆ್ಯನ್ ಈವಿಲ್ ಕ್ರೇಡ್ಲಿಂಗ್‌ನ ಲೇಖಕರು ‘ಸ್ಥಾಯೀ ಸಾಹಿತ್ಯದ ಒಂದು ಬಾಳಿಕೆಯ ಕೃತಿ’ -ನ್ಯೂಯಾರ್ಕ್ ಟೈಮ್ಸ್
ನಿತ್ಯ ಬದುಕಿನಲ್ಲಿ ಬರುವ ಆಗು ಹೋಗುಗಳ ನಡುವೆ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಅವರವರ ನಿರ್ಧಾರಗಳು ಅವರಿಗೆ ಸರಿ ಎನ್ನಿಸುತ್ತದೆ. ನಮ್ಮ ನಿರ್ಧಾರಗಳು ಪ್ರಾಪಂಚಿಕ ಆಗು ಹೋಗುಗಳಿಗೆ ಹೊಂದಾಣಿಕೆ ಇದ್ದರೆ ಬದುಕು ಸ್ವಲ್ಪವಾದರೂ ಸುಗಮವಾಗಬಹುದು. ಈ ದಿಕ್ಕಿನಲ್ಲಿ ಕೆಲವು ತಾತ್ವಿಕ ವಿಚಾರಗಳನ್ನು ತರ್ಕದ ದೃಷ್ಟಿಯಿಂದ ಮಂಡಿಸಲಾಗಿದೆ. ಈ ಬರಹಗಳು ಬೇರೆಲ್ಲಿಯೂ ಪ್ರಕಟವಾಗಿಲ್ಲ.
Nil
ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ.
Showing 2971 to 3000 of 5206 results