ಕಾಯ

Original price was: ₹ 350.Current price is: ₹ 312.

SKU: Kaaya Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .5 kg
Author
Page Nos
Publications
(1 customer review)

SYNOPSIS

Opinion of Others

There are no others opinion yet.

Customer Reviews

1 review for ಕಾಯ

  1. Hareesha AS

    ಪುಸ್ತಕ: ಕಾಯಾ
    ಲೇಖಕರು: ಗುರುಪ್ರಸಾದ ಕಾಗಿನೆಲೆ
    ಪ್ರಕಟಿತ ವರ್ಷ: 2021

    ‘ಪ್ಲಸ್’ ಸೈಜಿನ ಕಾದಂಬರಿ ‘ಕಾಯಾ’, ಓದಿ ಮುಗಿಸಿದ ಕ್ರೆಡಿಟ್ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆಗೆ ಸಲ್ಲಬೇಕು, ಕಾರಣ ನಮ್ಮೂರಿಗೆ ತಲುಪಲು ಬೈಕಿನಲ್ಲಾದರೆ ಎರಡು ಗಂಟೆಯ ಕಾಲಾವಧಿ, ಸಾರ್ವಜನಿಕ ಸಾರಿಗೆ ಕೃಪಾಕಟಾಕ್ಷದಿಂದ ಆರು ಗಂಟೆಯ ಅವಧಿ ತೆಗೆದುಕೊಂಡಿತ್ತು, ಹೋಗಿ ಬಂದ ಪ್ರಯಾಣದಲ್ಲೇ ಮುಕ್ಕಾಲುಪಾಲು ಓದು ಮುಕ್ತಾಯವಾಗಿತ್ತು.

    ಕಾದಂಬರಿಯ ಅಧ್ಯಾಯದ ಸಂಖ್ಯೆ ಸಮ-ಬೆಸ ಎಂದು ಬದಲಾದಂತೆ ಕಥೆ ಗತಕ್ಕೂ ವರ್ತಮಾನಕ್ಕೂ ತೂಗಾಡುತ್ತಿರುತ್ತದೆ, ಅಧ್ಯಾಯದ ಸಂಖ್ಯೆಯ ಗಾತ್ರ ಬೆಳೆದಂತೆ ಗತ-ವರ್ತ ಏಕವಾಗುತ್ತಾ ಸಾಗುತ್ತದೆ. ಕಾದಂಬರಿಯು ಮುಖ್ಯವಾಗಿ ಅಮೇರಿಕಾ ಅನಿವಾಸಿ ಭಾರತೀಯರ ಜೀವನ ವಿಧಾನ, ಬಾಹ್ಯ ಸೌಂದರ್ಯವನ್ನು ವೃದ್ಧಿಸುವುದರಲ್ಲಿ ನಡೆಯುವ ಪ್ಲಾಸ್ಟಿಕ್ ಸರ್ಜರಿ, ಹೆಚ್ ಐ ವಿ ವೈರಸ್ ಆರಂಭದ ಕಾಲಾವಧಿಯಲ್ಲಿ ಅದರ ಬಗ್ಗೆ ವಿಜ್ಞಾನಕ್ಕಿದ್ದ ಮಿತಿ, ಸಮಾಜದಲ್ಲಿನ ಅಪನಂಬಿಕೆಯ ಸುತ್ತಾ, ಅದರ ಪೀಡಿತರ ಬದುಕು ಬವಣೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಸಾಗುತ್ತದೆ.

    ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು ಪ್ಲಾಸ್ಟಿಕ್ ಸರ್ಜನ್ ಡಾ. ‘ಭೀಮ್ ಮಲೀಕ್’ ಮತ್ತು ಅವನ ಹೆಂಡತಿ ‘ಪಾರ್ವತಿ’ (ಪರಿ), ಎಚ್.ಐ.ವಿ. ‘ಪಾಸಿಟಿವ್ ಕಸ್ತೂರಿ’ ಮತ್ತು ಅವಳ ಮಗಳು ‘ಸಮಂತಾ’ (ಮಲೀಕನ ಎರಡನೇ ಹೆಂಡತಿ). ಇವರ ಜೊತೆಗೆ ಸಮಂತಾಳ ಪ್ರೇಯಸಿ ‘ಹನಿ ಮಠ’ (ಸಲಿಂಗ ಸಂಗಾತಿ), ಮೀಟೂ ಸಂತ್ರಸ್ತೆ ‘ಲೀಸಾ ಸಾಲಿಂಜರ್’, ಡಾ. ಮಲೀಕ್ ನ ಲಾಯರ್ ‘ಸಿದ್ದಕಿ’, ಕಸ್ತೂರಿಯ ಮೊದಲ ಗಂಡ ‘ಹರಿಹರ’ ಮತ್ತು ಎರಡನೇ ಗಂಡ ‘ಹಾಕಿನ್ಸ್’ ಉಳಿದೆಲ್ಲಾ ಪಾತ್ರಗಳು ನೆಪ ಮಾತ್ರ.

    ಕಥೆ ಸಾಗುವುದು ಅಮೇರಿಕಾದಲ್ಲಾದರೂ, ಅನಿವಾಸಿ ಭಾರತೀಯರ ಅಲ್ಲಿನ ಭಾವನೆಗಳ ಆಳ, ಸಂಬಂಧಗಳ ಗಟ್ಟಿತನ, ಸಮಾಜದ ದೃಷ್ಟಿಕೋನವನ್ನು ವಿವರವಾಗಿ ಹಿಡಿಯುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಕಥೆಯ ಸಾರಾಂಶ ನಾನು ಹೇಳುವುದಕ್ಕಿಂತ ಕಾದಂಬರಿಯನ್ನು ನೀವೇ ಓದಿದರೆ ಉತ್ತಮ, ಮೊದಮೊದಲು ಭಾಷೆಯ ತೊಡಕಾಗಬಹುದು, ನಂತರ ಲೇಖಕರ ಬರಹದ ಶೈಲಿಗೆ ತಿಳಿಯದೆಯೇ ಒಗ್ಗಿಕೊಳ್ಳುತ್ತೇವೆ, ಮುಂದೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.

    ಕಾದಂಬರಿ ಓದಿ ಪೂರ್ತಿಗೊಳಿಸಿದ ನಂತರ ಕಾದಂಬರಿಯ ಪಾತ್ರಗಳು ಕೇವಲ ಕಾದಂಬರಿಗೆ ಸೀಮಿತವಾಗದೇ ನನ್ನ ಸುತ್ತಲಿರುವವರಲ್ಲಿ ಆ ಪಾತ್ರಗಳು ಜೀವ ಪಡೆಯುತ್ತಿದ್ದದ್ದು ನನ್ನನ್ನು ಚಿಂತೆಗೆ ದೂಡಿತ್ತು. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರೆದ ಪರಿಣಾಮವಾಗಿ ಒಂದು ಸಮಾಜದಲ್ಲಿ ಆದ ಬದಲಾವಣೆಗಳು ಬೇರೊಂದು ಸಂಸ್ಕೃತಿಯನ್ನು ಆಕ್ರಮಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಾರವು. ಈಗ ಕಾದಂಬರಿಯಲ್ಲಿನ ಆ ಬದಲಾವಣೆಗಳು ನಮ್ಮನ್ನೂ ಆಕ್ರಮಿಸಿದಂತೆ ಭಾಸವಾಯಿತು ನನಗೆ. ಹಿಂದೆ ಅಂತಹ ಬದಲಾವಣೆಗಳು ಆಗುತ್ತಿರಲಿಲ್ಲ ಎಂದೇನಲ್ಲ, ಒಂದು ಸಮಾಜದಲ್ಲಿ ಬದಲಾವಣೆ ಉದ್ಭವಿಸಿದರೆ ಅದು ಬೇರೊಂದು ಸಂಸ್ಕೃತಿಯ ಮೇಲೆ ಪರಿಣಾಮ ಬೀಳಲು ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು, ಆ ಸಮಯದಲ್ಲೇ ಅದರ ಸಾಧಕ ಬಾಧಕಗಳ ಅರಿವಾಗಿ ಬೇರೊಂದು ಸಮಾಜಕ್ಕೆ ತಲುಪುವಲ್ಲಿ ಕೇವಲ ಸಕಾರಾತ್ಮಕವಾದವು ಮಾತ್ರ ತಲುಪುತ್ತಿತ್ತು ಆದರೆ ಈಗ ಅಷ್ಟು ಸಮಯವಿಲ್ಲ, ಒಂದು ಬದಲಾವಣೆ ಶುರುವಾದರೆ ಏಕಕಾಲದಲ್ಲಿ ಎಲ್ಲೆಡೆಯೂ ಆವರಿಸಿಬಿಡುತ್ತದೆ.

    ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯ ಬಹಳ ಮುಖ್ಯ ಎಂದು ಸಾಕಷ್ಟು ಹಿರಿಯರು, ಜ್ಞಾನಿಗಳು ಮೌಖಿಕವಾಗಿ, ಬರಹಗಳ ಮೂಲಕ ತಿಳಿಹೇಳಿದರೂ, ಆ ಬಾಹ್ಯಕ್ಕೆ ಸೆಳೆತವಾಗದೇ ಆ ಆಂತರಿಕ ಸೌಂದರ್ಯವನ್ನು ಅನ್ವೇಷಿಸುವ ಪರಿಪಾಠವೇ ಇಲ್ಲ ಎಂದನಿಸುತ್ತದೆ ನಮಗೆಲ್ಲಾ. ಬಹುಶಃ ಆ ಆಂತರಿಕ ಸೌಂದರ್ಯವನ್ನೇ ಪ್ರಶ್ನಿಸುವ ಅಹಂ ತಲೆಹೊಕ್ಕಿದ ಕಾರಣದಿಂದಲೋ! ಅಥವಾ ವಿಕಾಸದ ಕಾಮ, ಕಣ್ಣನ್ನು ಕವಿದ ಕಾರಣದಿಂದಲೋ! ಅಥವಾ ಯೌವ್ವನಕ್ಕೆ ಬಾಹ್ಯ ಸೌಂದರ್ಯ, ಮುದಿಗೆ ಆಂತರಿಕ ಸೌಂದರ್ಯ ಮುಖ್ಯ ಎಂದು ಸಪ್ತಮನಸ್ಸು ನಮ್ಮನ್ನು ನಿಯಂತ್ರಿಸುವ ಕಾರಣದಿಂದಲೋ! ಎಷ್ಟೇ ತಲೆಮಾರುಗಳು ಕಳೆದರೂ, ಈ ಪುನರಾವರ್ತನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದನಿಸುತ್ತದೆ.

    ಪ್ಲಾಸ್ಟಿಕ್ ಸರ್ಜರಿಯ ಮೂಲ ಉದ್ದೇಶವೇ ಮರೆಯಾಗಿ ಕೇವಲ ಸೌಂದರ್ಯವರ್ಧನೆಗೆ ಮಾತ್ರ ಸೀಮಿತ ಎನ್ನುವಂತಾಗಿದೆಯಂದು, ಮೊದಮೊದಲಿಗೆ ಪ್ಲಾಸ್ಟಿಕ್ ಸರ್ಜರಿ ಸೌಂದರ್ಯವನ್ನು ಹೆಚ್ಚಿಸಿದಂತೆ, ಆತ್ಮವಿಶ್ವಾಸವನ್ನು ಪುಟಿದೇಳುವಂತೆ ಮಾಡಿದಂತ್ತಿದ್ದರೂ ಕೆಲ ಕಾಲದ ನಂತರ ಅದೇ ಸೌಂದರ್ಯ, ಆತ್ಮವಿಶ್ವಾಸದ ಜಾಗದಲ್ಲಿ ‘ಜೊಳ್ಳು’ ತುಂಬುತ್ತದೆ ಎಂದು ಮನವರಿಕೆ ಮಾಡಿಸುವಲ್ಲಿ ಕಾದಂಬರಿ ಸಫಲವಾಗಿದೆ, ಗುರುಪ್ರಸಾದ ಕಾಗಿನೆಲೆಯವರು ಗೆದ್ದಿದ್ದಾರೆ……..

Add a review

Your email address will not be published. Required fields are marked *

Related Products