ನಾವು ಬದುಕನ್ನು ನೋಡುವ ರೀತಿ ಬದಲಿಸಿಕೊಂಡರೆ ಸಾಕು, ನಮಗೆ ಬಹಳಷ್ಟು ವಿಷಯಗಳು ಸಹ್ಯವಾಗುತ್ತವೆ. ಮನಸ್ಸಿನಲ್ಲಿದ್ದ ದುಃಖ, ದುಮ್ಮಾನಗಳು ಮರೆಯಾಗುತ್ತವೆ. ನಾನು ಬದುಕಿನಲ್ಲಿ ಎಂದಿಗೂ ಪರ್ಫೆಕ್ಷನ್ ಹುಡುಕಿದವನಲ್ಲ. ಏಕೆಂದರೆ ಇದು ಪರ್ಫೆಕ್ಟ್ ಎಂದು ಸರ್ಟಿಫಿಕೇಟ್ ಕೊಡುವವರು ಯಾರು? ಅದೇ ಪರ್ಫೆಕ್ಟ್ ಎನ್ನುವುದಕ್ಕೆ ಪುರಾವೆಯಾದರೂ ಏನಿದೆ? ಅಲ್ಲದೆ ಈ ಪರ್ಫೆಕ್ಟ್ ಎನ್ನುವುದು ಟೈಮ್ ಸೆನ್ಸಿಟಿವ್ ವಿಷಯ. ಇಂದು, ಈಗ ಪರ್ಫೆಕ್ಟ್ ಎನ್ನಿಸಿದ್ದು ಮರುಘಳಿಗೆ ಬದಲಾಗಿರಬಹುದಲ್ವಾ? ಸೃಷ್ಟಿಯಲ್ಲಿ ಯಾವುದೂ ಪೂರ್ಣವೂ ಅಲ್ಲ, ಯಾವುದೂ ಅಪೂರ್ಣವೂ ಅಲ್ಲ. ಪೂರ್ಣದ ತೃಣ ಅಪೂರ್ಣ, ಆದರೂ ತನ್ನ ಪರಿಧಿಯಲ್ಲಿ ಪೂರ್ಣ ಕೂಡ ಹೌದಲ್ಲ! ಸೃಷ್ಟಿಯಲ್ಲಿ “imperfect, impermanent and incomplete” ಅಷ್ಟೆ ಸತ್ಯ. ಹೀಗೆ ಪ್ರಕೃತಿಯಲ್ಲಿ ಇದ್ದದ್ದು ಇದ್ದಹಾಗೆ ನೋಡುವ ಪರಿಪಾಠಕ್ಕೆ ಜಪಾನೀಯರು `ವಾಬಿ ಸಬಿ' ಎನ್ನುತ್ತಾರೆ. ಜಪಾನ್ ಪ್ರವಾಸ ನನ್ನ ಹಲವಾರು ನಂಬಿಕೆಗಳಿಗೆ ನೀರೆರೆದಿದೆ. ಬದುಕೆಂದರೆ ಅದೊಂದು Endless Discovery!
nil