| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಮಲ್ಲಿಕಾರ್ಜುನ ಶೆಲ್ಲಿಕೇರಿ | Mallikarjuna Shellikeri |
| Publisher: | Amulya pustaka |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ದೀಡೆಕರೆ ಜಮೀನು’ ಪ್ರಥಮ ಕಥಾಸಂಕಲನ. ಎಂಟು ಕಥೆಗಳನ್ನೊಳಗೊಂಡಿರುವ ಈ ಸಂಕಲನದಲ್ಲಿ ಕೆಲವು ಕಾಲ ನಮ್ಮ ಮನಸ್ಸಿನಲ್ಲಿ ಉಳಿಯುವಂಥ ಹಾಗೂ ಮನಸ್ಸನ್ನು ಕಲಕುವಂಥ ಕಥೆಗಳಿವೆ ಎಂಬುದು ಗಮನಾರ್ಹ. ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಕಥೆಗಳು ಕನ್ನಡದಲ್ಲಿ ಅಚ್ಚರಿ ಹುಟ್ಟಿಸುವಷ್ಟು ತಾಜಾತನವನ್ನು ಹೊಂದಿವೆ. ಮುಂಬೈ ಕರ್ನಾಟಕದ ಗ್ರಾಮೀಣ ಪ್ರದೇಶದ ಬದುಕನ್ನು ದಾಖಲಿಸುವ ಪ್ರಯತ್ನ ಮಾಡುತ್ತವೆ. ಇಂಥ ಪ್ರಯತ್ನದಲ್ಲಿ ಕಥೆಗಾರರ ಮುಖ್ಯ ಕಾಳಜಿ ಜೀವನ ಮೌಲ್ಯಗಳು ಮತ್ತು ಪರಂಪರೆಗಳ ತಾಳಿಕೆ-ಬಾಳಿಕೆಗಳನ್ನು ಇಂದಿನ ನಿಕಷಕ್ಕೊಡ್ಡುವುದೆ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಊಳಿಗಮಾನ್ಯ ಪದ್ಧತಿ, ಜಾತೀಯತೆ, ಜೀತಪದ್ಧತಿ, ಕೆಳವರ್ಗ-ಮಧ್ಯಮವರ್ಗದ ಕುಟುಂಬಗಳ ಸಂಕಟ, ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯ, ಶೋಷಣೆ, ಅರ್ಥವಿಲ್ಲದ ಆಚರಣೆಗಳು, ಅಸಹಿಷ್ಣುತೆ, ಹೊಸ ಬದುಕಿನ ಆಸೆ ಹಂಬಲಗಳು ಮೊದಲಾದ ಸಮುದಾಯದ ತುಡಿತಗಳಿಗೆ ಮನಸ್ಸೊಂದು ಸ್ಪಂದಿಸುವ ಪರಿಯಲ್ಲಿ ಈ ತಳಮಳಗಳು ಥಟ್ಟನೆ ಪ್ರಕಟಗೊಳ್ಳುತ್ತ ನಮ್ಮ ಗಮನ ಸೆಳೆಯುತ್ತವೆ.
ಮಲ್ಲಿಕಾರ್ಜುನ ಶೆಲ್ಲಿಕೇರಿ | Mallikarjuna Shellikeri |
0 average based on 0 reviews.