Delivery between 2-6 Days
No returns accepted. Please refer our full policy
Your payments are 100% secure
ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಾ, ಪ್ರವಾಸಿಗರನ್ನು ಆಕರ್ಷಿಸುವ ಆ ಕುಗ್ರಾಮ ನಿಗೂಢತೆಗಳ ಹುತ್ತವಾಗಿದೆ. ಕ್ಷುದ್ರಶಕ್ತಿ ರಕ್ತಾಕ್ಷಿಯ ಆರಾಧನೆಯ ಕೇಂದ್ರವೇ ನಿಷೇಧಿತ ಪ್ರದೇಶವಾಗಿದೆ. ಹಗಲಿನ ವೇಳೆ ಸಹ ಆ ಪ್ರದೇಶದ ಕಡೆ ನೋಡಲು ಸಹ ಗ್ರಾಮಸ್ಥರು ಹೆದರುತ್ತಾರೆ. ಆ ಗ್ರಾಮಕ್ಕೆ ಬರುವ ಸಂಬಂಧಿಕರಿಗೆ ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಾರೆ - ನಿಷೇಧಿತ ಪ್ರದೇಶಕ್ಕೆ ಹೋಗುವ ಹುಚ್ಚು ಸಾಹಸ ಮಾಡಿ ಪ್ರಾಣ ಕಳೆದುಕೊಳ್ಳಬೇಡಿ. ಪ್ರತಿದಿನ ಕತ್ತಲಾದ ಮೇಲೆ ಭಯ ಉಂಟುಮಾಡುವ ಘಟನೆಗಳು ನಿಗೂಢತೆಯ ಆವರಣದೊಂದಿಗೆ ನಡೆಯುತ್ತವೆ. ನಿಷೇಧಿತ ಪ್ರದೇಶದ ಹಿನ್ನಲೆ ಏನು? ರಹಸ್ಯ ಕಾಚರಣೆಗಳ ರೂವಾರಿ ಯಾರು? ಕತೆಯಲ್ಲಿ ಬರುವ ಪ್ರಮುಖ ಪಾತ್ರಧಾರಿಗಳ ಬಗ್ಗೆ ಅನುಮಾನ ಮೂಡುತ್ತಿರುವಾಗಲೇ ಅಂತ್ಯದಲ್ಲಿ ಎಲ್ಲರೂ ಭಯಾಶ್ಚರ್ಯಗೊಳ್ಳುವ ರೀತಿಯಲ್ಲಿ ರಹಸ್ಯ ಸ್ಪೋಟಗೊಳ್ಳುತ್ತದೆ. ಖ್ಯಾತ ಕಾದಂಬರಿಕಾರ ಕೌಂಡಿನ್ಯ ಅವರ ಈ ವಿಶೇಷ ಕಾದ೦ಬರಿಯನ್ನು ಓದುಗರ ಕೈಸೇರುವಂತೆ ಮಾಡಿದ್ದೇವೆ.
Koundinya |
0 average based on 0 reviews.