ಬ್ರಿಟಿಷರ ವಿರುದ್ಧ ಜನತಾ ಬಂಡಾಯ

Original price was: ₹ 150.Current price is: ₹ 134.

SKU: Britishara viruddha janata bandaya Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
(2 customer reviews)

SYNOPSIS

Opinion of Others

There are no others opinion yet.

Customer Reviews

2 reviews for ಬ್ರಿಟಿಷರ ವಿರುದ್ಧ ಜನತಾ ಬಂಡಾಯ

  1. P. ANANTHARAJA GOWDA

    The First War of Independence- 1837 (Amara Sullia Swaatantra samara).
    It was a glorious time of rule of most part of Tulunadu and upper Kodagu by Haleri Dynasty. Having come to know about “Karnika” of Mithoor Nayaru and Ullaklu Deivas near Sullia under renowned Zameendar Kedambadi Ramayya Gowda’s overlordship, Haleri King Lingararaja Vodeyar visited Kedambadi Ramayya Gowda, Deivasthana and presented a Crown embedded with Diamonds and precious stones to the Deiva.
    Needless to mention that Kedambadi Ramayya Gowda had intimate relationship with Haleri rulers and his advice was sought after and had respect in the Haleri Kings court perticularly about Tulunadu affairs. This relationship continued even after the demise of Lingaraja and during the rule of his son Chikkaveera Rajendra Vodeya. But, Chikkaveerajendra Vodeya was dethroned treacherously by the British in 1834. British annexed Tulunadu under Madras Presidency and retained direct rule of Upper Kodagu. In Tulunadu – lower Kodagu, they leavyed heavy taxes on Royots (60%)and forced them to pay it in cash instead of their produce as was done during Haleri Kings rule. This lead the Rayots in to extreme hardship and excruciating life.
    Engrossed with the Circumstances, Kedambadi Ramayya Gowda decided to fight against British and bring an end to their unholy rule of Tulunadu.
    He organized a gathering of Ryots and noble people of Tulunadu of all casts and creed. Convinced them that they would accept even a dog from the Haleri Palace as the ruler, but not the British.
    From the year 1834 to 1837 Ramayya Gowda strived to cognate the peasants from Tulunadu and Kodagu. Under the guise of his son’s marriage he gathered arround 2000 peasants to his “Maduvegadde” as a prelude to mass insurrection against British. He trained the ryots in use of Armaments, and arranged about 2000 swords and Guns from Kodlipet. An ordinary Ryot and Jangama from Hemmane village, Shanivarasanthe named Puttabassapah was chosen and introduced as Kalyanaswamy, the inheritor of Haleri Dynasty and incumbent to the Haleri Throne. He was placed in a makeshift Ashrama nearby Poomale Hill away from the predatory eys of British.
    After a thorough prepardness for the war of Independence, the troops led by Kedampadi Ramayya Gowda invaded and captured the British Treasury at Bellare, 17 KM away from his Maduvegadde. From there the march continued 25 Km to Puttur, where British Collector Levin had come to subjugate the insurrection and after seeing the huge gathering of freedom fighters and anticipating certain defeat, Levins troops returned to Mangalore. Puttur Treasury was captured by the insurgents. With tremendous support and swelling of people the Ramayya Gowda’s team consiting of 2000 freedom fighters Starting from his house “Maduvegadde” near sullia, marched on to Bantwal, further traversed total 90 KM and reached Mangalore on 5th April, by which time the freedom fighters numbers swelled to 10000. Ramayya Gowda’s troops ferociously fought with British who abandoned Mangalore and fled away to Cannanore. The freedom fighters celebrated the victory and threw away British flag and in its place hoisted Freedom Flag at the Light house hill, which place, to this day known as “Bavuta Gudde”.
    Kedambadi Ramayya Gowda’s team, after experiencing 1st Victory of common people of India against British, ruled Tulunadu for 13 days.
    But, this Victory was short lived! Reinforced British forces from Calicut and Bombay succeeded in quelling the rebellion and captured the leaaders and awarded Indignant punishment like hanging until death in Public and deporting to Singapore for “Hard labour”.
    Now, though late, time has come to commemorate sacrifices of Martyred freedom fighters of Tulunadu and befitting memorial for Kedambadi Ramayya Gowda and others are created.

  2. P. ANANTHARAJA GOWDA

     ಹೆಚ್ಚಿನ ಮಾಹಿತಿಗಾಗಿ ಅರವಿಂದ ಚೊಕ್ಕಾಡಿಯವರ ಕೃತಿ “ಬ್ರಿಟಿಷರ ವಿರುದ್ಧ ಜನತಾ ಬಂಡಾಯ 1837″”- ,
    ಅಮರಸುಳ್ಯ ಸ್ವಾತಂತ್ರ ಸಮರ 1837:
    1857 ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ.
    ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾ
    ಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು ‘ದಂಗೆ’ ಎಂದರೂ ಅದು
    ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್
    ಪಾಂಡೆ,ತಾಂತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು
    ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ ‘ಸಿಪಾಯಿ ದಂಗೆ’ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ
    ಅನ್ನುವುದಕ್ಕೂ  ಮೊದಲು  ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ?

          ಪ್ರಥಮ  ಸ್ವಾತಂತ್ರ್ಯ ಸಂಗ್ರಾಮ 1837 ರಲ್ಲೇ ನಡೆದಿತ್ತು….!!!! ಹೌದು…1857
    ರ  ಸಿಪಾಯಿ ದಂಗೆಯ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ….ಇಲ್ಲದೆಯೋ
    ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು-ಸುಳ್ಯದ
    ರೈತಾಪಿ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ
    ಸಂಗ್ರಾಮ,ಆಂಗ್ಲರು ಹೀಗಳೆದ ದರೋಡೆ,‘ಕಲ್ಯಾಣಪ್ಪನ ಕಾಟಕಾಯಿ’….!!! ಇದು ಅಮರ ಸುಳ್ಯದಂಗೆ…..!!!
    ಟಿಪ್ಪು ಸುಲ್ತಾನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ಇತರ ಹಲವರು
    ಬ್ರಿಟಿಷರ ವಿರುದ್ಧ  ಅವರ ರಾಜ್ಯಕ್ಕಾಗಿ, ತಮ್ಮ ಆಳ್ವಿಕೆಯನ್ನು ಉಳಿಸಲಿಕ್ಕಾಗಿ
    ಹೋರಾಡಿದರು.

              ಬಿದರೂರಿನ ಧೋಂಡಿಯ ವಾಘ, ಐಗೂರಿನ ವೆಂಕಟಾದ್ರಿ ನಾಯಕ(1802),ಕಿತ್ತೂರಿನ
    ಚೆನ್ನಮ್ಮಾಜಿ(1824),ಸಂಗೊಳ್ಳಿ ರಾಯಣ್ಣ,ಕೊಡಗಿನ
    ಅಪರಂಪಾರ(1835)ಕಲ್ಯಾಣಸ್ವಾಮಿ(1837),ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ
    ರಾಮಯ್ಯ ಗೌಡ,ಕುಡಿಯ ಸಹೋದರರು………ಹೀಗೆ ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ
    ಅನೇಕ ವೀರರು 1857ಕ್ಕೂ ಹಿಂದೆಯೇ ರಕ್ತ ತರ್ಪಣ ಗೈದಿದ್ದರು. ಅದರೆ ಅವರ ಬಗೆಗೆ ಅವರದೇ
    ನೆಲದ ನಮಗೆ ಅರಿವಿಲ್ಲದೇ ಇರುವುದು ದುರಂತ ಸತ್ಯ!

    ವಿಶಾಲ ಕೊಡಗಿನ ಜನ ಸಾಮಾನ್ಯರು,  ರೈತರು ರಾಷ್ಟ್ರೀಯ ಪರಿಕಲ್ಪನೆ ಇಲ್ಲದಿದ್ದರೂ,
    ಬ್ರಿಟಿಷರ ವಿರುದ್ಧ ದಂಗೆಯೆದ್ದು ಹೋರಾಡಿದ ಕಾರಣವೇನೆಂದರೆ: ತಮ್ಮ ವಿಶಾಲ ಕೊಡಗಿನ
    ರಾಜ್ಯವನ್ನು ಬ್ರಿಟಿಷರು ವಿಭಜಿಸಿ ಕಾಸರಗೋಡು, ಪುತ್ತೂರು ಮತ್ತು ಸುಳ್ಯ
    ಮಾಗಣೆಗಳನ್ನು ಮದ್ರಾಸು ಪ್ರಾಂತ್ಯಕ್ಕೆ ಸೇರಿಸಿದರಿಂದ ಮೇಲಿನ ಕೊಡಗಿನೊಂದಿಗೆ
    ತಮಗಿದ್ದ ಸಾಂಸ್ಕೃತಿಕ ಮತ್ತು ರಕ್ತಸಂಬಂಧ ಕಡಿತಗೊಂಡ ಪ್ರಯುಕ್ತವೂ, ತಂಬಾಕು, ಉಪ್ಪು
    ಇತ್ಯಾದಿ ದಿನಬಳಕೆ ವಸ್ತುಗಳ ಮೇಲೆ ಕರ(tax)ವಿಧಿಸಿದ ಬಗ್ಗೆ ಅಸಮಾಧಾನ ದಿಂದಲೂ,
    ಮೊದಲು ರಾಜರ ಕಾಲದಲ್ಲಿ ತಾವು ಬೆಳೆಸಿದ ಅಕ್ಕಿ ಇತ್ಯಾದಿ ಬೆಳೆಗಳನ್ನು ವಸ್ತು
    ರೂಪದಲ್ಲಿ ನೀಡುತ್ತಿದ್ದ ಕಂದಾಯ ಪದ್ದತಿಯ ಬದಲು ಬ್ರಿಟಿಷರು ಹಣದ ರೂಪದಲ್ಲಿ ಹೆಚ್ಚಿನ
    % ಕಂದಾಯ ಹೇರಿದ ಬಗ್ಗೆ, ಮಧ್ಯವರ್ತಿಗಳು ಹುಟ್ಟಿ ಜನಸಾಮಾನ್ಯರ ಬದುಕು
    ದುಸ್ತರವಾಗಿತ್ತು.

         1834ರ ವರೆಗೆ ಅಮರಸುಳ್ಯ ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ
    ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕವೀರರಾಜೇಂದ್ರನ ಆಡಳಿತ ಹದಗೆಟ್ಟಿದೆ ಎಂದು ಆತನ ಸೋದರ ಅತ್ತೆ ಮತ್ತು ಅವರ ಗಂಡ ಚನ್ನಬಸಪ್ಪನ ಪಿತೂರಿಯಿಂದ ಆಂಗ್ಲರು
    1834ರ ಎಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರನ ನೇತೃತ್ವದಲ್ಲಿ ಕೊಡಗನ್ನು
    ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಎಪ್ರಿಲ್ 6ಕ್ಕೆ ಕೋಟೆ ಪ್ರೇಸರನ ವಶವಾಗುತ್ತದೆ.
    ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ.ದಿವಾನ್ ಲಕ್ಷ್ಮೀನಾರಾಯಣ,
    ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ.ಎ.10ಕ್ಕೆ ಮಡಿಕೇರಿಯಲ್ಲಿ ಶರಣಾದ ದೊರೆಯನ್ನು
    ಪ್ರೇಸರ್ ಎ.24ಕ್ಕೆ ಬೆಂಗಳೂರಿಗೆ ಕಳುಹಿಸಿದ. ಮುಂದೆ ಮಗಳ ಸಹಿತ ವಾರಣಾಸಿ ಅಲ್ಲಿಂದ
    ಲಂಡನ್ ಗೆ ಕಳಿಸಲಾಗುತ್ತದೆ. 1859 ಸೆ.24ರಂದು ಚಿಕ್ಕ ವೀರರಾಜೇಂದ್ರ ಒಡಯನು ಖಾಯಿಲೆಯಿಂದಾಗಿ ಲಂಡನ್ ನಲ್ಲೇ ಮರಣ
    ಹೊಂದುತ್ತಾನೆ.

     ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತುರೂಪದಲ್ಲಿ
    ಕಂದಾಯವನ್ನು ಪಾವತಿಸುತ್ತಿದ್ದ ವಿಶಾಲ ಕೊಡಗು ಜನರಿಗೆ ಅಸಮಾದಾನ ಉಂಟಾಗುತ್ತದೆ.
    ಸುಳ್ಯ ಕೆದಂಬಾಡಿ ರಾಮಯ್ಯ ಗೌಡರು ತಮ್ಮ ಸಹಚರರೊಂದಿಗೆ ಬ್ರಿಟಿಷರ ವಿರುದ್ಧ ಸೆಟೆದು ನಿಂತರು.
    ಏಳುಸಾವಿರ
    ಸೀಮೆಯ ಹುಲಿ ಕಡಿದ ನಂಜಯ್ಯ,ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಿಗೆ ನಿಂತರು.
    ಕೂಜುಗೋಡು ಸಹೋದರರು,ಪೆರಾಜೆ ಊಕಣ್ಣ ಬಂಟ,ಕುಂಬ್ಳೆಯಸುಬ್ರಾಯ ಹೆಗ್ಡೆ,ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.   ಹುಲಿ ಕೊಂದ
    ನಂಜಯ್ಯ ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಪುಟ್ಟ  ಬಸಪ್ಪನನ್ನು  ಕಲ್ಯಾಣಪ್ಪನೆಂದು
    ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಹಂಬಲಿಸಿದ್ದರು.

         ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು
    ಹೇರಿದ್ದರಿಂದ, ಹೊಗೆಸೊಪ್ಪು, ಉಪ್ಪು ಇತ್ಯಾದಿ ದಿನಬಳಕೆಯ ವಸ್ತುಗಳ ಮೇಲೆ ಕರವನ್ನು
    ಹೇರಿದ್ದು   ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ
    ನಂಜಯ್ಯ ಹಾಗೂ ಕೆದಂಬಾಡಿ ರಾಮಯ್ಯ ಗೌಡ 1837 ಎ.6 ರಂದು ಇಲ್ಲಿಂದಲೇ ದಂಗೆ ಆರಂಭಿಸಲು
    ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು
    ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಅರಂಭಿಸಲಾಯ್ತು. ಇವನು ಅಮರಸುಳ್ಯದ
    ಅಮಲ್ದಾರನಾಗಿದ್ದು ಆಂಗ್ಲರ ಪರವಾಗಿ ಅನಾಚಾರಗಳನ್ನು ನಡೆಸುತ್ತಿದ್ದ. ಒಂದು ಬಾರಿ
    ಕೆದಂಬಾಡಿ ರಾಮಯ್ಯ ಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲದಲ್ಲಿ
    ಅಡ್ಡಗಟ್ಟಿ ಕತ್ತಿಯಿಂದ ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು
    ಉಳಿಸಿತ್ತು. ಆದರೆ ಮದುವೆಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವುದರೊಂದಿಗೆ
    ಕ್ರಾಂತಿಯ ಕಹಳೆ ಊದಲಾಯಿತು.

              ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ,ಕೆದಂಬಾಡಿ ರಾಮಯ್ಯ ಗೌಡ, ಚೆಟ್ಟಿ-ಕುರ್ತು
    ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ
    ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಪಡೆ 1837ರ ಮಾರ್ಚ್ ನಲ್ಲಿ
    ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ(ಪುಟ್ಟ ಬಸವ) ಮಾರ್ಚ್ 30ರಂದು
    ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ. ಇಲ್ಲೇ ಪ್ರಸಿದ್ಧ ಇಸ್ತಿಹಾರ್
    ಪ್ರಕಟಿಸಿದ. ಅಮರ ಸುಳ್ಯ ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವುದು;ಕಂದಾಯ
    ಮನ್ನಾ;ತಂಬಾಕು,ಉಪ್ಪಿನ ಮೇಲಿನ ತೆರಿಗೆ ರದ್ದು.  ಇದರಿಂದ ಪಂಜ, ಪುತ್ತೂರು,ಕಡಬ,
    ವಿಟ್ಲ ಸುಲಭದಲ್ಲಿ ಕೈವಶವಾದರೆ ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ
    ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಹೆಗ್ಡೆ
    ಪಿರಂಗಿಗಳನ್ನು ಕಳುಹಿಸಿದರು.  ಪಡೆ ಯಾವುದೇ ಸಮಸ್ಯೆ ಇಲ್ಲದೆ ಮಂಗಳೂರು ಸೇರಿ
    ಬಾವುಟಗುಡ್ಡೆಯನ್ನು ,ಖಜಾನೆ,ಜೈಲು,ಶಸ್ತ್ರಗಳನ್ನು ವಶಮಾಡಿಕೊಂಡು ಬ್ರಿಟಿಷ್
    ದ್ವಜವನ್ನು ಕಿತ್ತೊಗೆದು  ಕ್ರಾಂತಿಯ ಬಾವುಟವನ್ನು ಹಾರಿಸಿದರು. 13 ದಿನಗಳ ಸ್ವತಂತ್ರ
    ರಾಜ್ಯಭಾರ ಮಾಡಿದರು.ಇದಕ್ಕೆ ಸಂಬಂದಿಸಿದ ಕುರುಹುಗಳನ್ನು ಈಗಲೂ ಮಂಗಳೂರಿನ ಬಾವುಟ
    ಗುಡ್ಡೆಯಲ್ಲಿ ಕಾಣಬಹುದು.

     ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟೀಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ
    ಸುಬ್ರಾಯ ಹೆಗ್ಗಡೆ ಹಾಗೂ ಪಡೆಯನ್ನು ನೇತ್ರಾವತಿ ನದಿ ದೋಣಿಯಲ್ಲಿ ದಾಟುತ್ತಿರುವಾಗ
    ನದಿಯಲ್ಲಿ ಪಿರಂಗಿ ಹಾರಿಸಿ ಸಾಯಿಸಲಾಯಿತು.

                   ಕಣ್ಣಾನೂರಿನಿಂದ ಆಂಗ್ಲರ ಪಿರಂಗಿ ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ
    ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರೆ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ
    ಅಪ್ಪಯ್ಯ ಗೌಡ,ಬಂಗರಸ, ರಾಮಯ್ಯ ಗೌಡ,ಕುಕ್ಕನೂರು ಚೆನ್ನಯ್ಯ,
    ಕಲ್ಯಾಣಪ್ಪ,ಕುಡಿಯರು,ನಾಲ್ಕುನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ರಾಮಯ್ಯ ಗೌಡರನ್ನು ಸೆರೆಹಿಡಿದು ಅವರಿಗೆ ಗಲ್ಲು ಶಿಕ್ಷೆಯನ್ನು ಗಡಿಪಾರಿಗೆ ಪರಿವರ್ತಿಸಿ ಅವರು ಮತ್ತು ಅವರ ಸಹಚರರು ಚೆಟ್ಟಿ ಕುಡಿಯ, ಕುಕ್ಕನೂರು ಚಿನ್ನಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರಕ್ಕೆ ಸಾಗಹಾಕಿ, ಜೀವನದುದ್ದಕ್ಕೂ ಕೈ ಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ರಸ್ತೆ ನಿರ್ಮಾಣ ಮಾಡುವ ದೈಹಿಕ 3eeದ ಕೆಲಸಕ್ಕೆ ಬ್ರಿಟಿಷರು ಬಲಸಿ ಕೊಂಡರು. ರಾಮಯ್ಯ ಗೌಡರು ಅಲ್ಲೇ ತಮ್ಮ ಕೊನೆಯುಸಿರು ಎಸೆದರು.
    ಕಲ್ಯಾಣಪ್ಪನಾಗಿದ್ದ ಪುಟ್ಟ ಬಸವನ ತಲೆಗೆ ಆಗಲೇ ಹತ್ತು ಸಾವಿರ ರುಪಾಯಿಗಳ ಬೆಲೆ
    ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿ ಬಸವಯ್ಯ   ದುಡ್ಡಿನ ಆಸೆಗೆ
    ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ.1837 ಮೇ 15ರಂದು ಕ್ಯಾ.ಲೀಹಾರ್ಡಿ
    ಮಡಿಕೇರಿಯಲ್ಲಿ ಕಲ್ಯಾಣಪ್ಪನನ್ನು ಹಿಡಿದು ವಿಚಾರಣೆ ನಡೆಸಿ, ಆತನನ್ನು, ಲಕ್ಷ್ಮಪ್ಪ ಬಂಗರಸ,ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ
    ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.ಕುಡಿಯರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು
    ಸಿಂಗಾಪುರಕ್ಕೆ ಕಳುಹಿಸಲಾಯ್ತು. ಕೊಡಗಿನ ನಾಯಕ ಗುಡ್ಡೆ ಮನೆ ಅಪ್ಪಯ್ಯ ಗೌಡನನ್ನು
    1837ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು  ಬಹಿರಂಗವಾಗಿ
    ಗಲ್ಲಿಗೇರಿಸಲಾಯ್ತು.

                   ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಪಲವಾಗಲಿಲ್ಲ!
    ಅನೇಕ ಮಂದಿ ಆಂಗ್ಲರ ಪರವಾಗಿ  ನಿಂತು ರಾಜದ್ರೋಹಿಗಳು ಆಂಗ್ಲರಿಗೆ ದಂಗೆಯನ್ನು
    ಅಡಗಿಸುವಲ್ಲಿ ನೆರವಾದರು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ
    ಕಾಟಕಾಯಿ-ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು(ಕುಳ್ಕುಂದ
    ಶಿವರಾಯ)ರು ಸಕಾರಣವಾಗಿಯೆ ನಿರಾಕರಿಸಿದರು.

                 ಉಳುವಾರು ರಾಮಯ್ಯ ಗೌಡ,ಕುಡೆಕಲ್ಲು ಪುಟ್ಟ ,
    ಗುಡ್ಡಜ್ಜ,ತಿಮ್ಮಯ್ಯ,ಸುಳ್ಯಕೋಡಿ ಕೃಷ್ಣಪ್ಪ,ಕಳಗಿ ಅಣ್ಣು,ಕುಕ್ಕೆಟ್ಟಿ
    ಚೆನ್ನ,,,,,ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್
    ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್
    ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ.ರಿಕ್ಟರ್ ಕೊಡಗು ಗಜೇಟಿಯರ್ ನಲ್ಲಿ” ಕೊಡಗು
    ಬಂಡಾಯವೆಂದು ಕರೆಯಲ್ಪಡುವುದು,ನಿಜವಾಗಿಯೂ ಹೇಳುವುದಾದರೆ “ಗೌಡರ ಮೇಲ್ಬೀಳುವಿಕೆ”
    ಎಂದಿದೆ. ಈ ದಂಗೆಯಲ್ಲಿ ಬ್ರಿಟಿಷರು ಸೆರೆ ಹಿಡಿದು ಶಿಕ್ಷೆಗೆ ಒಳಗಾದವರು ಸಂಖ್ಯ
    1113ಎಂದು ಬ್ರಿಟಿಷ್ ರೆಕಾರ್ಡ್ ನಲ್ಲಿ ದಾಖಲಾಗಿದೆ.(ಎನ್.ಎಸ್.ದೇವಿಪ್ರಸಾದ್
    ಸಂಪಾಜೆ:ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ,ಮುಳ್ಯ ಈಶ್ವರ ಸೋಮಾಯಾಜಿ,
    ಉಪ್ಪಿನಂಗಡಿ ಹೊಗೆಸೊಪ್ಪು ಇಸ್ಮಾಇಲ್ ಬ್ಯಾರಿ, ಚೆಟ್ಟಿ-ಕುರ್ತು ಕುಡಿಯರಂತಹ ಅನೇಕ
    ಭಿನ್ನ ಸಮುದಾಯದವರು ಹೋರಾಡಿದ್ದಾರೆ.

    ದಂಗೆಯಲ್ಲಿ ಆಂಗ್ಲರಿಗೆ ನೆರವಾದವರಿಗೆ ಕೋವಿ,ಕುದುರೆ,ಬಂಗಾರದ ಪದಕಗಳನ್ನು ನೀಡಲಾಗಿತ್ತು.
    ಈ ಪದಕದ ಒಂದು ಬದಿಯಲ್ಲಿ FOR DISTINGUISHED CONDUCT AND LOYALTY OF THE
    BRITISH GOVERNMENT,Coorg 1837
    ಇನ್ನೊಂದು ಬದಿಯಲ್ಲಿ “ಸಂನ್ 1837ನೇ ಯಪ್ರಿಲ್ ಮೇ ತಿಂಗಳಲ್ಲಿ (ಶರಾರದ್ರುದ !?!?)
    ಬಯಸುವ ವಿಚಾರದಲ್ಲು ಕುಂಪಣಿ ಸರಕಾರಕ್ಕೆ ನಂಮ(ತಪೂಲಾಲ್?!?!) ಮಾಡಿದ ಯಾದುಗಾಗಿ
    ನಿಶಾನಿಗೋಸ್ಕರ”
    ಎಂದಿದೆ. ಇದು ಹೋರಾಟ ಹೇಗೆ ಆಂಗ್ಲರ ಬೆವರಿಳಿಸಿತ್ತು ಎಂಬುದನ್ನು ಸಾರುತ್ತದೆ.

    ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ
    ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ
    ಇವರು ಕಾಣದಾಗುವುದು ನಮ್ಮ ದುರ್ದೈವ. ಅಕ್ಟೋಬರ್ 31 ಕೊಡಗಿನ ನಾಯಕ  ಸುಬೇದಾರ್
    ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು  ಹುತಾತ್ಮರ ದಿನವೆಂದು
    ಕೊಡಗು ಜಿಲ್ಲಾಡಳಿತದ ವತಿಯಿಂದ ಆಚರಿಸುತ್ತಿರುವ.

    – ಅನಂತರಾಜ ಗೌಡ  ಪುತ್ತೂರು.

    ೮೦೭೩೯೧೩೩೩೬. / 8073913336  

    ನೆರವು  :   ಜಿ  ರಿಚ್ಟರ್ ರ ಕೊಡಗು ಗೆಜಿಟಿ ಯರ್, ಮೇಜರ್ ವಿಗೌರ್ಕ್ಸ್ರ್ ರ
    ಪುಸ್ತಕ, ಇತಿಹಾಸಕಾರ  ಪುತ್ತೂರು ಅನಂತರಾಜ ಗೌಡರ “ರಾಜಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು
    ಗೌಡರು” ಪುಸ್ತಕ; ಕೊಡಗಿನ ಇತಿಹಾಸ- ಡಿ.ಯನ್.ಕೃಷ್ಣಯ್ಯ;
    ಅಮರ ಸುಳ್ಲ್ಯ ಸ್ವಾತಂತ್ರ ಹೋರಾಟ- ಯನ್. ಯಸ್. ದೇವಿಪ್ರಸಾದರು.

    ಲೇಖಕ:
    P. Anantharaja Gowda 
    8073913336
    ಪಿ. ಅನಂತರಾಜ ಗೌಡ

Add a review

Your email address will not be published. Required fields are marked *

Related Products