ಣವಿಣ …ಅಂಗಾಲಲ್ಲಿ ಗುಳುಗುಳು

Original price was: ₹ 150.Current price is: ₹ 134.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
Publications

SYNOPSIS

ಹೆಸರು ನವೀನ್ ಕುಮಾರ್. ಸಾಗರದಲ್ಲಿ ಹುಟ್ಟಿದ್ದು, ಬೆಂಗಳೂರಿಗೆ ಬಂದ ಮೇಲೆ ನವೀನ್ ಸಾಗರ್ ಆಗಿದ್ದು, ಸಾಗರದ ಬೆಳಲಮಕ್ಕಿ ಸ್ಕೂಲು, ಕೆರೆಶಾಲೆ, ಹೆಚ್.ಶಿವಲಿಂಗಪ್ಪ ಹೈಸ್ಕೂಲು, ಎಲ್ ಬಿ ಕಾಲೇಜು, ಬೆಂಗಳೂರಿನ ಬಿಎಮ್ಮೆಸ್ ಕಾಲೇಜು, ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಇವೆಲ್ಲವೂ ಓದುಬರಹ ಕಲಿಸಿ ಪಾಸ್ ಮಾಡಿದ ಶಾಲೆಗಳು. ಆದರೆ ಬದುಕು ಕಲಿಸಿದ್ದು ಮಾತ್ರ ಸೋಲು, ಪ್ರೀತಿ, ಸ್ನೇಹ, ನಗು ಮತ್ತು ಕಣ್ಣೀರು ಎಂಬ ಗುರುಗಳು.
ಅಪ್ಪಾಜಿಯ ಅಂಗಡಿ ಕಾದದ್ದು ಮೊದಲ ಉದ್ಯೋಗ ಅನ್ನೋದಾದರೆ, ಆನಂತರ ಪ್ರಿಂಟಿಂಗ್ ಪ್ರೆಸೊಂದರ ನೈಟ್ ವಾಚ್ ಮನ್, ಆಫೀಸ್ ಬಾಯ್, ಆಫೀಸ್ ಅಸಿಸ್ಟೆಂಟ್, ಅಕೌಂಟೆಂಟ್, ಮಾರ್ಕೆಟಿಂಗ್ ಮ್ಯಾನೇಜರ್, ಕಾಲ್ ಸೆಂಟರ್‌, ಸ್ವಂತ ಬ್ಯುಸಿನೆಸ್, ಸೇರಿದಂತೆ ಉದರನಿಮಿತ್ತಂ ಅದೆಷ್ಟು ವೇಷವೋ! ಏಳುವರ್ಷ ಇಸ್ರೋದಲ್ಲಿ ದುಡಿಮೆ. ಒಂದು ಪುಟದ ಕೈಬರಹದ ಕನ್ನಡ ಪತ್ರಿಕೆ ಮಾಡಿ ಕನ್ನಡಾಸಕ್ತರನ್ನು ಓದಿಗೆಳೆದ ಖುಷಿ ಬರವಣಿಗೆಯ ಆಸಕ್ತಿಗೆ ಪೂರಕವಾಯ್ತು. ಸಿನಿಮಾ ಹುಚ್ಚು, ಬರೆಯೋ, ಓದೋ ಪ್ರೀತಿಗೆ ಫೇಸ್ ಬುಕ್ ವೇದಿಕೆಯಾಯ್ತು. ಈಗ ಕನ್ನಡಪ್ರಭದಲ್ಲಿ ಉಪಸಂಪಾದಕ ಹಾಗೂ ವರದಿಗಾರ. ಈ ನಡುವೆ ಧಾರಾವಾಹಿಗಳಲ್ಲಿ ನಟಿಸಿದ್ದು, ಬೇನಾಮಿಯಾಗಿ ಬರೆದು ಕೊಟ್ಟಿದ್ದು, ಕಂಠದಾನ ಮಾಡಿದ್ದು, ಸಿನಿಮಾದಲ್ಲಿ ನಟಿಸುವಂಥಾಗಿದ್ದು ಎಲ್ಲವೂ ಕೇವಲ ಆಕಸ್ಮಿಕ ಸಂತಸಗಳು ಮತ್ತು ಸಂಕಟಗಳು.
ನಗು-ಪ್ರೀತಿ-ಸ್ನೇಹ-ನಂಬಿಕೆ ನನ್ನಲ್ಲಿರುವ ನಾನು ಕೊಡಬಲ್ಲ ಆಸ್ತಿ. ನಾನು ಗಳಿಸಿರುವ ಆಸ್ತಿ ಕೂಡ ಅದೇ. ನನ್ನ ತೀರಿಸಲಾರದ ಸಾಲವೂ ಕೂಡ ಅದೇ. ಮಿಕ್ಕಂತೆ ಬರೆದುಕೊಳ್ಳುವಂಥಾದ್ದೇನೂ ಸಾಧಿಸಿಲ್ಲ. ಸಾಧನೆಯ ಹಾದಿಗೊಂದು ಮುನ್ನುಡಿಯಾಗಿ ಸದ್ಯಕ್ಕೆ ಎರಡು ಪುಸ್ತಕಗಳ ಲೋಕಾರ್ಪಣೆ.

ABOUT AUTHOR

ಹೆಸರು ನವೀನ್ ಕುಮಾರ್. ಸಾಗರದಲ್ಲಿ ಹುಟ್ಟಿದ್ದು, ಬೆಂಗಳೂರಿಗೆ ಬಂದ ಮೇಲೆ ನವೀನ್ ಸಾಗರ್ ಆಗಿದ್ದು, ಸಾಗರದ ಬೆಳಲಮಕ್ಕಿ ಸ್ಕೂಲು, ಕೆರೆಶಾಲೆ, ಹೆಚ್.ಶಿವಲಿಂಗಪ್ಪ ಹೈಸ್ಕೂಲು, ಎಲ್ ಬಿ ಕಾಲೇಜು, ಬೆಂಗಳೂರಿನ ಬಿಎಮ್ಮೆಸ್ ಕಾಲೇಜು, ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಇವೆಲ್ಲವೂ ಓದುಬರಹ ಕಲಿಸಿ ಪಾಸ್ ಮಾಡಿದ ಶಾಲೆಗಳು. ಆದರೆ ಬದುಕು ಕಲಿಸಿದ್ದು ಮಾತ್ರ ಸೋಲು, ಪ್ರೀತಿ, ಸ್ನೇಹ, ನಗು ಮತ್ತು ಕಣ್ಣೀರು ಎಂಬ ಗುರುಗಳು. ಅಪ್ಪಾಜಿಯ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಣವಿಣ …ಅಂಗಾಲಲ್ಲಿ ಗುಳುಗುಳು”

Your email address will not be published. Required fields are marked *

Related Products