ಮನೆಯ ಎದುರೇ ಇರುವ ಹಸಿರುಕ್ಕುವ ಗದ್ದೆ ಬಯಲು ದಾಟಿ, ತೊರೆಯೊಂದರ ನೀರಿನಲ್ಲಿ ಕಾಲಾಡಿಸಿ, ಸನಿಹದ ಕಾಡಿನಲ್ಲಿ ನಡೆಯತೊಡಗಿದರೆ, ಸಿಹಿ ನೀರಿನ ಬುಗ್ಗೆ, ಹಾರುವ ಓತಿ, ಕನ್ಯಾಸ್ತ್ರೀ ಹೆಸರಿನ ಅಪರೂಪದ ಅಣಬೆ, ಬಕುಳದ ಹೂ, ಚೇಂಪಿ ಹಣ್ಣು – ಇವೆಲ್ಲವೂ ಕಾಣಸಿಗುತ್ತವೆ, ಆಪ್ತವಾಗುತ್ತವೆ. ಇಂತಹ ಅನುಭವಗಳಲ್ಲಿ ನೀವೂ ಭಾಗಿಯಾಗಬೇಕೆ? ಹಾಗಿದ್ದಲ್ಲಿ ಈ ಪುಸ್ತಕ ಓದಿ.
‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ ನಂಬಿಕೆ, ಭರವಸೆ ಆಗಬೇಕಿದ್ದ ಈ ಪ್ರಮಾಣ ಗೌರಿಯ ಪಾಲಿಗೆ ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ
nil
ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.
ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.
ಪ್ರೀತಿನಿ ಧನಂಜಯ ಅವರ “ನಿಷಿತೆ”. ಈ ಕಾದಂಬರಿಯು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಪ್ರೀತಿನಿ ಅವರು ತಮ್ಮ ಮೊದಲ ಕೃತಿಯಲ್ಲೇ ಇಂಥದ್ದೊಂದು ಪ್ರಯೋಗಕ್ಕೆ ಅಣಿಯಾಗಿದ್ದು ಮೆಚ್ಚಬೇಕಾದ ಸಂಗತಿ. ದೆವ್ವ, ಭೂತ, ವಾಸ್ತವ, ಕಲ್ಪನೆ ಮತ್ತು ವೈಜ್ಞಾನಿಕ ವಿಷಯಗಳ ಸುತ್ತಲೇ ಸುತ್ತುವ ಈ ಕಾದಂಬರಿಯ ಮೂಲಕ ನಿಜಕ್ಕೂ ದೆವ್ವ ಭೂತಗಳಿಗೆ ಅಸ್ತಿತ್ವ ಇದೆಯೋ? ಇಲ್ಲವೋ? ಎನ್ನುವ ವೈಚಾರಿಕತೆಯ ಬೆಳಕು ಚೆಲ್ಲಲು ಲೇಖಕಿ ಪ್ರಯತ್ನಿಸಿದ್ದಾರೆ. ಎಷ್ಟೊಂದು ಸಿನೆಮಾಗಳನ್ನು ನೋಡಿದರೂ ದೆವ್ವ ಭೂತಗಳ ಬಗೆಗಿನ ಕುತೂಹಲ ತಣಿಯದವರಿಗೆ ಈ ಕೃತಿ ರಸಾನುಭವ ನೀಡಬಲ್ಲುದು ಮತ್ತು ಒಂದೊಳ್ಳೆ ಎಂಟರ್‌ಟ್ರೈನರ್ ಆಗಬಲ್ಲುದು.
ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ.
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ.
ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.
ಪ್ರಿಯ ಪ್ರಸಾದ್ ಚತುರ್ಮುಖ ಬಸದಿಯ ಕಲ್ಲ ಮೇಲೆ ಕೂತು ಪುಟ್ಟ ಚೀಲದಿಂದ ಬಿಟು, ಚಕ್ಕುಲಿ, ಬನ್ನುಗಳನ್ನು ಮುಖದ ಬಣ್ಣ, ತುಟಿಯ ಕೆಂಪು ಹಾಳಾಗದಂತೆ ತಿನ್ನುವ ಮರಿ ಮಹಿಷಾಸುರ "ವೇಷದ ಸಂತು". ನಿಗೂಢ ಮಳೆಯ ಕಾಡಿನಲ್ಲಿ ಕಂಬಳಿಕೊಪ್ಪೆ ಹಾಕಿಕೊಂಡು, ಅದೃಷ್ಟಕ್ಕಾಗಿ ಕಾದವನಂತೆ, ಕಲ್ಲಣಬೆಗಾಗಿ ಅಲೆಯುವ ನಿಚ್ಚು, ತನ್ನ ಸಿರಿಕಂಠದ ಭಾಗವತಿಕೆಯ ಯಕ್ಷಬಿಂಬಕೆ ತಾನೇ ಮಾರು ಹೋಗಿ, ತನ್ನನ್ನೇ ಕಳೆದುಕೊಂಡು ಕಂಗಾಲಾದ ಗಿರಿಧರ, ಇಂಥವರ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀಯ. ಮೇಲ್ನೋಟಕ್ಕೆ ಒಂದು ಬಗೆಯ ವರ್ಣನಾತ್ಮಕ ಗುಣ ಈ ನಿರೂಪಣೆಗಳಲ್ಲಿ ಎದ್ದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ಅದು ಆಯಾ ಜೀವಿಗಳ ಖಾಸಗೀ ಜೀವನದ ದಾರುಣತೆಯ ವಿರೋಧಾಭಾಸವನ್ನು ಧ್ವನಿಸುತ್ತದೆ. ಹಬ್ಬದ ನೆಪದಲ್ಲಿ ಪುರಾಣದ ವೇಷಗಳನ್ನು ತೊಟ್ಟುಕೊಂಡು ಮನೆಮನೆಗೆ ಕಾಣಿಕೆಗಾಗಿ ಅಲೆಯುವುದು, ಕಲ್ಲಣಬೆಯ ರುಚಿ ಏನೆಂದೇ ತಿಳಿಯದವ ಅದನ್ನು ಅಲೆದಾಡಿ ಹಕ್ಕಿ ತಂದು ತನಗಾಗಿ ಒಂದನ್ನೂ ಉಳಿಸಿಕೊಳ್ಳದೇ ಪುಡಿಗಾಸಿಗೆ ಮಾರುವುದು, ಸಾರ್ವಜನಿಕರ ಕಣ್ಣಲ್ಲಿ ಏರುತ್ತ ಹೋದ ಕಲಾವಿದ ಅತ್ಮಮೋಹದ ನರಕಕ್ಕೆ ಜಾರುವುದು, ಇಂಥ ವಿರೋಧಾಭಾಸಗಳು ಈ ಕತೆಗಳ ಮುಖ್ಯ ಲಕ್ಷಣಗಳಾಗಿ ನನ್ನನ್ನು ತಟ್ಟಿದವು. ಮೊದಲೇ ಅಸ್ಪಷ್ಟವಾಗಿಯಾದರೂ ಮನಗಂಡಿರುವ ಕತೆಯನ್ನು ಆರಾಮಾಗಿ “ಎಲೆಗೆ ಸುಣ್ಣ ಹಚ್ಚುತ್ತ ಹೇಳುವ ಶೈಲಿ" ನಿನ್ನದು. ಹೀಗಾಗಿ ಚೂರೂ ಹದ ತಪ್ಪಿದರೂ ವಿರೋಧಾಭಾಸದ ಆ ಅಜ್ಞಾತ ನಾಡಿಬಿಂದು ಎಲ್ಲೋ ಹಗುರಾಗಿಬಿಡಬಹುದು, ಅಥವಾ ಮರೆಯಾಗಿಬಿಡಬಹುದು. ನಿನಗೂ ಗೊತ್ತಿರದ ಸಂಗತಿಗಳು ಬಂದು ಸೇರಿಕೊಳ್ಳಲು ನೀನು ಬಾಗಿಲುಗಳನ್ನು ತೆರೆದಿಟ್ಟುಕೊಂಡಾಗ ಮಾತ್ರ ಹೊಸತೊಂದು ಅನಿರೀಕ್ಷಿತ, ಅಸಂಗತ ಅಂಶ ಬಂದು ನಿನ್ನನ್ನು ಚಕಿತಗೊಳಿಸಬಹುದು. ಗಿರಿಧರನಿಗೆ ಅನಿಸುವಂತೆ, ಕಥನವೂ ಸಹ ಕಾಣದ ಕಡಲಿನೆಡೆಗೆ ಚಲಿಸುತ್ತಿರುವ ನದಿಯಂತೆ, ಅದು ತನ್ನ ದಂಡೆಯನ್ನು ತಾನೇ ರೂಪಿಸಿಕೊಳ್ಳುತ್ತದೆ. ನಿನ್ನ ಬರವಣಿಗೆ ನಿನ್ನನ್ನು ಒರೆಗೆ ಹಚ್ಚುತ್ತಲೇ ಇರಲಿ, ಹೊಸ ಹೊಸ ಅಸಂಗತ, ಅನಿರೀಕ್ಷಿತ ತಿರುವುಗಳಿಗೆ ತೆರೆದುಕೊಳ್ಳುತ್ತ ಜೀವಜಾಲದೊಂದಿಗಿನ ನಂಟನ್ನು ಒಳಗೊಳ್ಳುತ್ತ ಪ್ರವಹಿಸಲಿ, ಜಯಂತ ಕಾಯ್ಕಿಣಿ
ಹಿರಿಯರಾದ ಕೊಡಸೆ ಸರ್. ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲರಿ!! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ. ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು. ಪ್ರೊ. ಓಂಕಾರ ಕಾಕಡೆ
ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ
...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ. ...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ ಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ, ಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ.. -ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಡಾ. ಟಿ.ಎಸ್. ವಿವೇಕಾನಂದ.. ಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ', ತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾರ್ ಈ ಪ್ರಯತ್ನದ ಜೊತೆಗಾರ. -ಪ್ರೊ. ಕಿ.ರಂ. ನಾಗರಾಜ,
ಫಲ್ಗುಣಿ ಎಂಬ ಮಿಸ್ಟೀರಿಯಸ್ ಹುಡುಗಿ ಏನಾಗಬೇಕು ನನ್ನ ಬದುಕಿಗೆ? ಅಂದು ಅವಳ ಕಾರಣದಿಂದಲೇ ಸಮ್ಯಕ್ ನಿಂದ ಸಂಬಂಧ ಕಡಿದುಕೊಂಡೆ. ಇಂದು ಅವಳು ಕರೆದಿದ್ದಕ್ಕೆ ಮತ್ತದೇ ಹಳೆಯ ಜಾಗಕ್ಕೆ ಹೋಗುತ್ತಿದ್ದೇನೆ. ನಾವು ಭೇಟಿಯಾಗೋ ಪ್ರತಿ ವ್ಯಕ್ತಿಯೂ ಯಾವುದೋ ಉದ್ದೇಶಕ್ಕೆ ನಮಗೆ ಸಿಕ್ಕಿರುತ್ತಾರೆ ಅಂತಾರಲ್ಲ? ನಿಜವೇ? ಇರಲಾರದು. ನಮಗಾಗಿ ಯಾರು ಹೀಗೆಲ್ಲಾ ಪ್ಲಾನ್ ಮಾಡುತ್ತಾರೆ! ಎಲ್ಲವೂ ಕೋ-ಇನಸಿಡೆನ್ಸ್ ಅಷ್ಟೇ. ಲೈಫ್ ಇಸ್ ಅ ಕಲೆಕ್ಷನ್ ಆಫ್ ರಾಂಡಮ್ ಇನ್ಸಿಡೆನ್ಸ್ ಹೆಚ್ಚಿನ ಅರ್ಥಗಳನ್ನು ನಾವೇ ಕಂಡುಕೊಂಡು ಅದರೊಳಗೊಂದು ಸಣ್ಣ ಥ್ರಿಲ್ ಅನುಭವಿಸುತ್ತಿರುತ್ತೇವೆ ಮೇ ಬಿ?...
ಇದು ಪುಟ್ಕತೆಯ ಲೋಕ. ಪುಟಪುಟದಲ್ಲೂ ಪುಟ್ಟಪುಟ್ಟ ಕತೆಗಳು, ಬೃಹತ್ತಾದುದನ್ನೇ ಹೇಳುವ ಕತೆಗಳು. ಅವರ ಕತೆ, ಇವರ ಕತೆ, ನಿಜದ ಕತೆ, ಕಟ್ಟುಕತೆ... ಎಷ್ಟೆಲ್ಲಾ ಕತೆಗಳು. ನಿಮಗೆ ಗೊತ್ತೇ, ಇಲ್ಲಿ ನಿಮ್ಮ ಕತೆಯೂ ಇದೆ! ಓದ್ಯೋಡಿ.
ಇಲ್ಲೊಂದು ಹೊಸ ಲೋಕವಿದೆ.. ಓಹ್! ಒಂದು ಭಾವಸಮುದ್ರದಲ್ಲಿ ಮುಳುಗೇಳುವುದು ಅಂದರೆ ಏನು ಎನ್ನುವುದು ಗೊತ್ತಾಗಬೇಕಾದರೆ ಪಿ ಚಂದ್ರಿಕಾ ಅವರ ಈ 'ಪ್ಯಾಲೆಟ್' ಓದಬೇಕು. 'ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ' ಎಂದಾದಾಗ ಅವರು ಕಟ್ಟಿಕೊಡಲು ಹೊರಟಿದ್ದು ತನ್ನದೇ ಲೋಕವನ್ನು ಕಟ್ಟಿಕೊಟ್ಟ ಬರಹಗಳೆಲ್ಲವೂ ಅವರೇ ಬಣ್ಣಿಸಿಕೊಳ್ಳುವ ಹಾಗೆ ಅದು ತಾನು 'ಒಬ್ಬಳೆ ಆಡುವ ಆಟ'. ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುತ್ತಾರೆ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಬರಹಗಳಾಗಿಬಿಡುತ್ತದೆ. ಅವರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಈ 'ಪ್ಯಾಲೆಟ್' ನನ್ನನ್ನು ಹಲವು ಕಾಲ ತನ್ನ ತಿರುಗಣಿಯಲ್ಲಿ ಸಿಕ್ಕಿಸಿಕೊಂಡಿದೆ. ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ ಎನ್ನುತ್ತಾರೆ ಚಂದ್ರಿಕಾ. 'ಪ್ಯಾಲೆಟ್' ಓದಿದಮೇಲೆ ಅಂತಹ 'ಅದೃಷ್ಟ' ನನ್ನದಾಗಿದೆ. ಇದನ್ನು ಓದಿದ ನಂತರ ನಿಮಗೂ ಆ ಅದೃಷ್ಟ ಒಲಿಯಲಿದೆ.
"ನಮ್ಮ ಪ್ರೀತಿಪಾತ್ರರು ಸಾಧ್ಯವಾದಷ್ಟು ಕಾಲ ರಕ್ತಮಾಂಸದ ನಡುವೆ ಇರಲಿ ಎಂದು ಬಯಸುವುದೇ ನಿಜಕ್ಕೂ ಸ್ವಾರ್ಥ ಬಯಕೆ. ಇದು ನಮ್ಮ ದೌರ್ಬಲ್ಯದಿಂದ ಹುಟ್ಟಿಕೊಂಡಿದ್ದು ಅಥವಾ ಕಾಯವನ್ನು ತೊರೆದ ಬಳಿಕ ಅತ್ಯದ ಉಳಿವಿನ ಬಗ್ಗೆ ಇರುವ ನಂಬಿಕೆಯ ಫಲ. ಅಕಾರವು ಬದಲಾಗುತ್ತ ಬದಲಾಗುತ್ತ ಅಳಿದು ಹೋಗುತ್ತದೆ. ಆದರೆ ಮಾರ್ಗದರ್ಶಿಯಾದ ಚೈತನ್ಯವು ಬದಲಾಗುವುದೂ ಇಲ್ಲ, ಅಳಿದು ಹೋಗುವುದೂ ಇಲ್ಲ. ಪರಿಶುದ್ಧವಾದ ಪ್ರೀತಿಯು ಭೌತಿಕವಾದ ಕಾಯವನ್ನು ಮೀರಿ ಅಂತರಾತ್ಮವನ್ನು ಸೇರಿಕೊಂಡಾಗ ಅಗಣಿತ ಕಾಯಗಳಲ್ಲಿ ಇರುವ ಎಲ್ಲ ಜೀವಗಳಲ್ಲಿ ಏಕೀಭವಿಸುತ್ತದೆ..."
ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷಣರಾವ್ ಸದ್ಯ ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖಿಕೆ, ಅಂತಃಪ್ರಶ್ನೆ, ಪ್ರಜ್ಞಾಪ್ರವಾಹತಂತ್ರ ಇದೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ. ಲಕ್ಷಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀವ್ರತೆ ಮತ್ತು ಹೊಸದೃಷ್ಟಿ ಲಕ್ಷಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ: ಶಕ್ತಿಯೂ ಆಗಿದೆ.
ಇದು ಕಡಲ ತೀರದ ಹುಡುಗ ಮತ್ತು ಬಯಲು ಸೀಮೆಯ ಹುಡುಗಿಯರ ನಡುವಿನ ಒಂದು ನವಿರಾದ ಪ್ರೇಮ ಕಥೆ. ಹದಿಹರೆಯವನ್ನು ಆಗಷ್ಟೇ ದಾಟಿರುವ ಆದರೆ ಬದುಕಿನ ಬಗ್ಗೆ ಇನ್ನೂ ಪ್ರೌಢರಾಗಬೇಕಾದ ಯುವ ಮನಸುಗಳ ಪ್ರೇಮಕಥೆ.
ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.
ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ.
ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ.
ಕೊರತೆ ನೀಗಿಸಿದ ಕೃತಿ.. ಭಾರತವು ವಿಶ್ವಗುರುವಾಗಿ ಬಿಂಬಿತಗೊಳ್ಳುತ್ತಿರುವ ಇಂದಿನ ಜಾಗತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನನ್ನು ಒಂದು ಸಂಶಯ ಕಾಡತೊಡಗಿತ್ತು. ಇಪ್ಪತ್ತೊಂದನೇ ಶತಮಾನ ಪ್ರಾರಂಭವಾದ ಮೇಲೆ ಜನಿಸಿದ ಮಕ್ಕಳನ್ನು ಮತ್ತು ಎಳೆವಯಸ್ಕರನ್ನು ಈ ಬೆಳವಣಿಗೆಯ ಔಚಿತ್ಯ ಹಾಗೂ ಸೂಚ್ಯಾರ್ಥ ಮತ್ತು, ಆ ಅರ್ಹತೆ ಗಳಿಸಲು ಅಳತೆಗೋಲು ಏನಿರಬಹುದು ಎಂಬ ಬಗ್ಗೆ ಪ್ರಶ್ನಿಸಿದರೆ ಅವರಲ್ಲಿ ಸೂಕ್ತ ಉತ್ತರ ಇದ್ದೀತೆ ಎಂಬ ಸಂಶಯ. ಆ ಸಂಶಯದ ಬೆನ್ನಲ್ಲಿಯೇ ಕಂಡ ಒಂದು ಕೊರತೆ ಎಂದರೆ ನಮ್ಮ ಮಕ್ಕಳಲ್ಲಿ ಈ ವಿಚಾರಗಳ ಬಗ್ಗೆ ತಿಳಿಹೇಳುವ, ನಮ್ಮ ದೇಶದ ಹಲವು ಬೋಧಕರ, ಧಾರ್ಮಿಕ ಮತ್ತು ಆಧ್ಯಾತ್ಮ ಪ್ರವರ್ತಕರ ಮುಖ್ಯ ಬೋಧನೆಗಳನ್ನು, ಅವರ ವೈಚಾರಿಕತೆಯ ವ್ಯಾಪ್ತಿಯನ್ನು, ಸರಳಭಾಷೆಯಲ್ಲಿ ಒಂದೆಡೆ ಕಟ್ಟಿಕೊಡುವ ಪ್ರಕಟಣೆಗಳ ಅಭಾವ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪ್ರಭು ಅವರು 'ಬಹುತ್ವ ಭಾರತ ಕಟ್ಟಿದವರು' ಪುಸ್ತಕದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಾಗ, ಅಲ್ಲಿನ ಹನ್ನೊಂದೂ ಜೀವನ್ಮುಕ್ತರ ಬಗ್ಗೆ ಓದುತ್ತಿದ್ದಂತೆ, ಒಂದು ತೃಪ್ತಬಾವ ಮೂಡತೊಡಗಿತ್ತು. ನನ್ನಲ್ಲಿ ಮೂಡಿದ್ದ ಕೊರತೆಯ ಭಾವವನ್ನು ನೀಗಿಸಿದ್ದಾರೆ ಎನಿಸಿತ್ತು. ವಾಲ್ಮೀಕಿ, ಬುದ್ದ ಮೊದಲಾಗಿ, ಬಸವಣ್ಣ, ಅಲ್ಲಮ, ಅಕ್ಕಮ್ಮನವರ ಮೂಲಕ ಹಾದು, ಸರ್ವಜ್ಞ, ಶಾರಾದಾದೇವಿ, ವಿವೇಕಾನಂದ.. ಕೊನೆಗೆ ಜಿಡ್ಡು, ನಾರಾಯಣ ಗುರು ಮತ್ತು ದಲೈ ಲಾಮವರೆಗೆ, ಭಾರತದ ಹನ್ನೊಂದು ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಜೀವನವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಕಥಾನಕದಂತೆ ರಚಿಸಿರುವುದು ವಿಶೇಷವಾದ ನೆಮ್ಮದಿ ತಂದಿದೆ. ಎಲ್ಲರ ಮನೆಯ ಗ್ರಂಥಭಂಡಾರದಲ್ಲೂ ಎಲ್ಲರ ಕೈಗೂ ಸದಾ ಎಟುಕುವಂತೆ ಇರಬೇಕಾದ ಕೃತಿ ಇದು. - ಕೆ ಎನ್ ಗಣೇಶಯ್ಯ
ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು. 2000ದ ಸುಮಾರಿಗೆ ಸಿನಿಮಾ ವ್ಯಾಖ್ಯಾನದಲ್ಲಿ ಬಹಳ ಬದಲಾವಣೆ ಆಗಿತ್ತು. ಸಿನಿಮಾ ವಿಶ್ಲೇಷಣೆಯಲ್ಲಿ 'ಬಿಂಬ'ದ ಜೊತೆಗೆ 'ಬಿಂಬನ'ವನ್ನೂ ಒಂದು ಮೌಲ್ಯವಾಗಿ ಪರಿಗಣಿಸತೊಡಗಿದರು. ತೆರೆಯ ಮೇಲೆ ಕಾಣುವುದು ಬಿಂಬಗಳಾದರೆ ಅವನ್ನು ಸೃಷ್ಟಿ ಮಾಡಲು ಆಯ್ದುಕೊಳ್ಳುವ ತಾಂತ್ರಿಕ ಅಂಶಗಳು ಬಿಂಬನವನ್ನು ಸೂಚಿಸುತ್ತವೆ. ಸಿನಿಮಾದ ಬಿಂಬಗಳು ಅಲಿಪ್ತವಲ್ಲ, ಅವು ಯಂತ್ರಜನ್ಯವಾದರೂ ಅವನ್ನು ಸೃಷ್ಟಿ ಮಾಡುತ್ತಿರುವವರ ಇಷ್ಟಾನಿಷ್ಟಗಳು ಬಿಂಬಗಳಲ್ಲಿ ಹಾಗೂ ಬಿಂಬನ ಕ್ರಮದಲ್ಲಿ ವ್ಯಕ್ತವಾಗುತ್ತಾ ಇರುತ್ತವೆ. ಟೆಕ್ನಾಲಜಿಯ ಬಗ್ಗೆ ಮನುಷ್ಯನಿಗೆ ಯಾವಾಗಲೂ ಸೆಳೆತ, ಕುತೂಹಲ ಮತ್ತು ಭಯ ಇದ್ದೇ ಇರುತ್ತದೆ. ಸೆಳೆತಕ್ಕೆ ಕಾರಣ ಅದು ತನ್ನ ಬದುಕನ್ನು ಇನ್ನಷ್ಟು ಸುಂದರಮಾಡುತ್ತದೆ ಎನ್ನುವ ಭ್ರಮೆ, ತನಗೆ ಅಸಾಧ್ಯ, ನಿಗೂಢ ಎನಿಸಿದ್ದನ್ನು ಅದು ಸಾಧ್ಯ ಮಾಡಿಕೊಡುತ್ತಾದ್ದರಿಂದ ಕುತೂಹಲ, ಅದರ ಸ್ವರೂಪ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವಾದ್ದರಿಂದ ಭಯ-ಈ ಮೂರು ಭಾವನೆಗಳು ಬೇರೆ ಬೇರೆಯಾಗಿ ಅಥವಾ ಒಟ್ಟಾಗಿಯೇ ಕೂಡಿ ಅನಿರ್ವಚನೀಯ ಅನುಭವವೊಂದನ್ನು ನೀಡುತ್ತಿರುತ್ತದೆ.
Showing 61 to 90 of 149 results