• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ಕವಚ ಇಬುಕ್ | Kavacha Ebook

ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..

₹185   ₹93

ಕಾಗೆ ಮೇಷ್ಟ್ರು ಇಬುಕ್ | kage Meshtru Ebook

ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ.

₹125   ₹63

ಕುಣಿಗಲ್ ಟು ಕಂದಹಾರ್ ಇಬುಕ್ | Kunigal to Khandahar Ebook

ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.

₹260   ₹130

ಕೃಷಿ ಯಾಕೆ ಖುಶಿ? ಇಬುಕ್ | Krushi Yake Kushi? Ebook

ಬಹಳ ಹಿಂದೆ ಪೂರ್ಣಚಂದ್ರ ತೇಜಸ್ವಿಯವರಿಗೊಂದು ಪ್ರಶ್ನೆ ಕೇಳಿದ್ದೆ. “ನೀವು ಮೊದಮೊದಲು ಕಥೆ, ಕಾದಂಬರಿ, ಕಾವ್ಯ, ನಾಟಕ ಇತ್ಯಾದಿಗಳನ್ನು ಬರೆದವರು. ನಿಧಾನವಾಗಿ ಈಗ ನಿಮ್ಮ ಮನಸ್ಥಿತಿ ಬರೀ ಪರಿಸರಕ್ಕಷ್ಟೇ ಸೀಮಿತವಾದಂತಿದೆ. ಏನು ಕಾರಣ?” ಎಂದು. “ಕಾವ್ಯ, ಕಾದಂಬರಿ, ಕಥೆ ಇವೆಲ್ಲ ಮನುಷ್ಯ ತಲೆ, ಸೃಜನಶೀಲತೆಯ ಕೆನೆಪದರ, ತಲೆ ಉಳಿದಾಗ ಮಾತ್ರ ಇವೆಲ್ಲ ಹುಟ್ಟುತ್ತದೆ.

₹140   ₹70

ಕೈ ಹಿಡಿದು ನೀ ನಡೆಸು ತಂದೆ ಇಬುಕ್ | Kai Hididu Nee Nadesu Tande Ebook

ಇದೊಂದು ತಂದೆ, ಮಗನ ಬೆಳವಣಿಗೆಗೆ ಕೊಡುವ ಟಿಪ್ಸ್ ಪುಸ್ತಕವಾಗಿದೆ. ಹೆಚ್ಚೆಂದರೆ ಹತ್ತು ಸಾಲುಗಳಲ್ಲಿ ವಿಶ್ವವಾಣಿ ಸಂಪಾದಕರು, ಲೇಖಕರೂ ಆದ ವಿಶ್ವೇಶ್ವರ ಭಟ್ ಅವರು ಮಗನಿಗೆ ತಂದೆ ನೀಡುವ ಸದ್ವಿಚಾರಗಳ ಆಣಿಮುತ್ತುಗಳಾಗಿವೆ. ಮಗನಿಗೆ ನೇರವಾಗಿ ಹೇಳುವ ಧಾಟಿಯಲ್ಲಿರುವ ಇಲ್ಲಿನ ಬರಹಗಳು ಬಹಳ ಆಪ್ತವಾಗಿವೆ. ‘ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟು’ ಎನ್ನುವ ಹಾಗೆ; ಮಗನ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವ ಅಪರೂಪದ ಪುಸ್ತಕವಾಗಿದೆ. ನಿಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ-ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕಾಗಿ ನೀವು ಓದಲೇಬೇಕಾದ ಪುಸ್ತಕವಿದು. ಮಗನಿಗೆ ಅಪ್ಪ ಯಾವತ್ತೂ ಒಳ್ಳೆಯ ಸ್ನೇಹಿತ ಎಂಬುದು ಈ ಪುಸ್ತಕದ ಸಂದೇಶವಾಗಿದೆ.

₹250   ₹125

ಕ್ರಿಕೆಟಾಯಣ ಇಬುಕ್ | Cricketayana Ebook

ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ… ಎಲ್ಲವೂ ಇದೆ.

₹230   ₹115

ಕ್ಷಯ ಇಬುಕ್ | Kshaya Ebook

‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಾತ್ರ ಚಿಕ್ಕದಿರಲಿ – ದೊಡ್ಡದಿರಲಿ ಮೂಲ ಕಥಾವಸ್ತುವಿನೊಂದಿಗೆ ನ್ಯಾಯಯುತ ಸಾವಯವ ಸಂಬಂಧವನ್ನು ಹೊಂದಿರುವುದು ಕಾದಂಬರಿಯ ಬಂಧದ ಒಂದು ವಿಶೇಷ.

₹120   ₹60

ಖದೀಜಾ (ಐತಿಹಾಸಿಕ ಕಾದಂಬರಿ) ಇಬುಕ್ | Khadeeja - A Historical Novel Ebook

ಹಿಂದಿನದು ಬೇರೆ. ಇಂದು ಮಾತ್ರ ಮನುಷ್ಯನ ಜೀವನದ ಹಲವು ವ್ಯವಹಾರಗಳಲ್ಲಿ ಸಾಹಿತ್ಯವು ಒಂದು ಎನ್ನುವುದರತ್ತ ಅದರ ಬೆಳವಣಿಗೆ ಇದೆ. ಆದರೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾದ ಮರುಕ್ಷಣವೇ ಸಾಹಿತ್ಯವೂ ಸಗಟು ಅಷ್ಟೇ.

₹215   ₹108

ಗದಾಯುದ್ಧಂ ಇಬುಕ್ | Gadaayuddam Ebook

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ.

₹350   ₹175

ಗೌಡ ಪರಂಪರೆ ಇಬುಕ್ | Gouda Parampare Ebook

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ

₹325   ₹163

ಚಂದ್ರಾ ಲೇಔಟ್ ಇಬುಕ್ | Chandra Layout Ebook

ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ.

₹135   ₹68

ಚಿಕ್ಕಪುಟ್ಟಮ್ಮನವರ ಗೃಹನ್ಯಾಯ ಇಬುಕ್ | Chikkaputtammanavara Gruhanyaya Ebook

ಇಲ್ಲಿರುವ ಕತೆಗಳು ಕೂಡ ಸ್ತ್ರೀ ಸಂವೇದನೆಯ ಸುತ್ತ ಸುತ್ತುವ ಕತೆಗಳಾಗಿದ್ದು, ಸಾಮಾಜಿಕ ಹಾಗು ಕೌಟುಂಬಿಕ ನೆಲೆಯಲ್ಲಿ ಹೆಣ್ಣಿನ ತುಮುಲಗಳು, ಹುಡುಕಾಟ, ಸ್ಥಿತಪ್ರಜ್ಞೆ, ಜವಾಬ್ದಾರಿಗಳು, ಎದುರಿಸಬೇಕಾದ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಪದರು ಪದರುಗಳಾಗಿ ಬಿಡಿಸಿ ಹೇಳಲಾಗಿದೆ.

₹140   ₹70

ಚಿತ್ರ-ವಿಚಿತ್ರ ಇಬುಕ್ | Chitra Vichitra Ebook

ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ.. ಇವೆಲ್ಲಕ್ಕಿಂತ ಮೀರಿದ ಒಂದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?

₹220   ₹110

ಜಗತ್ತಿನ ಭೀಕರ ಯುದ್ಧಗಳು ಇಬುಕ್ | Jagattina Bheekara Yuddhagalu Ebook

ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು

₹495   ₹248

ಜನ ನಾಯಕ ಇಬುಕ್ | Jananayaka Ebook

ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ

₹125   ₹63

ಜನಮಿತ್ರ ಅರಸು ಇಬುಕ್ | Janamitra Arasu Ebook

ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ.

₹80   ₹40

ಟ್ರಾಯ್ ಇಬುಕ್ | Troy Ebook

ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .

₹200   ₹100

ತ್ಯಾಗಕ್ಕಿಲ್ಲ ನೂಕುನುಗ್ಗಲು ಇಬುಕ್ | Tyaagakkilla Nookunuggalu Ebook

ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.

₹140   ₹70

ನಗು ಎಂದಿದೆ ಮಂಜಿನ ಬಿಂದು ಇಬುಕ್ | Nagu Endide Manjina Bindu Ebook

ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದು ಅನಿವಾರ್ಯವಾಗಿ ಶಾಸ್ತ್ರಿಗಳ ಮನೆ ಸೇರುವ ಸೌಭಾಗ್ಯಳಿಗೆ ವಾದ್ಯ, ಸಂಗೀತಗಳಲ್ಲಿ ಆಸಕ್ತಿ. ಶಾಸ್ತ್ರಿಯವರ ಬಳಿ ಸಂಗೀತ ಅಭ್ಯಾಸ ಮಾಡಿ ಪಕ್ಕದ ಮನೆಯವರ ಬಳಿ ವೀಣೆ ನುಡಿಸುವುದನ್ನು ಕಲಿತರೂ ಅವಳ ಪ್ರತಿಭೆಗೆ ಅವಕಾಶವಿರುವುದಿಲ್ಲ. ಶಾಸ್ತ್ರಿಗಳೇ ತಮ್ಮ ಬೆಂಗಳೂರಿನ ಗೆಳೆಯ ಅವಧಾನಿಯ ಬಳಿಗೆ ಕಳುಹಿಸಿ ಅವಳ ಪ್ರತಿಭೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಅವಧಾನಿಗಳ ಮನೆ ಕೂಡ ಸಂಗೀತಾರಾಧನೆಯ ದೇಗುಲ. ಅವರ ಮಗ ಮುರಳಿಗೆ ಇದು ಒಮ್ಮತವಿಲ್ಲದ್ದು. ತನಗೆ ಅದೃಷ್ಟ ದೊರಕಿತೆಂದು ಸೌಭಾಗ್ಯ ಹರ್ಷಿಸುತ್ತಿರುವಾಗಲೇ ಜಿ ಮನೆಯಿಂದ ಹೊರಹೋಗಬೇಕಾದ ಸನ್ನಿವೇಶ ಏರ್ಪಡುತ್ತದೆ. ಅವಳು ನೊಂದುಕೊಂಡರು ಜೀವನೋಪಾಯಕ್ಕಾಗಿ ತನ್ನ ಪ್ರತಿಭೆಯನ್ನು ಬಳಸಿಕೊಳ್ಳುವುದು ಸಮಂಜಸವೆನಿಸಿ, ಮುಗ್ಗಳಾದ ಆಕೆ ಪತ್ರಿಕೆಯ ಜಾಹೀರಾತು ನೋಡಿ ಅಲ್ಲಿಗೆ ಹೋಗುತ್ತಾಳೆ. ಅವಳ ಪ್ರತಿಭೆಗೆ ಸದಾವಕಾಶವಿದ್ದರೂ ಅದು ಸರಿಯಾದ ಸ್ಥಳವಲ್ಲವೆನ್ನುವುದು ತಿಳಿಯುತ್ತದೆ. ಮುಂದೆ ಅವಳ ಬದುಕಿನಲ್ಲಿ ಸಂಕರ್ಷ ನೆನ್ನುವ ಆಧುನಿಕ ಮನೋಭಾವದ ಯುವಕನ ಪ್ರವೇಶವಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ಸಾಗುವ ಬದುಕು ಇದ್ದಕ್ಕಿದ್ದಂತೆ ಸಂಕಷ್ಟಕ್ಕಿದಾಗುತ್ತದೆ. ಸಂಕರ್ಷ್, ಆಕರ್ಷ್. ಮುರಳಿ ಅವಳ ಬದುಕಿನಲ್ಲಿ ಮೂಡಿದ ಮಂಜಿನ ಬಿಂದುಗಳಾಗುತ್ತಾರೆಯೇ? ಅವಳ ಕನಸುಗಳು ಸಾಕಾರಗೊಳ್ಳುತ್ತವೆಯೇ? ಇವಕ್ಕೆಲ್ಲ ಉತ್ತರ... ನಗು ಎಂದಿದೆ... ಕಾದಂಬರಿಯಲ್ಲಿದೆ.

₹210   ₹105

ನಂಬಿಕೆಯೆಂಬ ಗಾಳಿಕೊಡೆ ಇಬುಕ್ | Nambikeyemba Galikode Ebook

ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ

₹180   ₹90