
Category: | ಕನ್ನಡ |
Sub Category: | ಕಾದಂಬರಿ |
Author: | ರವೀಂದ್ರ ಮುದ್ದಿ | ravindra muddi |
Publisher: | |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಕಾದಂಬರಿಯ ತೀರ್ಷಿಕೆ is not ಎನ್ನುವುದನ್ನು ಇಂಗ್ಲಿಷಿನಲ್ಲಿ ಬರೆದು ಗಾಡ್ ಮತ್ತು ರೀಚಬಲ್ ಅನ್ನು ಕನ್ನಡದಲ್ಲಿ ಬರೆದಿರುವ ಮೂಲಕ ಗಾಡ್ ರೀಚಬಲ್ ಎನ್ನುವ ಧ್ವನ್ಯಾರ್ಥವನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ. ಇಲ್ಲಿ ದೇವರ ಪರಿಕಲ್ಪನೆಯೇ ಬೇರೆ ಬೇರೆ ಪಾತ್ರಗಳಿಗೆ ಬೇರೆಬೇರೆ. ಅವರವರ ಹುಡುಕಾಟವೇ ಒಂದು ರೀತಿಯಲ್ಲಿ ಅವರವರ ಅಧ್ಯಾತ್ಮಪಥ.
- ಪ್ರತಿಭಾ ನಂದಕುಮಾರ್, ಕವಿ, ಸಾಹಿತಿ, ಪತ್ರಕರ್ತೆ
ಈ 'ಗಾಡ್ is not ರೀಚಬಲ್' ಕಾದಂಬರಿ ಸಸ್ಪೆನ್ಸ್ ಥಿಲ್ಲರ್ ಸಿನಿಮಾಗಳಂತೆ ತೆರೆದುಕೊಳ್ಳುತ್ತ, ಮುಂದೇನಾಗಬಹುದು ಎಂಬುದು ಅಂದಾಜಿಗೆ ಸಿಗದಂತೆ ಓದುಗನ ಕುತೂಹಲವನ್ನು ಕೆರಳಿಸುತ್ತ, ಮುಂದಿನ ಪುಟಕ್ಕೆ ಹೋಗುವ ಹಾಗೆ ಮಾಡುತ್ತ ಕಾದಂಬರಿ ಸಾಗುತ್ತದೆ.
ಡಾ. ಟಿ.ಎಸ್.ಗೊರವರ, ಸಾಹಿತಿ
ಪ್ರಚಲಿತ ಕಾಲಘಟ್ಟದಿಂದ 12ನೇ ಶತಮಾನಕ್ಕೆ ಕನೆಕ್ಟ್ ಆಗುವ ಕತೆ ಇಲ್ಲಿ ವಿಶೇಷ ಅನ್ನಿಸಿಕೊಳ್ಳುತ್ತೆ. ಅಂದಿನ ಕಲ್ಯಾಣ ಕ್ರಾಂತಿಯ ಲಿಂಕ್ ಈ ಕಥೆಗೆ ಕೊಟ್ಟಿರುವುದು ಮಜಾ ಕೊಡ್ತು ಮತ್ತು ಸಿನಿಮ್ಯಾಟಿಕ್ ಆಗಿದೆ. ಈ ಕಾದಂಬರಿ ಮೂಲಕ ಕನ್ನಡ ಸಾಹಿತ್ಯ ಅಂಗಳದಲ್ಲಿ ಹೊಸ ಮಾದರಿಯ ಲೇಖಕ ಮಾತ್ರ ಹುಟ್ಟಿಲ್ಲ, ಈ ಲೇಖಕರಿಂದ ಸೆಟ್ ಆಫ್ ನ್ಯೂ ರೀಡರ್ಸ್ ಕೂಡ ಹುಟ್ಟುತ್ತಾರೆ ಎನ್ನುವುದು ನನ್ನ ಭರವಸೆ.
- ಹಯವದನ, ಚಿತ್ರ ನಿರ್ದೇಶಕ
"ಗಾಡ್ is not ರೀಚಬಲ್" ಕಾದಂಬರಿಯನ್ನು ಓದುತ್ತಾ ಸಾಗಿದಂತೆ ಓದುತ್ತಿದ್ದೇವೆ ಅನ್ನುವುದಕ್ಕಿಂತ ಒಂದು ಸಿನಿಮಾವನ್ನು ನೋಡುತ್ತಿದ್ದೆವೇನೊ ಎಂದು ಭಾಸವಾಗುವಂತೆ ದೃಶ್ಯಗಳನ್ನು ಕಲ್ಪಿಸಿಕೊಂಡು ಹೆಣೆದಿದ್ದಾರೆ ರವೀಂದ್ರ ಮುದ್ದಿ ಕಥೆಯ ವೇಗದೇ ಈ ಕಾದಂಬರಿಯ ಪ್ಲಸ್ ಪಾಯಿಂಟ್.
ಪ್ರಮೋದ್ ಮರವಂತೆ, ಚಿತ್ರ ಸಾಹಿತಿ
ರವೀಂದ್ರ ಮುದ್ದಿ | ravindra muddi |
0 average based on 0 reviews.