| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ. ದಯಾನಂದ ಈ. ನೂಲಿ | Dr. Dayananda E Nooli |
| Publisher: | |
| Language: | Kannada |
| Number of pages : | 1385 |
| Publication Year: | 2026 |
| Weight | 1000 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
..
ಸ್ವಾನುಭಾವದ ನೆಲೆಯಲ್ಲಿ - ಇದೊಂದು ಅಂತರ್ಜಾಲ ಸತ್ಸಂಗ ವೇದಿಕೆ. ಇಲ್ಲಿ ಶರಣ ಸಾಹಿತ್ಯಾಸಕ್ತರು ಸದ್ಭಾವಗೋಷ್ಠಿಗಳನ್ನು ನಡೆಸುತ್ತಾರೆ. ಈ ವೇದಿಕೆಯಿಂದ ಡಾ. ದಯಾನಂದ ನೂಲಿಯವರು ನೀಡಿರುವ ನೂರಾರು ವ್ಯಾಖ್ಯಾನಗಳ ಸಂಪುಟವೇ ಈ ಶರಣರ ಶಿವಯೋಗ.
ಡಾ. ನೂಲಿಯವರು ವೈದ್ಯವಿಜ್ಞಾನ ಓದಿದವರು. ವೃತ್ತಿಯಲ್ಲಿ ಸರ್ಜನ್ನರು. ಪ್ರವೃತ್ತಿಯಲ್ಲಿ ಶರಣ ಸಾಹಿತ್ಯ ಅಭ್ಯಾಸಿಗಳು. ಅವರ ವೃತ್ತಿ-ಪ್ರವೃತ್ತಿಗಳು ಸಂಗಮಿಸಿ, ಶರಣರ ಶಿವಯೋಗ ಮಹಾಕೃತಿ ಸಂಭವಿಸಿದೆ. ಶರಣರ ಶಿವಯೋಗವು ಧರ್ಮವನ್ನು ಮೀರಿದ ವಿಜ್ಞಾನವೆಂಬ ಸತ್ಯವನ್ನು ಡಾ. ನೂಲಿಯವರು ಸವಿವರವಾಗಿ, ಸಚಿತ್ರವಾಗಿ ಸಾದರಪಡಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ.
ಕೃತಿಯ ಒಳವಿನ್ಯಾಸವು ಮೂರು ಭಾಗಗಳನ್ನು ವ್ಯಾಪಿಸಿದೆ. ಆರಂಭದ ಪೀಠಿಕಾ ಭಾಗವು, ಶರಣಧರ್ಮವು ವೈಜ್ಞಾನಿಕ ಧರ್ಮವಾಗಿ ನಮ್ಮನ್ನು ಒಳಗೊಳ್ಳುವ ಮತ್ತು ನಮ್ಮೊಳಗನ್ನು ಬೆಳಗುವ ವಿವರಗಳಿಂದ ಆಪ್ತವಾದ ಪ್ರವೇಶಿಕೆಯನ್ನು ಒದಗಿಸುತ್ತದೆ. ಮೊದಲ ಭಾಗ-ಶರಣರ ಶಿವಯೋಗದ ಅಧ್ಯಯನಾಂಗ, ಸಾಧಕನು ಇಷ್ಟಲಿಂಗದ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸುವ ಸಹಜದಿಂದ ಶೂನ್ಯದವರೆಗಿನ ವಿಕಸನದ ವಿವಿಧ ಹಂತಗಳ ಅಧ್ಯಯನವಿದೆ. ಎರಡನೆಯದು. ಶಿವಯೋಗದ ಸಾಧನಾಂಗ. ಅಂಗನು ಲಿಂಗಮುಖಿಯಾಗಿ ಚಲಿಸುವಾಗಿನ ಸಾಧನೆಯ ವಿಸ್ತ್ರತ ವಿವರಗಳಿವೆ. ಮೂರನೆಯದು, ಶಿವಯೋಗದ ಪ್ರಯೋಗಾಂಗ. ಇಲ್ಲಿ ಇಷ್ಟಲಿಂಗ ಪೂಜೆಯ ವಿಧಾನ ಮತ್ತು ಅದರ ವೈಜ್ಞಾನಿಕ ಒಳನೋಟಗಳಿವೆ.
ಶರಣರ ಕನ್ನಡ, ಕನ್ನಡ ಅಕ್ಷರಗಳಿಗಿರುವ ಆಧ್ಯಾತ್ಮಿಕ ಶಕ್ತಿಯತ್ತ ಕೃತಿ ಗಮನ ಸೆಳೆಯುತ್ತದೆ. ಮುಖ್ಯ ಸಂಗತಿಯೆಂದರೆ, ಶರಣರ ಶಿವಯೋಗವು ಸಹಸ್ರಾರ ಚಕ್ರಕ್ಕೆ ನಿಲ್ಲುವುದಿಲ್ಲ. ಅದನ್ನು ದಾಟಿ ಶಿಖಾಚಕ್ರ, ಪಶ್ಚಿಮಚಕ್ರ, ಅಣುಚಕ್ರಕ್ಕೆ ಏರಿ ಬಯಲು ಬದುಕನ್ನು ಅನುಭವಿಸುವ ಪರಿಯನ್ನು ಸಾಧಕರಿಗೆ ಮನವರಿಕೆ ಮಾಡುತ್ತದೆ. ಲಿಂಗಗಳು, ಅವುಗಳ ಸ್ಥಲಗಳು, ಚಕ್ರಗಳು, ಅವು ಪ್ರತಿನಿಧಿಸುವ ತತ್ವಗಳು, ಅವುಗಳಿಗಿರುವ ಭಕ್ತಿಗಳು, ಲಭಿಸುವ ಶಕ್ತಿಗಳು, ಅಕ್ಷರಗಳು- ಇವುಗಳ ವಿಸ್ತಾರವಾದ ಚರ್ಚೆಯು ಡಾ. ನೂಲಿಯವರ ತಲಸ್ಪರ್ಶಿ ಅಧ್ಯಯನಕ್ಕೆ ನಿದರ್ಶನವಾಗಿದೆ.
ಶರಣರ ವಚನಗಳನ್ನು ಯೋಗವಿಜ್ಞಾನ, ಜೀವವಿಜ್ಞಾನದ ನೆಲೆಯಲ್ಲಿ ವಿಶ್ಲೇಷಿಸಿ, ಶಿವಯೋಗವನ್ನು ನಿರೂಪಿಸುವ-ಮನುಷ್ಯನ ಜಗದಗಲ ಮುಗಿಲಗಲ ವ್ಯಕ್ತಿತ್ವದ ವಿರಾಟ್ ದರ್ಶನವನ್ನು ಮಾಡಿಸುವ ಮಹೋನ್ನತವಾದ ಕೃತಿ ಇದಾಗಿದೆ. ಇಂಥ ಮಹಾನ್ ಕೃತಿ ರಚಿಸಿದ ಡಾ. ದಯಾನಂದ ನೂಲಿಯವರಿಗೆ ಶರಣು ಶರಣಾರ್ಥಿಗಳು,
ಡಾ. ರಾಮಕೃಷ್ಣ ಮರಾಠ.
ಡಾ. ದಯಾನಂದ ಈ. ನೂಲಿ | Dr. Dayananda E Nooli |
0 average based on 0 reviews.