nil
ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದು ಅನಿವಾರ್ಯವಾಗಿ ಶಾಸ್ತ್ರಿಗಳ ಮನೆ ಸೇರುವ ಸೌಭಾಗ್ಯಳಿಗೆ ವಾದ್ಯ, ಸಂಗೀತಗಳಲ್ಲಿ ಆಸಕ್ತಿ. ಶಾಸ್ತ್ರಿಯವರ ಬಳಿ ಸಂಗೀತ ಅಭ್ಯಾಸ ಮಾಡಿ ಪಕ್ಕದ ಮನೆಯವರ ಬಳಿ ವೀಣೆ ನುಡಿಸುವುದನ್ನು ಕಲಿತರೂ ಅವಳ ಪ್ರತಿಭೆಗೆ ಅವಕಾಶವಿರುವುದಿಲ್ಲ. ಶಾಸ್ತ್ರಿಗಳೇ ತಮ್ಮ ಬೆಂಗಳೂರಿನ ಗೆಳೆಯ ಅವಧಾನಿಯ ಬಳಿಗೆ ಕಳುಹಿಸಿ ಅವಳ ಪ್ರತಿಭೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಅವಧಾನಿಗಳ ಮನೆ ಕೂಡ ಸಂಗೀತಾರಾಧನೆಯ ದೇಗುಲ. ಅವರ ಮಗ ಮುರಳಿಗೆ ಇದು ಒಮ್ಮತವಿಲ್ಲದ್ದು. ತನಗೆ ಅದೃಷ್ಟ ದೊರಕಿತೆಂದು ಸೌಭಾಗ್ಯ ಹರ್ಷಿಸುತ್ತಿರುವಾಗಲೇ ಜಿ ಮನೆಯಿಂದ ಹೊರಹೋಗಬೇಕಾದ ಸನ್ನಿವೇಶ ಏರ್ಪಡುತ್ತದೆ. ಅವಳು ನೊಂದುಕೊಂಡರು ಜೀವನೋಪಾಯಕ್ಕಾಗಿ ತನ್ನ ಪ್ರತಿಭೆಯನ್ನು ಬಳಸಿಕೊಳ್ಳುವುದು ಸಮಂಜಸವೆನಿಸಿ, ಮುಗ್ಗಳಾದ ಆಕೆ ಪತ್ರಿಕೆಯ ಜಾಹೀರಾತು ನೋಡಿ ಅಲ್ಲಿಗೆ ಹೋಗುತ್ತಾಳೆ. ಅವಳ ಪ್ರತಿಭೆಗೆ ಸದಾವಕಾಶವಿದ್ದರೂ ಅದು ಸರಿಯಾದ ಸ್ಥಳವಲ್ಲವೆನ್ನುವುದು ತಿಳಿಯುತ್ತದೆ. ಮುಂದೆ ಅವಳ ಬದುಕಿನಲ್ಲಿ ಸಂಕರ್ಷ ನೆನ್ನುವ ಆಧುನಿಕ ಮನೋಭಾವದ ಯುವಕನ ಪ್ರವೇಶವಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ಸಾಗುವ ಬದುಕು ಇದ್ದಕ್ಕಿದ್ದಂತೆ ಸಂಕಷ್ಟಕ್ಕಿದಾಗುತ್ತದೆ. ಸಂಕರ್ಷ್, ಆಕರ್ಷ್. ಮುರಳಿ ಅವಳ ಬದುಕಿನಲ್ಲಿ ಮೂಡಿದ ಮಂಜಿನ ಬಿಂದುಗಳಾಗುತ್ತಾರೆಯೇ? ಅವಳ ಕನಸುಗಳು ಸಾಕಾರಗೊಳ್ಳುತ್ತವೆಯೇ? ಇವಕ್ಕೆಲ್ಲ ಉತ್ತರ... ನಗು ಎಂದಿದೆ... ಕಾದಂಬರಿಯಲ್ಲಿದೆ.