ಆನೆ ಬಂತೊಂದಾನೆ. ಯಾವೂರಾನೆ? ಇಲ್ಲಿಗ್ಯಾಕೆ ಬಂತು? ತಾಯಿ ಹುಡುಕಿಕೊಂಡು ಬಂತು. ತಾಯಿ ಸಿಗದೆ ಬೇಜಾರಾಗಿ, ಬಾಲ ಅಲ್ಲಾಡಿಸ್ಕೊಂಡು ಆಯ್ತು ಎನ್ನುವ ಶಿಶುಗೀತೆಯ ಎನ್ನುವ ಶಿಶುಗೀತೆಯನ್ನು ಗುಣುಗುಡುತ್ತಾ "ಭೈರ" ಎಂಬ ಈ ಮಕ್ಕಳ ಕಾದಂಬರಿ "ಭೈರಾಪುರ"ದ ಆನೆಯ ಹಿಂಡಿನ ಸುತ್ತಮುತ್ತ ಹೆಣೆದಿರುವ ಕಥಾನಕವಿದು. ನಮ್ಮ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವಾಗಲೂ ಆನೆಗಳ ಹಿಂಡಿನ ಹಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಂಚುಗಾರನಹಳ್ಳಿ ಸತೀಶ್ ಪರಿಸರ ಕಾಳಜಿಯುಳ್ಳ ಕಾದಂಬರಿಯನ್ನು ಹೊರತಂದಿದ್ದಾರೆ.
ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ.. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚಿತ್ರಗಳ ಬಿಡಿಸಿದ್ದಾರೆ. ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.