• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನಹುರಿ ಇಬುಕ್ | Narakada Kennaaligeyantha Ninna Bennahuri Ebook

ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!

₹130   ₹65

ನಾ ಸೆರೆ ಹಿಡಿದ ಕನ್ಯಾಸ್ತ್ರೀ ಇಬುಕ್ | Naa Sere Hidida kanyaastri Ebook

ಮನೆಯ ಎದುರೇ ಇರುವ ಹಸಿರುಕ್ಕುವ ಗದ್ದೆ ಬಯಲು ದಾಟಿ, ತೊರೆಯೊಂದರ ನೀರಿನಲ್ಲಿ ಕಾಲಾಡಿಸಿ, ಸನಿಹದ ಕಾಡಿನಲ್ಲಿ ನಡೆಯತೊಡಗಿದರೆ, ಸಿಹಿ ನೀರಿನ ಬುಗ್ಗೆ, ಹಾರುವ ಓತಿ, ಕನ್ಯಾಸ್ತ್ರೀ ಹೆಸರಿನ ಅಪರೂಪದ ಅಣಬೆ, ಬಕುಳದ ಹೂ, ಚೇಂಪಿ ಹಣ್ಣು – ಇವೆಲ್ಲವೂ ಕಾಣಸಿಗುತ್ತವೆ, ಆಪ್ತವಾಗುತ್ತವೆ. ಇಂತಹ ಅನುಭವಗಳಲ್ಲಿ ನೀವೂ ಭಾಗಿಯಾಗಬೇಕೆ? ಹಾಗಿದ್ದಲ್ಲಿ ಈ ಪುಸ್ತಕ ಓದಿ.

₹200   ₹100

ನಾತಿಚರಾಮಿ ಇಬುಕ್ | Naaticharami Ebook

‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ

₹150   ₹75

ನಿಮಗೆಷ್ಟು ಹಣ ಬೇಕು ಇಬುಕ್ | Nimageshtu Hana Beku Ebook

ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.

₹250   ₹125

ನಿಶ್ಚಲವ ಕಲಕಿದ ಹಕ್ಕಿ ಇಬುಕ್ | Nischalava Kalakida Hakki Ebook

ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.

₹100   ₹50

ನೀ ದೂರ ಹೋದಾಗ ಇಬುಕ್ | Nee Dura Hodaaga Ebook

ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ.

₹220   ₹110

ನೀಲಿ ಮತ್ತು ಸೇಬು ಇಬುಕ್ | Neeli Mattu Sebu Ebook

ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ.

₹180   ₹90

ನೀಲಿ ಶಾಯಿಯ ಕಡಲು ಇಬುಕ್ | Neeli Shayiya Kadalu Ebook

ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.

₹120   ₹60

ಪರದೆ ಮತ್ತಿತ್ತರ ಕಥೆಗಳು ಇಬುಕ್ | parade mattitara kathegalu Ebook

ಪ್ರಸನ್ನ ಅವರ ಪ್ರಮುಖ ಕಾಳಜಿ ಮನುಷ್ಯ ಭಿನ್ನ-ಭಿನ್ನ ಕಾಲಗಳಲ್ಲಿ ಹಿಮ ಸನ್ನಿವೇಶಗಳಲ್ಲಿ ಹೇಗೆ ಮತ್ತು ಎಷ್ಟು ಭಿನ್ನವಾಗಿ ನಡೆದುಕೊಳ್ಳುತ್ತಾನೆ ಎನ್ನುವುದನ್ನು ಅನ್ವೇಷಿಸುವುದು ಆಗಿದೆ. ಈ ಅನ್ವೇಷಣೆ ಸಾಧಾರಣವಾಗಿ ಮಧ್ಯಮ ವರ್ಗದ ಬದುಕಿನ ವ್ಯವಸ್ಥೆಯಲ್ಲಿ ಸಿಲುಕಿರುವ ಜನಗಳ ಮನೋಭಾವದ ಅನ್ವೇಷಣೆಯೇ ಆಗಿದೆ. ಈ ಗುಂಪಿನಲ್ಲಿ ಸರ್ಕಾರಿ ಮತ್ತು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರು. ನಿವೃತ್ತರು, ರಾಜಿನಾಮೆ ಕೊಟ್ಟವರು ಮುಂತಾದವರೆಲ್ಲ ಇದ್ದಾರೆ. ಅವರು ಇರುವುದು ತಮ್ಮ ತಮ್ಮ ದೌರ್ಬಲ್ಯಗಳ ಪ್ರತೀಕಗಳಾಗಿಯೇ ಹೌದು. ದೌರ್ಬಲ್ಯಗಳನ್ನು ಎದುರುಗೊಳ್ಳುವ, ಅದನ್ನು ನಿರ್ವಿಣ್ಣರಾಗಿ ಒಪ್ಪಿಕೊಳ್ಳುವ, ಎದುರಿಸುವ ಎಲ್ಲ ಬಗೆಯ ಜನಗಳನ್ನು ನಾವು ಈ ಕಥೆಗಳಲ್ಲಿ ಮುಖಾಮುಖಿಯಾಗುತ್ತೇವೆ.

₹230   ₹115

ಪರಸ್ಪರ ಮತ್ತಿತರ ಕತೆಗಳು ಇಬುಕ್ | Paraspara Mattitara Kathegalu Ebook

ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ

₹150   ₹75

ಪಿಂಕ್ ಮುಜಾಂಡಾ ಇಬುಕ್ | pink mujanda Ebook

ಬದುಕಿಗೆ? ಅಂದು ಅವಳ ಕಾರಣದಿಂದಲೇ ಸಮ್ಯಕ್ ನಿಂದ ಸಂಬಂಧ ಕಡಿದುಕೊಂಡೆ. ಇಂದು ಅವಳು ಕರೆದಿದ್ದಕ್ಕೆ ಮತ್ತದೇ ಹಳೆಯ ಜಾಗಕ್ಕೆ ಹೋಗುತ್ತಿದ್ದೇನೆ. ನಾವು ಭೇಟಿಯಾಗೋ ಪ್ರತಿ ವ್ಯಕ್ತಿಯೂ ಯಾವುದೋ ಉದ್ದೇಶಕ್ಕೆ ನಮಗೆ ಸಿಕ್ಕಿರುತ್ತಾರೆ ಅಂತಾರಲ್ಲ? ನಿಜವೇ? ಇರಲಾರದು. ನಮಗಾಗಿ ಯಾರು ಹೀಗೆಲ್ಲಾ ಪ್ಲಾನ್ ಮಾಡುತ್ತಾರೆ! ಎಲ್ಲವೂ ಕೋ-ಇನಸಿಡೆನ್ಸ್ ಅಷ್ಟೇ. ಲೈಫ್ ಇಸ್ ಅ ಕಲೆಕ್ಷನ್ ಆಫ್ ರಾಂಡಮ್ ಇನ್ಸಿಡೆನ್ಸ್ ಹೆಚ್ಚಿನ ಅರ್ಥಗಳನ್ನು ನಾವೇ ಕಂಡುಕೊಂಡು ಅದರೊಳಗೊಂದು ಸಣ್ಣ ಥ್ರಿಲ್ ಅನುಭವಿಸುತ್ತಿರುತ್ತೇವೆ ಮೇ ಬಿ?...

₹190   ₹95

ಪ್ಯಾಲೆಟ್ ಇಬುಕ್ | Pallette Ebook

ಇಲ್ಲೊಂದು ಹೊಸ ಲೋಕವಿದೆ.. ಓಹ್! ಒಂದು ಭಾವಸಮುದ್ರದಲ್ಲಿ ಮುಳುಗೇಳುವುದು ಅಂದರೆ ಏನು ಎನ್ನುವುದು ಗೊತ್ತಾಗಬೇಕಾದರೆ ಪಿ ಚಂದ್ರಿಕಾ ಅವರ ಈ 'ಪ್ಯಾಲೆಟ್' ಓದಬೇಕು. 'ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ' ಎಂದಾದಾಗ ಅವರು ಕಟ್ಟಿಕೊಡಲು ಹೊರಟಿದ್ದು ತನ್ನದೇ ಲೋಕವನ್ನು ಕಟ್ಟಿಕೊಟ್ಟ ಬರಹಗಳೆಲ್ಲವೂ ಅವರೇ ಬಣ್ಣಿಸಿಕೊಳ್ಳುವ ಹಾಗೆ ಅದು ತಾನು 'ಒಬ್ಬಳೆ ಆಡುವ ಆಟ'. ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುತ್ತಾರೆ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಬರಹಗಳಾಗಿಬಿಡುತ್ತದೆ. ಅವರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಈ 'ಪ್ಯಾಲೆಟ್' ನನ್ನನ್ನು ಹಲವು ಕಾಲ ತನ್ನ ತಿರುಗಣಿಯಲ್ಲಿ ಸಿಕ್ಕಿಸಿಕೊಂಡಿದೆ. ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ ಎನ್ನುತ್ತಾರೆ ಚಂದ್ರಿಕಾ. 'ಪ್ಯಾಲೆಟ್' ಓದಿದಮೇಲೆ ಅಂತಹ 'ಅದೃಷ್ಟ' ನನ್ನದಾಗಿದೆ. ಇದನ್ನು ಓದಿದ ನಂತರ ನಿಮಗೂ ಆ ಅದೃಷ್ಟ ಒಲಿಯಲಿದೆ.

₹230   ₹115

ಪ್ರಿಯ ಮೀರಾ ಇಬುಕ್ | PRIYA MEERA Ebook

"ನಮ್ಮ ಪ್ರೀತಿಪಾತ್ರರು ಸಾಧ್ಯವಾದಷ್ಟು ಕಾಲ ರಕ್ತಮಾಂಸದ ನಡುವೆ ಇರಲಿ ಎಂದು ಬಯಸುವುದೇ ನಿಜಕ್ಕೂ ಸ್ವಾರ್ಥ ಬಯಕೆ. ಇದು ನಮ್ಮ ದೌರ್ಬಲ್ಯದಿಂದ ಹುಟ್ಟಿಕೊಂಡಿದ್ದು ಅಥವಾ ಕಾಯವನ್ನು ತೊರೆದ ಬಳಿಕ ಅತ್ಯದ ಉಳಿವಿನ ಬಗ್ಗೆ ಇರುವ ನಂಬಿಕೆಯ ಫಲ. ಅಕಾರವು ಬದಲಾಗುತ್ತ ಬದಲಾಗುತ್ತ ಅಳಿದು ಹೋಗುತ್ತದೆ. ಆದರೆ ಮಾರ್ಗದರ್ಶಿಯಾದ ಚೈತನ್ಯವು ಬದಲಾಗುವುದೂ ಇಲ್ಲ, ಅಳಿದು ಹೋಗುವುದೂ ಇಲ್ಲ. ಪರಿಶುದ್ಧವಾದ ಪ್ರೀತಿಯು ಭೌತಿಕವಾದ ಕಾಯವನ್ನು ಮೀರಿ ಅಂತರಾತ್ಮವನ್ನು ಸೇರಿಕೊಂಡಾಗ ಅಗಣಿತ ಕಾಯಗಳಲ್ಲಿ ಇರುವ ಎಲ್ಲ ಜೀವಗಳಲ್ಲಿ ಏಕೀಭವಿಸುತ್ತದೆ..."

₹425   ₹213

ಪ್ರೀತ್ಸು ಇಬುಕ್ | Preetsu Ebook

ಇದು ಕಡಲ ತೀರದ ಹುಡುಗ ಮತ್ತು ಬಯಲು ಸೀಮೆಯ ಹುಡುಗಿಯರ ನಡುವಿನ ಒಂದು ನವಿರಾದ ಪ್ರೇಮ ಕಥೆ. ಹದಿಹರೆಯವನ್ನು ಆಗಷ್ಟೇ ದಾಟಿರುವ ಆದರೆ ಬದುಕಿನ ಬಗ್ಗೆ ಇನ್ನೂ ಪ್ರೌಢರಾಗಬೇಕಾದ ಯುವ ಮನಸುಗಳ ಪ್ರೇಮಕಥೆ.

₹170   ₹85

ಫಾರೆಸ್ಟರ್ ಪೊನ್ನಪ್ಪ ಇಬುಕ್ |Forester Ponnappa Ebook

ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಹೆಣ್ಣು, ಹಣದ ಹಿಂದೆ ಹೋಗಿ ಕೊನೆಗೆ ಭಿಕ್ಷೆ ಬೇಡುವಂತಾದವನ ದುರಂತ! ದಾರಿ ತಪ್ಪಿದ ಮಗನಿಗಾಗಿ ಚಡಪಡಿಸುವ ಹಿರಿಜೀವಗಳ ದಾರುಣ ಪರಿಸ್ಥಿತಿ! ಗುಡ್ಡಗಾಡಿನ ವಾಸ್ತವತೆ ಮತ್ತು ಅಂತರಾತ್ಮ. ಮರಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಅರಣ್ಯಾಧಿಕಾರಿಯೊಬ್ಬರ ರೋಚಕ ಕಥೆ (ಜೀವನಚರಿತ್ರೆ)

₹300   ₹150

ಫೀನಿಕ್ಸ್ ಇಬುಕ್ | Phoenix Ebook

ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.

₹120   ₹60

ಬದುಕೇ ಭಗವಂತ ಇಬುಕ್ | Baduke Bhagavanta Ebook

ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ. ಶ್ರೀಯುತರಾದ ತರಾಸು ಅನಕೃ ಎಸ್ ಕೆ ಕರೀಂಖಾನ್ ಮುಂತಾದವರ ಜೀವನದ ಮೇಲೆ ಒಂದಿಷ್ಟು ಬೆಳಕು ಚೆಲ್ಲುತ್ತಾರೆ. ಅವರು ಸಂದರ್ಭಕ್ಕೆ ತಕ್ಕಂತೆ ಉದಾಹರಣೆ ನೀಡಿರುವ ಖ್ಯಾತ ಕವಿಗಳ ಕವನಗಳ ಸಾಲು ನಮ್ಮಲ್ಲಿ ಚಿಂತನೆ ಉಂಟುಮಾಡುತ್ತದೆ. ಈ ಲೇಖನಮಾಲೆ ಪದೇ ಪದೇ ಓದುತ್ತಲೇ ಇರುವಂತಹದ್ದು.

₹170   ₹85