nil
ಎಸ್ ಜಯಶಂಕರ್
#
ನಾಗರಾಜ ದೊರೆ
ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಚರ್ಚೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪರಿಕಲ್ಪನೆಗಳಲ್ಲಿ ಬಹುತ್ವವೂ ಒಂದು ದೇಶದಲ್ಲಿ ಕಾವಳದಂತೆ ದಟ್ಟವಾಗಿ ಹಬ್ಬಿರುವ ವಿದ್ವೇಷದ ರಾಜಕೀಯ ವಾತಾವರಣಕ್ಕೂ, ಈ ಪರಿಕಲ್ಪನೆಯ ಚರ್ಚೆಗೂ ನಂಟಿದೆ. ಬರಗಾಲದಲ್ಲಿ ಮಳೆಯನ್ನು ಆವಾಹಿಸುವಂತೆ, ಚಾರಿತ್ರಿಕವಾದ ಒತ್ತಡಗಳಲ್ಲಿ ಪರಿಕಲ್ಪನೆಗಳು ಮೈದಳೆಯುತ್ತವೆ. ಬಿಕ್ಕಟ್ಟುಗಳ ಕಾಲದಲ್ಲಿ ನೆಮ್ಮದಿಯ ನಾಡನ್ನು ಕಟ್ಟಲು ಜರೂರಾದ ಪರಿಕಲ್ಪನೆಗಳನ್ನು ತಾತ್ವಿಕವಾಗಿ ರೂಪಿಸುವುದು ತಾತ್ವಿಕ ಹೊಣೆಗಾರಿಕೆ. ಆ ಪರಿಕಲ್ಪನೆಗಳನ್ನು ನಾಡಿನ ಸಂಕಟ ಸಂತಸ ಕನಸು ಚಿಂತನೆ ಸಂಭ್ರಮಗಳನ್ನು ಒಳಗೊಳ್ಳುವಂತೆ ಮಾಡುವುದು ಸಾಂಸ್ಕೃತಿಕ ತಿಳುವಳಿಕೆ ರೂಪಿಸುವ ಕೆಲಸ. ಇದು ಒಬ್ಬರಿಂದಾಗುವುದಲ್ಲ. ಸಾಮೂಹಿಕ ತೊಡಗುವಿಕೆ. ಒಮ್ಮೆಗೆ ಮುಗಿಯುವುದಲ್ಲ. ಚರ್ಚೆ ಸಂವಾದಗಳ ಮೂಲಕ ನಿರಂತರ ಮಾಡುತ್ತಲೇ ಇರಬೇಕಾದ್ದು.
ಕೊರತೆ ನೀಗಿಸಿದ ಕೃತಿ.. ಭಾರತವು ವಿಶ್ವಗುರುವಾಗಿ ಬಿಂಬಿತಗೊಳ್ಳುತ್ತಿರುವ ಇಂದಿನ ಜಾಗತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನನ್ನು ಒಂದು ಸಂಶಯ ಕಾಡತೊಡಗಿತ್ತು. ಇಪ್ಪತ್ತೊಂದನೇ ಶತಮಾನ ಪ್ರಾರಂಭವಾದ ಮೇಲೆ ಜನಿಸಿದ ಮಕ್ಕಳನ್ನು ಮತ್ತು ಎಳೆವಯಸ್ಕರನ್ನು ಈ ಬೆಳವಣಿಗೆಯ ಔಚಿತ್ಯ ಹಾಗೂ ಸೂಚ್ಯಾರ್ಥ ಮತ್ತು, ಆ ಅರ್ಹತೆ ಗಳಿಸಲು ಅಳತೆಗೋಲು ಏನಿರಬಹುದು ಎಂಬ ಬಗ್ಗೆ ಪ್ರಶ್ನಿಸಿದರೆ ಅವರಲ್ಲಿ ಸೂಕ್ತ ಉತ್ತರ ಇದ್ದೀತೆ ಎಂಬ ಸಂಶಯ. ಆ ಸಂಶಯದ ಬೆನ್ನಲ್ಲಿಯೇ ಕಂಡ ಒಂದು ಕೊರತೆ ಎಂದರೆ ನಮ್ಮ ಮಕ್ಕಳಲ್ಲಿ ಈ ವಿಚಾರಗಳ ಬಗ್ಗೆ ತಿಳಿಹೇಳುವ, ನಮ್ಮ ದೇಶದ ಹಲವು ಬೋಧಕರ, ಧಾರ್ಮಿಕ ಮತ್ತು ಆಧ್ಯಾತ್ಮ ಪ್ರವರ್ತಕರ ಮುಖ್ಯ ಬೋಧನೆಗಳನ್ನು, ಅವರ ವೈಚಾರಿಕತೆಯ ವ್ಯಾಪ್ತಿಯನ್ನು, ಸರಳಭಾಷೆಯಲ್ಲಿ ಒಂದೆಡೆ ಕಟ್ಟಿಕೊಡುವ ಪ್ರಕಟಣೆಗಳ ಅಭಾವ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪ್ರಭು ಅವರು 'ಬಹುತ್ವ ಭಾರತ ಕಟ್ಟಿದವರು' ಪುಸ್ತಕದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಾಗ, ಅಲ್ಲಿನ ಹನ್ನೊಂದೂ ಜೀವನ್ಮುಕ್ತರ ಬಗ್ಗೆ ಓದುತ್ತಿದ್ದಂತೆ, ಒಂದು ತೃಪ್ತಬಾವ ಮೂಡತೊಡಗಿತ್ತು. ನನ್ನಲ್ಲಿ ಮೂಡಿದ್ದ ಕೊರತೆಯ ಭಾವವನ್ನು ನೀಗಿಸಿದ್ದಾರೆ ಎನಿಸಿತ್ತು. ವಾಲ್ಮೀಕಿ, ಬುದ್ದ ಮೊದಲಾಗಿ, ಬಸವಣ್ಣ, ಅಲ್ಲಮ, ಅಕ್ಕಮ್ಮನವರ ಮೂಲಕ ಹಾದು, ಸರ್ವಜ್ಞ, ಶಾರಾದಾದೇವಿ, ವಿವೇಕಾನಂದ.. ಕೊನೆಗೆ ಜಿಡ್ಡು, ನಾರಾಯಣ ಗುರು ಮತ್ತು ದಲೈ ಲಾಮವರೆಗೆ, ಭಾರತದ ಹನ್ನೊಂದು ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಜೀವನವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಕಥಾನಕದಂತೆ ರಚಿಸಿರುವುದು ವಿಶೇಷವಾದ ನೆಮ್ಮದಿ ತಂದಿದೆ. ಎಲ್ಲರ ಮನೆಯ ಗ್ರಂಥಭಂಡಾರದಲ್ಲೂ ಎಲ್ಲರ ಕೈಗೂ ಸದಾ ಎಟುಕುವಂತೆ ಇರಬೇಕಾದ ಕೃತಿ ಇದು. - ಕೆ ಎನ್ ಗಣೇಶಯ್ಯ
Showing 3031 to 3060 of 5204 results