| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | K V narayana | ಕೆ ವಿ ನಾರಾಯಣ |
| Publisher: | Jeerunde Books |
| Language: | Kannada |
| Number of pages : | 158 |
| Publication Year: | 2026 |
| Weight | 150 |
| ISBN | 978-81-995528-1-4 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಲೆಗಳಲ್ಲಿ ಮದುಮಗಳು ಕಾದಂಬರಿಯ ಘಟನೆಗಳು ನಡೆದ ಕಾಲ ಮತ್ತು ಆ ಘಟನೆಗಳನ್ನು ನಿರೂಪಿಸುತ್ತಿರುವ ಕಾಲ ಇವೆರಡೂ ಬೇರೆ ಬೇರೆ. ಮೊದಲನೆಯದು ಆಧುನಿಕ ಪೂರ್ವ ಕಾಲ; ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಕಾಲ. ಕಾದಂಬರಿಯನ್ನು ಬರೆಯುತ್ತಿರುವ ಕಾಲದ ಹೊತ್ತಿಗೆ ಆಧುನಿಕತೆ ಹಲವು ಬಗೆಗಳಲ್ಲಿ ಬದುಕಿನ ಭಾಗವಾಗಿತ್ತು. ಈ ಕಾಲಗಳ ಅಂತರ ಕಾದಂಬರಿಯಲ್ಲಿ ಎರಡು ಸ್ತರಗಳನ್ನು ರೂಪಿಸಿದೆ. ಈ ಎರಡೂ ಸ್ತರಗಳು ಹೇಗೆ ಬೆರೆಯುತ್ತವೆ ಇಲ್ಲವೇ ಮುಖಾಮುಖಿಯಾಗುತ್ತವೆ ಎನ್ನುವುದನ್ನು ತಿಳಿಯಬೇಕಿದೆ. ಲೋಕದ ಹಲವು ಶ್ರೇಷ್ಟ ಕೃತಿಗಳು ಈ ಕಾಲದ ಅಂತರದ ಬಿಕ್ಕಟ್ಟನ್ನು ಎದುರಿಸಿವೆ. ಈ ಕಾದಂಬರಿಯಲ್ಲಿ ಅದು ನಿರ್ವಹಣೆಗೊಂಡಿರುವ ಬಗೆಯನ್ನು ಅರಿಯಬೇಕಿದೆ.
ಇದಲ್ಲದೆ ಕಾದಂಬರಿಯನ್ನು ಓದುತ್ತಿರುವವರ ಕಾಲ ಒಂದಿದೆ. ಆಧುನಿಕತೆಯನ್ನು,ಅದರ ಪರಿಣಾಮಗಳನ್ನು ಸಂದೇಹದಿಂದ ನೋಡುತ್ತಿರುವ ಕಾಲವಿದು. ಈ ಕಾಲದ ಓದುಗರು ಕಾದಂಬರಿಯ ಘಟನೆಗಳು ನಡೆದ ಕಾಲವನ್ನು ಅಧಿಕೃತವಾಗಿ ಮಂಡಿಸಿರುವುದನ್ನು ಗ್ರಹಿಸುತ್ತಾರೆ. ಜೊತೆಗೆ ಕಾದಂಬರಿಯನ್ನು ಬರೆದ ಕಾಲದ ಚಿಂತನೆಗಳು ಕೃತಿಗೆ ಅಗತ್ಯವಾದ ಕಾಲದೇಶಾತೀತತೆಯನ್ನು ಒದಗಿಸಿರುವುದನ್ನು ಕೂಡ ಅರಿಯುತ್ತಾರೆ. ಇವೆರಡೂ ತಿಳಿವುಗಳು ತಮ್ಮ ಕಾಲದ ಅರಿವಿನೊಡನೆ ಪಡೆದುಕೊಳ್ಳುವ ನಂಟನ್ನೂ ಗುರುತಿಸುತ್ತಾರೆ. ಈ ಮೂರೂ ಬಗೆಗಳು ಹೇಗೆ ಈ ಕಾದಂಬರಿಯಲ್ಲಿ ಹೆಣೆದುಕೊಳ್ಳುತ್ತವೆ ಎಂಬುದನ್ನು ಗುರುತಿಸಲು ಈ ಓದು ಅಗತ್ಯವಾಯಿತು.
ಇದು ಈ ಕಾದಂಬರಿಯನ್ನು ಹೀಗೇ ಓದಬೇಕು ಎಂದು ನಿರ್ದೇಶನ ನೀಡುವ ಪ್ರಯತ್ನವಲ್ಲ; ಹೀಗೂ ಓದಿದರೆ ನಮ್ಮ ಓದಿನ ಹರವಿಗೆ ಏನೆಲ್ಲ ಹೊಸ ಸಂಗತಿಗಳು ಕಾಣಿಸುವುದಕ್ಕೆ ಸಾಧ್ಯವಿದೆ ಎಂಬುದನ್ನು ವಿವರಿಸುವ ಕೆಲಸ ಮಾತ್ರ.
K V narayana | ಕೆ ವಿ ನಾರಾಯಣ |
0 average based on 0 reviews.