nil
#
nil.
“ಮುಕ್ತಿಯ ಹಾದಿಯಲ್ಲಿ ಸಾಗುವಾಗ ಗಂಡು ಸ್ವಭಾವ ಮತ್ತು ಹೆಣ್ಣು ಸ್ವಭಾವ ಎನ್ನುವುದಕ್ಕೆ ಏನಾದರೂ ಪ್ರಸ್ತುತತೆ ಇದೆಯೇ," ಅನ್ನುವುದು ಥೇರೀ ಸೋಮಾಳ ಪ್ರಶ್ನೆ. ಇದು ಬೌದ್ಧಧರ್ಮದಲ್ಲಿ ಮಹಿಳೆಯನ್ನು ಕುರಿತ ಓದಿಗೆ ಹಲವು ಕಿಟಕಿಗಳನ್ನು ಒಟ್ಟಿಗೆ ತೆರೆಯುತ್ತದೆ. 2500 ವರ್ಷಗಳ ಹಿಂದಿನ ಸಮಾಜದಲ್ಲಿದ್ದ ವಿಭಿನ್ನ ಧರ್ಮಗಳಲ್ಲಿ ಮಹಿಳೆಯರು ಇರಲೇ ಇಲ್ಲ ಎನ್ನಬಹುದು. ಹಾಗಿದ್ದಾಗ ಅವರಿಗೆ ಸ್ವತಂತ್ರವಾಗಿ ಮುಕ್ತಿಸಾಧನೆ ಸಾಧ್ಯ ಎಂಬ ಕಲ್ಪನೆಯಂತೂ ಕನಸು ಬಿಡಿ. ಅವರೇನಿದ್ದರೂ ಮುಕ್ತಿಸಾಧನೆಗೆ ಅಡ್ಡಿ ಅನ್ನೋ ಅಂಬೋಣವಿತ್ತು ಅಷ್ಟೆ. ಹಾಗಂತ ಮಹಿಳೆಯರು ಮೋಕ್ಷಸಾಧನೆಗೆ ಅಡ್ಡಿ ಅನ್ನೋ ಅಂತಹ ಮಾತುಗಳು ಬೌದ್ಧ ಧರ್ಮದಲ್ಲಿ ಇರಲೇ ಇಲ್ಲ ಅಂತಲೂ ಅಂದುಕೊಳ್ಳಬಾರದು. ಅಷ್ಟಾದರೂ ಹೆಣ್ಣಿಗೆ ಸಂಬಂಧಿಸಿದಂತೆ ಬೌದ್ಧ ಧರ್ಮ ಬೇರೇನೆ. ಏಕೆಂದರೆ, ಮಹಿಳೆಯರಿಗೆ ಮೋಕ್ಷಸಿದ್ಧಿ ಸಾಧ್ಯ ಎಂದು ಬುದ್ಧ ಘಂಟಾಘೋಷವಾಗಿ ಹೇಳಿದ. ಚರ್ಚೆ, ಜಿಜ್ಞಾಸೆ, ಮುಕ್ತ ಸಂವಾದಗಳಿಗೆ ಬೇಕಾದ ಆವರಣ ಸೃಷ್ಟಿಯಾಗಿತ್ತು. ಹೆಣ್ಣುಮಕ್ಕಳು ಸ್ವತಂತ್ರವಾಗಿ, ದಿಟ್ಟವಾಗಿ ತಮಗೇನು ಬೇಕು ಅಂತ ಹೇಳೋದನ್ನು ಅದು ಸಾಧ್ಯವಾಗಿಸಿತ್ತು. ಹೆಣ್ಣುಮಕ್ಕಳು ನಿಯಮಗಳನ್ನು ಧೈರ್ಯವಾಗಿ ಪ್ರಶ್ನಿಸಿದರು. ಇಂದು ಕೂಡ ನಾವು ಚರ್ಚೆಮಾಡುವುದಕ್ಕೆ ಸಂಕೋಚ ಮಾಡಿಕೊಳ್ಳುವ ಮುಟ್ಟು, ಬಸಿರು, ಲೈಂಗಿಕ ಬಯಕೆಗಳು ಮುಂತಾದ ವಿಷಯಗಳನ್ನು ಅಂದು ಉಳಿದ ಭಿಕ್ಕುಗಳು ಮತ್ತು ಬುದ್ಧನ ಜೊತೆಗೆ ಚರ್ಚಿಸುವುದಕ್ಕೆ ಅವರಿಗೆ ಸಾಧ್ಯವಾಗಿತ್ತು. ಇದನ್ನು ಸ್ವೀಕರಿಸುವಂತಹ ಮನಃಸ್ಥಿತಿಯನ್ನು ಪುರುಷರಲ್ಲಿ ಮತ್ತು ಸಮಾಜದಲ್ಲಿ ಹುಟ್ಟುಹಾಕುವ ಅವಶ್ಯಕತೆ ಇಂದಿಗೂ ಇದೆ. ತಮ್ಮ ಕಾಲದೊಂದಿಗೆ ಆ ಮಹಿಳೆಯರು ಅನುಸಂಧಾನ ಮಾಡಿದ ಅಪೂರ್ವ ಕ್ರಮ ಇಂದಿಗೂ ಪ್ರಸ್ತುತ.
ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಪಡದ ನದಿಗಳಿಲ್ಲ, ಬೆಟ್ಟಗಳಿಲ್ಲ, ಯಾವ ಊರೂ ಇಲ್ಲ. ಹಾಗಾಗಿ ಇಡೀ ಭಾರತವೇ ಒಂದು ತೀರ್ಥಕ್ಷೇತ್ರ. ತೀರ್ಥಯಾತ್ರೆ ಅಭಯದ ಸಂಕೇತ. ಮನಸ್ಸಿಗೆ ಬಲ ಕೊಡುವ ಪ್ರಕ್ರಿಯೆ. ಭರವಸೆ ಕುಗ್ಗಿದಾಗ, ಚೈತನ್ಯ ತರುತ್ತದೆ. ಮನುಷ್ಯನ ತಿರುಗಾಟಕ್ಕೊಂದು ಆಧ್ಯಾತ್ಮಿಕ ಸ್ಪರ್ಶ ನೀಡುವುದೇ ತೀರ್ಥಯಾತ್ರೆ.. ಪ್ರವಾಸ ಲೌಕಿಕ ಅನುಭವವನ್ನು ಕೊಟ್ಟರೆ, ತೀರ್ಥಯಾತ್ರೆ ಅಲೌಕಿಕ ಅನುಭವವನ್ನು ತಂದುಕೊಡುತ್ತದೆ.
ದೇಶ ವಿಭಜನೆಯನ್ನು ಕುರಿತು ಈಗಾಗಲೇ ಲೆಕ್ಕವಿಲ್ಲದಷ್ಟು ಪುಸ್ತಕಗಳು ಬಂದಿವೆ. ಹಾಗೆ ನೋಡಿದರೆ ಇದೊಂದು ಮುಗಿಯದ ಸರಕು.ಕಾಲದಿಂದ ಕಾಲಕ್ಕೆ ಈ ದುರಂತವು ಬೇರೆ ಬೇರೆ ಮಾಹಿತಿ, ಅಂಕಿ-ಅಂಶ,ಸಂಶೋಧನೆ, ಚರಿತ್ರೆಯ ಅಧ್ಯಯನಗಳೊಂದಿಗೆ ಹೊಸ ಹೊಸ ಕೃತಿಗಳನ್ನು ಸೃಷ್ಟಿಸುತ್ತಿದೆ. ಅಂದಂತೆ,ಭಾರತದಲ್ಲಿ ಸಮಾಜವಾದದ ಯುಗದಲ್ಲಿ ಒಬ್ಬರಾದ ರಾಮ ಮನೋಹರ ಲೋಹಿಯಾ ಅವರು, ಅಖಂಡ ಭಾರತದ ಇಬ್ಭಾಗಕ್ಕೆ ನೇರ ಸಾಕ್ಷಿಯಾಗಿದ್ದವರು. ನೇರ ನಡೆ-ನುಡಿಗಳಿಗೆ ಮತ್ತು ನಿಲುವುಗಳಿಗೆ ಹೆಸರಾಗಿದ್ದ ಅವರು, ಭಾರತದ ಚಿಂತಕರ ವರ್ತುಲ ಮತ್ತು ಸಾರ್ವಜನಿಕ ಬದುಕಿನ ಮೇಲೆ ಬೀರಿರುವ ಪ್ರಭಾವ ಅಗಾಧವಾದುದು.ಅದರಲ್ಲೂ ಲೋಹಿಯಾ ಅವರು ದೇಶ ವಿಭಜನೆಗೆ ಕಾರಣರಾದವರು ಯಾರೆಂದು ಬಗೆದು ನೋಡಿ ಬರೆದಿರುವ The Guilty Men of India's Partition ಅತ್ಯಂತ ಮಹತ್ವದ ಕೃತಿಯಾಗಿದೆ.ಇದನ್ನು ಹೆಸರಾಂತ ಲೇಖಕ ಡಾ.ಟಿ ಎನ್ ವಾಸುದೇವಮೂರ್ತಿ ಅವರು "ದೇಶ ವಿಭಜನೆಯ ಪಾಪ ಹೊತ್ತವರು" ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಆಭಾರಿಗಳಾಗಿದ್ದೇವೆ ದೊಡ್ಡದೊಡ್ಡ ಪದಗಳ ಬಾರವಿಲ್ಲದೆ ಸಹಜವಾದ ತಿಳಿಗನ್ನಡದಲ್ಲಿ ಮೂಡಿಬಂದಿರುವ ಈ ಭಾಷಾಂತರವು ಕನ್ನಡ ವಾಙ್ಮಯಕೊಂದು ಬೆಲೆಯುಳ್ಳ ಸೇರ್ಪಡೆಯಾಗಿದೆ
ಅಪಾರ ಅಧ್ಯಯನ, ಅಧ್ಯಾಪನ, ಅನುಭವಗಳಿಂದ ಮೂಡಿಬಂದ ನೇರ ಹಾಗೂ ಸರಳ ನಿರೂಪಣೆ, ಅಗತ್ಯ ವಿವರಗಳು, ಅಲ್ಲಲ್ಲಿ ಶೋಭಿಸುವ ಗಾದೆ ಮಾತುಗಳು ಲೇಖನಗಳ ವಾಚ್ಯಾಸಕ್ತಿಯನ್ನು ಹೆಚ್ಚಿಸುತ್ತವೆ. ಬದುಕನ್ನು ಬಂದಹಾಗೆ ಸ್ವೀಕರಿಸುವ ಆಲೋಚನೆ, ಬರೆದಿದ್ದು ಕಮ್ಮಿ ಬರೆಯಬೇಕಾದ್ದು ಇನ್ನೂ ಇದೆ ಎಂಬ ಆಸೆ ಎಲ್ಲವೂ ಲೇಖಕಿಯ ಘನಾತ್ಮಕ ಅಂಶಗಳು. ಈಗಾಗಲೇ ಹಲವಾರು ಸಾಂದರ್ಭಿಕ ಲೇಖನಗಳು, ಕಥೆ, ಕವನ, ವಿಮರ್ಶೆ, ನಾಟಕ, ಅನುವಾದಗಳ ಮೂಲಕ ಹೆಸರಾಗಿರುವ ಡಾ.ಸತ್ಯವತಿ ಮೂರ್ತಿ ಅವರು ರಚಿಸಿರುವ 'ನಾನೂ ಮತ್ತು ನನ್ನವರ ಸ್ವೀಟಿ ಮತ್ತು ಇತರ ಪ್ರಬಂಧಗಳು ಸಂಕಲನವನ್ನು ಓದಿ ನನ್ನ ಅರಿವು,ಆಲೋಚನೆಗಳ ಮಿತಿಯಲ್ಲಿ ಒಂದಿಷ್ಟು ಅಭಿಪ್ರಾಯಗಳನ್ನು ಇಲ್ಲಿ ನೀಡಿದ್ದೇನೆ.ಈ ಮೂಲಕ ಅವರಿಗೆ ಶುಭ ಹಾರೈಸುತ್ತ,ಅವರಿಂದ ಇನ್ನಷ್ಟು ಮತ್ತಷ್ಟು ಸಾಹಿತ್ಯ ಕೈಂಕರ್ಯ ನಡೆಯಲೆಂದು ಆಶಿಸುತ್ತೇನೆ ಕೆ.ಎನ್.ಭಗವಾನ್
Showing 61 to 90 of 218 results