• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
KURUKSHETRA-1 | ಕುರುಕ್ಷೇತ್ರ -1

ಹದಿನೆಂಟು ದಿನದ ಯುದ್ಧ. ಹದಿನೆಂಟು ಅಕ್ಷೌಹಿಣೀ ಸೈನ್ಯ. ಅತಿರಥ-ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆ-ಕುದುರೆಗಳ ಲೆಕ್ಕವಿಲ್ಲ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.

₹300   ₹267

L : ಜೋಗಿ

nil

₹120   ₹107

LOVE | ಲವ್

ಒಂದು ಉದ್ಯಾನದ ಹಲವಾರು ಹೂಗಳ ನಡುವೆ ನಮ್ಮ ಕಣ್ಣಿಗೆ ಸುಂದರವಾಗಿ ಕಂಡ ಹೂವನ್ನು ಮೆಚ್ಚುವುದು, ಅದರ ಗಿಡಕ್ಕೆ ನೀರುಣಿಸುವುದು-ಪ್ರೇಮ. ಆ ಹೂವನ್ನು ಕಿತ್ತು ನಮ್ಮ ಬಳಿ ಇಟ್ಟುಕೊಳ್ಳುವುದು-ಕಾಮ. ಅದೇ ಉದ್ಯಾನದಲ್ಲಿ ಎಲ್ಲ ಹೂಗಳೂ ಸುಂದರವಾಗಿ ಕಂಡು, ಎಲ್ಲವನ್ನೂ ಮೆಚ್ಚಿ, ಎಲ್ಲ ಹೂಗಿಡಗಳಿಗೂ ನೀರುಣಿಸುವುದು-ಅಧ್ಯಾತ್ಮ.

₹225   ₹200

Only ಪಾಲಿಟಿಕ್ಸ್ | Only politics

ಗೋಪಾಲಕೃಷ್ಣ ಕುಂಟಿನಿ

₹200   ₹178

PoK: ಕಾಣದ ರೇಖೆಯ ಕಥನ | oK: Kaanada Rekheya Kathana

ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ ನೆಹರೂ ಮಿಲಿಟರಿಗೆ ಆದೇಶಿಸಿದರು. ನುಸುಳುಕೋರರನ್ನು ಹೊಡೆದು ಓಡಿಸುವ ಬದಲು ವಿಶ್ವಸಂಸ್ಥೆಯನ್ನು ಮಧ್ಯಸ್ಥಿಕೆಗೆ ಕರೆದರು. ಸಂಚುಕೋರರು ತೋಡಿದ ಹಳ್ಳಕ್ಕೆ ನೆಹರೂ ಬಿದ್ದರು, ದೇಶವೂ ಬಿತ್ತು. ಯಾವತ್ತೂ LoC is not a legally recognised border. ಮೂರುಮೂರು ಬಾರಿ ಯುದ್ಧಗಳಾದವು, ಮೂರು ಮೂರು ಬಾರಿ ದೇಶ ವಿಭಜನೆಯಾಯಿತು. ತಾಷ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ ಅಂತ ಸಹಿಯ ಮೇಲೆ ಸಹಿ ಹಾಕಲಾಯಿತು. ಎಲ್ ಒ ಸಿ ವಿಚಾರ ಹಾಗೇ ಉಳಿಯಿತು. ಪಿಒಕೆ ಅಲ್ಲೇ ಉಳಿಯಿತು. ಭಯೋತ್ಪಾದಕರ ಹೆಬ್ಬಾಗಿಲು ಇನ್ನೂ ಈಗಲೂ ತೆರೆದೇ ಇದೆ.

₹120   ₹107

ಅರವತ್ತರ ನಂತರ ಮರಳಿ ಅರಳಿ | Aravattara Nantara Marali Arali

ಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಒಂದು ನಿಜವಾದ ಸಂಗತಿ. ಈ ವಯೋವರ್ಗದ ಅವಶ್ಯಕತೆಗಳು, ಅವರು ಎದುರಿಸಬಹುದಾದ ಸಮಸ್ಯೆಗಳು ಹಾಗು ಅವುಗಳನ್ನು ನಿಭಾಯಿಸುವ ಹಲವಾರು ಸಾಧ್ಯತೆಗಳನ್ನು ವಿವರಿಸುವ ಪುಸ್ತಕ ಇದು. ತಿಳಿ ಹಾಸ್ಯದೊಂದಿಗೆ ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುವ ವಿಷಯಗಳನ್ನು ಬಿಡಿಸಿ ಹೇಳಿ, ಮುಗುಳ್ನಗೆಯಿಂದ ಮುಪ್ಪನ್ನು ಕೂಡ ಧೈರ್ಯದಿಂದ ಆಲಿಂಗಿಸಿ ಮುನ್ನಡೆಯುವುದಕ್ಕೆ ಒಂದು ಮಾರ್ಗಸೂಚಿ. ಡಾ।। ಸರಸ್ವತಿ ಐತಾಳ್‌ ಅವರು ಬೆಂಗಳೂರಿನ ಸಂಜಯನಗರದಲ್ಲಿ ಕಳೆದ 20 ವರ್ಷಗಳಿಂದ ವೈದ್ಯೆ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಗ್ರಾಮಾಂತರ ವೈದ್ಯಕೀಯ ಸೇವೆ, ಜೀವನ ಶೈಲಿಯ ರೋಗಗಳು (ಮಧುಮೇಹ), ಮಹಿಳೆಯರು ಹಾಗು ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ. ಅದರ ಫಲಶ್ರುತಿಯೇ ಅವರ ಈ ಮೊದಲನೆಯ ಪುಸ್ತಕ `ಅರವತ್ತರ ನಂತರ ಮರಳಿ ಅರಳಿ'.

₹160   ₹142

ಆಕಾಶ ಇಷ್ಟೇ ಯಾಕಿದೆಯೋ | AKASHA ISHTE YAKIDEYO

ಕನ್ನಡದಲ್ಲಿ ಹಲವು ಮಹನೀಯರು ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಅವುಗಳ ಪೈಕಿ ನನಗೆ ಥಟ್ಟನೆ ನೆನಪಾಗುವುದು ಎಂ.ಆರ್‌. ಶ್ರೀನಿವಾಸಮೂರ್ತಿಯವರ `ರಂಗಣ್ಣನ ಕನಸಿನ ದಿನಗಳು', ನವರತ್ನರಾಮ್‌ ಬರೆದ `ಕೆಲವು ನೆನಪುಗಳು' ಮತ್ತು ಆಕಾಶವಾಣಿಯಲ್ಲಿ ಕಳೆದ `ಕಲಕತ್ತಾ ದಿನಗಳ' ಕುರಿತು ಜ್ಯೋತ್ಸ್ನಾ ಕಾಮತ್‌ ಕೃತಿ. ಇವೆಲ್ಲ ಸಾಹಿತ್ಯದ ವಿಶಿಷ್ಟ ಪ್ರಕಾರಗಳು. ದಿನದ ಹತ್ತು ಹನ್ನೆರಡು ಗಂಟೆಗಳನ್ನು ಮನೆಯಿಂದ ಹೊರಗೆ ಕಳೆಯುವಂತೆ ಮಾಡುವ ವೃತ್ತಿ ನಮಗೆ ಹೊಸ ಸವಾಲುಗಳನ್ನು ಒಡ್ಡುತ್ತದೆ, ಹೊಸ ಹೊಸ ಅನುಭವ ಮತ್ತು ಒಡನಾಟಗಳನ್ನು ಒದಗುವಂತೆ ಮಾಡುತ್ತದೆ. ಸಾಹಿತ್ಯದ ಮೂಲದ್ರವ್ಯ ಇದೇ ಆಗಿರುವುದರಿಂದ, ಈ ನೆನಪುಗಳಲ್ಲಿ ಕಥನದ ಕುತೂಹಲ ಮತ್ತು ಬದುಕಿನ ಆರ್ದ್ರತೆ ಎರಡೂ ಬೆರೆತಿರುತ್ತದೆ.ಪೂರ್ಣಿಮಾ ಮಾಳಗಿಮನಿ ಅವರ ವೃತ್ತಿ ಜೀವನ ಅವರನ್ನು ವಿಶಿಷ್ಟವಾಗಿ ರೂಪಿಸಿರುವ ಚಿತ್ರಣ ಈ ಕೃತಿಯಲ್ಲಿದೆ. ಪುಟ್ಟ ಹಳ್ಳಿಯಿಂದ ಬಂದ ಪೂರ್ಣಿಮಾ ನವೋದಯ ಶಾಲೆಯಲ್ಲಿ ಓದಿ, ಆಕಸ್ಮಿಕವಾಗಿ ವಾಯುಸೇನೆ ಸೇರಿಕೊಂಡು, ತನಗೆ ಅಪರಿಚಿತವಾದ ಜಗತ್ತಿನಲ್ಲಿ ಅಡ್ಡಾಡಿದ ಪ್ರಸಂಗಗಳು ಈ ನೆನಪುಗಳ ಬುತ್ತಿಯಲ್ಲಿವೆ. ತಮಾಷೆ, ಭಾವುಕತೆ, ದಿಟ್ಟತನ ಮತ್ತು ಬೆರಗು ಹಾಸುಹೊಕ್ಕಾಗಿರುವ ಈ ಕಥನದಲ್ಲಿ ನಡೆದುಬಂದ ದಾರಿಯ ಹೆಜ್ಜೆಗುರುತುಗಳಿವೆ. ಸಹಜ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು. – ಜೋಗಿ

₹225   ₹200

ಐ ಲವ್ ಮನಿ | I love money

ಸುರೇಶ್ ಪದ್ಮನಾಭನ್

₹325   ₹289

ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್ ಮಂತ್ರಗಳು | Ottada Mukta Jeevanakke 101 Magic Mantragalu

ಎಲ್ಲರೂ ಇಂದು ಸಾವಧಾನತೆಯ ಹಾಗೂ ನಮ್ಮ ಮೇಲೆ ನಾವು ಹೂಡಿಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. `ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್‌ ಮಂತ್ರಗಳು ಇಲ್ಲಿನ ಪ್ರತಿ ಮ್ಯಾಜಿಕ್‌ ಮಂತ್ರಗಳು ಮನಸ್ಸನ್ನು ಹೇಗೆ ಉಪಯೋಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದು ಎಂಬ ತುಡಿತದ ರೂಪಕಗಳೇ ಆಗಿವೆ. ಪುಸ್ತಕದ ಪ್ರತೀ ಲೇಖನಗಳು ಮಾನಸಿಕ ಸ್ವಯಂ-ಆರೈಕೆ ಜೊತೆಗೆ ದೇಹ ಹಾಗೂ ಮನಸ್ಸನ್ನು ಉತ್ತೇಜಿಸುವ ಸೃಜನಾತ್ಮಕ ಜೀವನ ಶೈಲಿಯ ರಚನೆಯ ಕುರಿತಾಗಿ ಮಾತನಾಡುತ್ತಾ ಹೋಗುತ್ತವೆ. ಸಂವೇದನೆಗಳನ್ನು, ಆಲೋಚನೆಗಳನ್ನು ಈ ಕ್ಷಣದ ತುರ್ತಿಗೆ ಅಂಗೀಕರಿಸುತ್ತ, ಶಾಂತಗೊಳಿಸುತ್ತಾ, ನಿಭಾಯಿಸುತ್ತಾ ಆ ಮೂಲಕ ಬದುಕಿನ ದೀರ್ಘಕಾಲಿಕ ಮಾನಸಿಕ ಸುಸ್ಥಿರತೆಯಾಗಿ ಬದಲಾಯಿಸುವ ಮಾಂತ್ರಿಕ ಮಿಡಿತಗಳನ್ನು ಇಲ್ಲಿನ ಪ್ರತಿ ಅಕ್ಷರಗಳಲ್ಲೂ ಕಾಣಬಹುದಾಗಿದೆ. ಇಲ್ಲಿರುವ 101 ಮ್ಯಾಜಿಕ್‌ ಮಂತ್ರಗಳು ಪ್ರತಿಧ್ವನಿಸುವುದು `ನಿಮ್ಮ ಮನಸ್ಸಿನ ನಾಯಕ/ನಾಯಕಿ ನೀವೇ ಎಂಬ ಘೋಷಣೆಯೊಂದನ್ನೇ.' ದೇಹ-ಮನಸ್ಸು-ಮೆದುಳಿನ ಸೂಕ್ಷ್ಮಗಳನ್ನು ಅರಿಯುವ ಅಗತ್ಯವಾದ ಹೊಳಹುಗಳು ಇಲ್ಲಿನ ಪ್ರತಿ ಲೇಖನಗಳಲ್ಲೂ ಕೂಡಿವೆ. ಪುಸ್ತಕ ನಿಮ್ಮಲ್ಲೂ ಮ್ಯಾಜಿಕ್‌ ಮೂಡಿಸುತ್ತದೆ ಎಂಬ ನಂಬಿಕೆಯೊಂದಿಗೆ...

₹150   ₹134