#
nil
NA
‘ಮಲೆನಾಡಿನ ಯಕ್ಷಚೇತನಗಳು’ ಕೃತಿಯು ರವಿ ಮಡೋಡಿ ಅವರ ಲೇಖನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಡಿ.ಎಸ್. ಶ್ರೀಧರ ತಾಳಿಪಾಡಿ ಅವರು ‘ಈ ಲೇಖನ ಮಾಲಿಕೆಯು ವಾಟ್ಸಾಪ್, ಫೇಸ್ಬುಕ್ ನಲ್ಲಿ ಸರಣಿಯಾಗಿ ಮೂಡಿಬಂದ ಲೇಖನ ಸಂಕಲನವಾಗಿದೆ. ರವಿ ಅವರು ಯಕ್ಷಗಾನ ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತು, ಅದಕ್ಕೆ ಸಂಬಂಧಿಸಿದ ಸಕಲವನ್ನೂ ಅಧ್ಯಯನ ಮಾಡಿ, ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರಿನಂತಹ ಯಕ್ಷಗಾನೀಯ ನೆಲದಲ್ಲಿ ನೆಲೆಯನ್ನು ಕಲ್ಪಿಸಿದ್ದಾರೆ. ಮುನ್ನೂರಕ್ಕೂ ಹೆಚ್ಚುಪ್ರಯೋಗಗಳನ್ನು ನಾಡಿನಾದ್ಯಂತ ನಡೆಸಿ ಹವ್ಯಾಸಿಯಾದರೂ ವೃತ್ತಿನಿರತರ ಪ್ರಾವೀಣ್ಯವನ್ನು ಸಾಧಿಸಿದ್ದಾರೆ. ಯಕ್ಷವಾಹಿನಿ ಮತ್ತು ಯಕ್ಷ ಸಿಂಚನ ಎಂಬೆರಡು ಸಮರ್ಥ ಸಂಸ್ಥೆಯ ಕರ್ಣಧಾರತ್ವವಹಿಸಿ ಎರಡು ಸಂಸ್ಥೆಗಳನ್ನು ಹೊತ್ತ ಆಂಜನೇಯ ಶಕ್ತಿಯ ಅನುಭಾವಿ ರವಿ. ಜೊತೆಗೆ ಫೋಟೋಗ್ರಫಿಯಂತಹ ಪ್ರವೃತ್ತಿಯಲ್ಲೂ ಪರಿಣತಿಯನ್ನು ಸಾಧಿಸಿದವರು. ರವಿ ಅವರು ಮಾಹಿತಿಗಳಿಗಾಗಿ ಅರಿವುಳ್ಳ ಹಿರಿಯರು, ಗೆಳೆಯರು, ಕಲಾವಿದರ ಮಕ್ಕಳು, ಬಂಧುಗಳು, ಕಲಾವ್ಯವಸಾಯಿಗಳು, ಕಲಾವಿದರ ಶಿಷ್ಯರು ,ಮುಂತಾದವರ ಸಂಪರ್ಕವನ್ನು ಸಾಧಿಸಿ ಅವರೊಂದಿಗೆಲ್ಲ ಚರ್ಚಿಸಿ ಬರೆದುದನ್ನು ಪರಿಣಿತರ ಗಮನಕ್ಕೆ ತಂದು ಮತ್ತೆ ಫೇಸ್ಬುಕ್, ವಾಟ್ಸಾಪ್ ನಲ್ಲಿ ಪ್ರಕಟಿಸಿ ಆಮೇಲೆ ಪುಸ್ತಕಕ್ಕಿಳಿಸಲು ಮನಸ್ಸು ಮಾಡಿದ್ದಾರೆ. ಈ ಕೆಲಸ ಸುಲಭದ್ದಲ್ಲ. ಕೇಳಿದರೂ ತಿಳಿದವರು ಸ್ಪಂದಿಸದೆ ಇರುವುದು ಅದೆಲ್ಲ ಬರೆಯುವಷ್ಟು ದೊಡ್ಡದಲ್ಲ ಎಂಬ ದೊಡ್ಡಸ್ತಿಕೆಯ ಮಾತಾಡುವುದು , ನಾಳೆ ಹೇಳುವೆ ನಾಡಿದ್ದು ಹೇಳುವೆ ಎಂದು ಸತಾಯಿಸುವುದು, ಹೇಳಿದರೆ ನಮಗೇನು ಲಾಭ ಇವನಿಗೇನೋ ಅನುಕೂಲವಿರಬೇಕೆಂದು ಊಹಿಸುವುದು ಮುಂತಾದ ಹಲವು ಆಡಚಣೆಗಳನ್ನು ದಾಟಿ ಮುಂದುವರಿಯ ಬೇಕಾಗುತ್ತದೆ. ಕಲಾವಿದರು ಜೀವಿಸಿದ್ದ ಕಾಲ ದೂರದೂರವಾದಷ್ಟೂ ಮಾಹಿತಿಗಳೂ ದೂರದೂರವಾಗುತ್ತವೆ. ಕಲಾವಿದನ ಕೊಡುಗೆ ದೊಡ್ಡದೇ ಇದ್ದರೂ ಅವರ ಉತ್ತರಾಧಿಕಾರಿಗಳಿಗೆ ಆಸಕ್ತಿಯೇ ಇಲ್ಲದಿರುವುದು ಬಹುದೊಡ್ಡ ತೊಡಕಾಗುತ್ತದೆ. ಈ ಎಲ್ಲ ಪ್ರಯತ್ನಗಳನ್ನು ಮಾಡುತ್ತಾ ಇಷ್ಟೊಂದು ಕಲಾವಿದರನ್ನು ಕುರಿತು ಇವರು ಸಂಗ್ರಹಿಸಿದ ಮಾಹಿತಿ ಯಕ್ಷಗಾನಕ್ಕೆ ಬಹುದೊಡ್ಡ ಕೊಡುಗೆಯಾಗಿದೆ’ ಎಂದಿದ್ದಾರೆ.
ಅಬ್ದುಲ್ ಕಲಾಂ ಎ ಪಿ ಜೆ
Showing 3271 to 3300 of 4817 results