| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಡಾ. ಸೌಮ್ಯ ದಯಾನಂದ | Dr Sowmya Dayananda |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಎಲ್ಲಾ ನೆನಪಿರಬೇಕಾದದ್ದು ಪರೀಕ್ಷೆಯಲ್ಲಿ ಬದುಕಿನಲ್ಲಿ ಅಲ್ಲ ಬದುಕಿಗೆ ಚೂರು ಮಾಸಿ ಹೋದ ನೆನಪು ಚೆಂದ ಅವುಗಳೇ ಪುಳಕ, ಅವುಗಳೇ ಭರವಸೆ ಕಂಠಪಾಠ ಮಾಡಿದ ಮಗ್ಗಿಯಂತೆ ನೆನಪಿರುವ ಕನಸಿನಿಂದ ಯಾವ ಸುಖವೂ ಇಲ್ಲ ಎದೆಯಲ್ಲಿ ಉಳಿದ ಒಂದು ತುಂಡು ಅಸ್ಪಷ್ಟ ಕನಸು ಮಾತ್ರ ನಮ್ಮನ್ನು ಹೆಚ್ಚು ಕಾಡಿಸುವುದು. ಅಲೆದಾಡಿಸುವುದು ಹುಡುಕಾಡಿಸುವುದು. ಈ ಹುಡುಕಾಟ ಮಾತ್ರ ನಮ್ಮನ್ನು ಸದಾ ಜೀವಂತವಾಗಿಡುತ್ತದೆ.
ಇಲ್ಲಿ ಕಥೆಗಳು ಬದುಕಿನ ತಲಾಷಿಗೆ ತೊಡಗಿದೆ. ಇಲ್ಲಿನ ಕಷ್ಟಗಳು ಯಾರದೊ ಬದುಕಿನಿಂದ ಪಡೆದ ಸಾಲ ಯಾರದೊ ಖುಷಿಗೆ ನೀಡಿದ ದೇಣಿಗೆ ಇಲ್ಲಿನ ಹಸಿವು ಯಾರದೊ ತಟ್ಟೆಯಲ್ಲಿ 3ನ್ನದೆ ಬಿಟ್ಟ ಅನ್ನ, ಇಲ್ಲಿ ಮಾತನಾಡುವ ಹುಡುಗಿ, ಯಾರದೊ ಮನೆಯ ಕೋಣೆಯಲ್ಲಿ ಚಿಕ್ಕಳಿಸುವ ಹೆಣ್ಣು ಯಾರೊ ಎಲ್ಲೊ ನುಡಿಯಲಾಗದ ಪದಗಳು ಇಲ್ಲಿ ಹಾಡು ಯಾರದೊ ಎದೆಯ ಸಂಕಟ ಇಲ್ಲಿ ತುಟಿ ಮೇಲೆ ಕೂತ ಪಾಡು.
ಹೆಣ್ಣು ಬರೆದ ಕಥೆಗಳಲ್ಲಿ ಹೆಣ್ಣಿನ ನೋವೇ ಇರುತ್ತದೆ. ಎಂಬ ಪೂರ್ವಾಗ್ರಹವನ್ನು ಇಲ್ಲಿನ ಕಥೆಗಳು ಮುರಿದಿವೆ. ಹೊಸ್ತಿಲು ದಾಟಿವೆ ಸಾಸಿವೆ ಡಬ್ಬಕ್ಕೂ ಕಛೇರಿಯ ಕಡತಗಳ ಘಮ ಮೆತ್ತಿಕೊಂಡಿದೆ. ಕಛೇರಿಯ ಕಡತಗಳ ನಡುವೆ ಒಂದು ತುಂದು ಜೀರಿಗೆ ಸಿಕ್ಕಿದೆ.
ಸಂಬಂಧಗಳ ಸೂಕ್ಷ್ಮ ಎಳೆಗಳು ಜೀವನದ ಅನಿರೀಕ್ಷಿತ ತಿರುವುಗಳು, ಮನುಷ್ಯನ ಮನಸ್ಸಿನ ತುಮುಲಗಳ ಸುತ್ತ ಇಲ್ಲಿನ ಕಥೆಗಳು ಹೆಣೆಯಲ್ಪಟ್ಟಿವೆ. ಸಂಸಾರ, ಸಮಾಜ. ಸ್ನೇಹ, ಪ್ರೀತಿ ಮತ್ತು ವೈಯಕ್ತಿಕ ಕನಸುಗಳ ನಡುವಿನ ಜಗಳ, ರಾಜಿ ಮತ್ತು ಸಂಬಂಧಗಳ ಮೌನದ ಅಳವನ್ನು ಈ ಕಥೆಗಳು ಪ್ರಶ್ನಿಸುತ್ತವೆ. ನಮ್ಮನ್ನು ನಾವೇ ಕಂಡುಕೊಳ್ಳುವ ಮಾಂತ್ರಿಕತೆ ಇಲ್ಲಿನ ಕಥೆಗಳಿಗಿದೆ.
ನಮ್ಮ ದೈನಂದಿನ ಬದುಕಿನಲ್ಲಿ ಅಡಗಿರುವ ವಿಪರ್ಯಾಸಗಳನ್ನು ಹೃದಯ ಕರಗಿಸುವ ಪ್ರೀತಿಯನ್ನು ಮತ್ತು ಅನಿವಾರ್ಯ ಬದಲಾವಣೆಗಳನ್ನು ಸರಳ ಶೈಲಿಯಲ್ಲಿ ಕಥೆಗಾರ್ತಿ ತೆರೆದಿಡುತ್ತಾರೆ.
ಬದುಕು ದೊಡ್ಡ ಕಥೆಗಳಿಗೆ ನೀಡುವ ಸ್ವಾತಂತ್ರ್ಯವನ್ನು ಎಂಟತ್ತು ಸಾಲುಗಳ ಪುಟ್ಟ ಕಥೆಗಳಿಗೆ ಕೊಡುವುದಿಲ್ಲ, ಚೂರು ಆಚೆ ಈಜೆ ಸರಿದಾಡಿದರೂ ಕಥೆ ಚೆಲ್ಲಿ ಹೋಗುತ್ತದೆ. ಇಲ್ಲಿ ಕಥೆಗಾರ ಪ್ರತಿಸಾಲಿಗೂ ಕೊಂಡಹಾಯಬೇಕು. ಚೂರು ಯಾಮಾರಿದರೂ ಬೂದಿ ಕಥೆ ಆಗಬೇಕಾದದ್ದು ಕವಿತೆಯಾಗಿಬಿಡುತ್ತದೆ. ಇಲ್ಲವೆ ವರದಿಯಾಗಿ ಬಿಡುತ್ತದೆ. ಬರೀ ಹೇಳಿಕೆಯೂ ಆಗಿಬಿಡಬಹುದು ಇಲ್ಲಿನ ಎಲ್ಲಾ ಕಥೆಗಳು ಆ ಅಪಾಯದಿಂದ ಪಾರಾಗಿವೆ ಕಥೆಗಾರ್ತಿ ಕೊಂಡ ಹಾದು ಬಂದ ಪರಿ ಕಥೆಗಳಲ್ಲಿ ಕಾಣಿಸುತ್ತದೆ.
ಸದಾಶಿವ ಸೊರಟೂರು
ಡಾ. ಸೌಮ್ಯ ದಯಾನಂದ | Dr Sowmya Dayananda |
0 average based on 0 reviews.