
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ಪ್ರಜ್ವಲಾ ಶೆಣೈ ಕಾರ್ಕಳ | Prajwala shenoy karkala |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978-81-986606-5-7 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇರುವುದೊಂದೇ ಬದುಕು ಹೊತ್ತು ಮೀರುವ ಮುನ್ನ ಕಳೆದುಬಿಡು. ನೂರು ದೂರುಗಳ ದೂರ ನೂಕದಿದ್ದರೆ ದೂರುವುದೇ ಬದುಕಾದೀತು!! ಅವಕಾಶಗಳೆಂಬ ದೊಡ್ಡ ಆಕಾಶ ನಿಮ್ಮ ಮುಂದಿದೆ, ಆಯ್ಕೆಯೋ? ಅನಿವಾರ್ಯತೆಯೋ? ಒಳ್ಳೆಯ ಬದುಕು ಕಟ್ಟೋಣ. ದುರದೃಷ್ಟದಲ್ಲೂ ಅದೃಷ್ಟ ಕಾಣುವ ಬದುಕು ಬದಲಿಸುವ ಹೆಜ್ಜೆಗಳನ್ನಿಡಬೇಕು. ಇಬ್ಬಗೆಯ ಮನಸ್ಥಿತಿಗೆ ಮನೋಸ್ಥೆರ್ಯವೇ ಮದ್ದು ಜೀವನ ಒಂದು ಚದುರಂಗದಾಟ, ಜಗವೇ ಒಂದು ನಾಟಕ ರಂಗ. ದೊಡ್ಡವರ ಸಣ್ಣತನಕ್ಕೆ ನಿರ್ಲಿಪ್ತನಾಗಿರು. ವಿನಾಶಕಾಲೇ ವಿಪರೀತ ಬುದ್ದಿ ಎಂದು ತಿಳಿದು, ಮೌನಂ ಅಸಮ್ಮತಿ ಲಕ್ಷಣಂ ಎಂದು ನಿನ್ನ ಪಾಡಿಗೆ ನೀನಿದ್ದುಬಿಡು. ಕಾಲಾಯ ತಸ್ಮಿನಮಃ, ಮಾತು ವ್ಯಕ್ತಿತ್ವದ ಕೈಗನ್ನಡಿ ಧೈರ್ಯದಿಂದ ಬದುಕನ್ನು ಎದುರಿಸಬೇಕು. ಯಾರ ಅನುಕಂಪ ಬೇಕಿಲ್ಲ ಆತ್ಮವಿಶ್ವಾಸವಿದ್ದರೆ ಸಾಕು. ಇಚ್ಚಾಶಕ್ತಿ ಎನ್ನುವ ಮಹಾ ಶಕ್ತಿ ಜೊತೆಗಿದ್ದರೆ ಏಕಾಂಗಿ ಪಯಣದಲ್ಲೂ ಯಶಸ್ಸು ನಿನ್ನದೇ. ಸಮಯವೊಂದು ಅದ್ಭುತ ಗಡಿಯಾರ, ಕಾಲಹರಣವೇ ಮರಣ, ಉದಾಸೀನ ಬಿಟ್ಟು ಭರವಸೆಯ ಹೆಜ್ಜೆಯಿಡು. ರೆಕ್ಕೆ ಮುರಿದ ಹಕ್ಕಿ ಮೇಲೆ ಹಾರಿತು ಹೇಗೆ ಎಂದು ತಲ್ಲಣಿಸದಿರು ಮನವೇ. ಉಸಿರು ನಿಂತ ಮೇಲೆ ಜೀವ ಮರಳುವುದೇ ಎನ್ನುವ ಆತಂಕ ಬೇಡ. ಓ ಮನಸೇ ನೀನೇಕೆ ಹೀಗೆ ಎನ್ನುವ ದ್ವಂದ ಬೇಡ. ಮನಸ್ಸು ಒಂದು ಅಯಸ್ಕಾಂತ ಒಳಿತು ಕೆಡುಕುಗಳನ್ನು ಸಮಾನವಾಗಿ ಆಕರ್ಷಿಸಿಕೊಳ್ಳುತ್ತದೆ ಬದುಕೆನ್ನುವ ಪಾಠಶಾಲೆಯು ನಿತ್ಯವೂ ನನ್ನೊಳಗಿನ ನಾನು ಯಾರು? ನನಗೇನು ಬೇಕು? ನನ್ನ ಗುರಿ ಏನು? ಮುಂದಿನ ದಾರಿ ಯಾವುದು? ಎಂದು ಅರಿಯಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ನಿನ್ನನ್ನು ನೀನು ಅರಿಯಲು ಆರಂಭಿಸಿ ಗೌರವ ಮತ್ತು ಪ್ರೀತಿಯಿಂದ ಕಾಣುವ ಮೊದಲ ವ್ಯಕ್ತಿ ನೀನೆ ಆಗಬೇಕು, ಆಗ ನಿನಗೆ ನೀನೇ ಬೆಳಕು.ಆಕರ್ಷಕ ಶೀರ್ಷಿಕೆಗಳಿಂದ ಕೂಡಿರುವ ಸ್ಫೂರ್ತಿದಾಯಕ ಲೇಖನಗಳನ್ನೊಳಗೊಂಡ ಕೃತಿ ನಿನಗೆ ನೀನೇ ಬೆಳಕು. ಪುಸ್ತಕ ಓದುವ ಶಿಕ್ಷಕರಿದ್ದರೆ ಶಿಕ್ಷಕ ವೃತ್ತಿಗೇ ಭೂಷಣ.ಓದುವ ಹವ್ಯಾಸದೊಂದಿಗೆ ಬರವಣಿಗೆಯ ಕಲೆಯೂ ಒಲಿದಿರುವ ಶಿಕ್ಷಕಿ ಪ್ರಜ್ವಲಾ ಶೆಣೈಯವರ ಲೇಖನಿಯಿಂದ ಇನ್ನಷ್ಟು ಬೆಳಕು ಮೂಡಿಸುವ ಪುಸ್ತಕಗಳು ಓದುಗರ ಕೈ ಸೇರಲಿ ಎನ್ನುವ ಶುಭ ಹಾರೈಕೆಯೊಂದಿಗೆ...
ಡಾ|| ವಿರೂಪಾಕ್ಷ ದೇವರಮನೆ
ಪ್ರಜ್ವಲಾ ಶೆಣೈ ಕಾರ್ಕಳ | Prajwala shenoy karkala |
0 average based on 0 reviews.