#
ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ.
ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ. ಶ್ರೀಯುತರಾದ ತರಾಸು ಅನಕೃ ಎಸ್ ಕೆ ಕರೀಂಖಾನ್ ಮುಂತಾದವರ ಜೀವನದ ಮೇಲೆ ಒಂದಿಷ್ಟು ಬೆಳಕು ಚೆಲ್ಲುತ್ತಾರೆ. ಅವರು ಸಂದರ್ಭಕ್ಕೆ ತಕ್ಕಂತೆ ಉದಾಹರಣೆ ನೀಡಿರುವ ಖ್ಯಾತ ಕವಿಗಳ ಕವನಗಳ ಸಾಲು ನಮ್ಮಲ್ಲಿ ಚಿಂತನೆ ಉಂಟುಮಾಡುತ್ತದೆ. ಈ ಲೇಖನಮಾಲೆ ಪದೇ ಪದೇ ಓದುತ್ತಲೇ ಇರುವಂತಹದ್ದು.
nil
ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ರಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ 'ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು 'ಬನವಾಸಿ ಮತ್ತು ಕದಂಬರ ಇತಿಹಾಸ" ಎಂಬ ಈ ಕೃತಿಯಲ್ಲಿ ಬನವಾಸಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕರೆನಿಸಿದ ಕದಂಬರ ಕುರಿತು ಸಮಗ್ರ ಮಾಹಿತಿಯನ್ನು ವಸ್ತುನಿಷ್ಠವಾಗಿ ಉಲ್ಲೇಖಿಸಿರುತ್ತಾರೆ. ಈ ಕೃತಿಯಲ್ಲಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕುರಿತಾಗಿದ್ದ ಪೂರ್ವಾಗ್ರಹಗಳು, ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯ ಆವರಣಕ್ಕೊಳಪಡಿಸಿದ್ದಾರೆ. ಅಂತೆಯೇ ಕದಂಬರ ರಾಜಕೀಯ ಇತಿಹಾಸ, ಬನವಾಸಿಯಲ್ಲಿ ನಡೆದ ಉತ್ಪನನಗಳು, ಕದಂಬರ ಶಾಸನಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ. ಕನ್ನಡ ನಾಡನ್ನು ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಇರಬೇಕಾದ ಕೃತಿ ಇದಾಗಿದೆ. ಪ್ರಕಾಶಕರು
ಎಸ್ ಜಯಶಂಕರ್
ನಾಗರಾಜ ದೊರೆ
ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಚರ್ಚೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪರಿಕಲ್ಪನೆಗಳಲ್ಲಿ ಬಹುತ್ವವೂ ಒಂದು ದೇಶದಲ್ಲಿ ಕಾವಳದಂತೆ ದಟ್ಟವಾಗಿ ಹಬ್ಬಿರುವ ವಿದ್ವೇಷದ ರಾಜಕೀಯ ವಾತಾವರಣಕ್ಕೂ, ಈ ಪರಿಕಲ್ಪನೆಯ ಚರ್ಚೆಗೂ ನಂಟಿದೆ. ಬರಗಾಲದಲ್ಲಿ ಮಳೆಯನ್ನು ಆವಾಹಿಸುವಂತೆ, ಚಾರಿತ್ರಿಕವಾದ ಒತ್ತಡಗಳಲ್ಲಿ ಪರಿಕಲ್ಪನೆಗಳು ಮೈದಳೆಯುತ್ತವೆ. ಬಿಕ್ಕಟ್ಟುಗಳ ಕಾಲದಲ್ಲಿ ನೆಮ್ಮದಿಯ ನಾಡನ್ನು ಕಟ್ಟಲು ಜರೂರಾದ ಪರಿಕಲ್ಪನೆಗಳನ್ನು ತಾತ್ವಿಕವಾಗಿ ರೂಪಿಸುವುದು ತಾತ್ವಿಕ ಹೊಣೆಗಾರಿಕೆ. ಆ ಪರಿಕಲ್ಪನೆಗಳನ್ನು ನಾಡಿನ ಸಂಕಟ ಸಂತಸ ಕನಸು ಚಿಂತನೆ ಸಂಭ್ರಮಗಳನ್ನು ಒಳಗೊಳ್ಳುವಂತೆ ಮಾಡುವುದು ಸಾಂಸ್ಕೃತಿಕ ತಿಳುವಳಿಕೆ ರೂಪಿಸುವ ಕೆಲಸ. ಇದು ಒಬ್ಬರಿಂದಾಗುವುದಲ್ಲ. ಸಾಮೂಹಿಕ ತೊಡಗುವಿಕೆ. ಒಮ್ಮೆಗೆ ಮುಗಿಯುವುದಲ್ಲ. ಚರ್ಚೆ ಸಂವಾದಗಳ ಮೂಲಕ ನಿರಂತರ ಮಾಡುತ್ತಲೇ ಇರಬೇಕಾದ್ದು.
Showing 2161 to 2190 of 3736 results