ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು.
ಇಪ್ಪತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ಅಲ್ಬೆ ಕಮೂ ಬರೆದ ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲಾಗುವ ದಿ ಪ್ಲೇಗ್ ಕೃತಿಯೂ ಮನುಷ್ಯರ ಅಸಹಾಯಕತೆ, ದಾರುಣತೆ, ದುಷ್ಟತನ ಮತ್ತು ಕರುಣೆಯನ್ನು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ. ಕಾಯಿಲೆಯೊಂದು ರೂಪಕವಾಗಿ ಕೊಳೆತ ಸಮಾಜದ ಅಸ್ವಾಸ್ಥ್ಯವನ್ನು ಬೆಳಕಿಗೆ ತರುವುದೇ ಈ ಕೃತಿಯ ಮುಖ್ಯ ಆಶಯ. ಅದಾಗಿ ಏಳು ದಶಕದ ಬಳಿಕ ನಾವು ಬದುಕುತ್ತಿರುವ ವಿಶ್ವವು ಒಂದು ಜಾಗತಿಕ ಸಾಂಕ್ರಾಮಿಕವನ್ನು ಎದುರಿಸಿತು. ಇಂದು ಬದುಕುಳಿದಿರುವ ನಾವೆಲ್ಲ ಅದಕ್ಕೆ ಸಾಕ್ಷಿಯಾದೆವು. ಪತ್ರಕರ್ತರಾದ ಸಂತೆಕಸಲಗೆರೆ ಪ್ರಕಾಶ್ ಅವರು ಕೂಡ ಆ ಕಾಲಘಟ್ಟದ ಅನುಭವವನ್ನು ಕಥೆಗಳ ರೂಪದಲ್ಲಿ 'ಬೂಸ್ಟರ್ ಡೋಸ್ ಮುನಿಯಮ್ಮ' ಎಂಬ ಸಂಕಲನದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಹನ್ನೆರಡು ಕಥೆಗಳ ಈ ಸಂಕಲನವು ಜಾಗತಿಕ ಮಹಾಮಾರಿಯ ರುದ್ರಭಯಾನಕತೆಯ ವಿವಿಧ ರೂಪವನ್ನು ಕಥೆಗಳಲ್ಲಿ ಹಿಡಿದಿರಲು ಯತ್ನಿಸುತ್ತದೆ. ಜಾಗತಿಕ ಕಾಯಿಲೆಯ ಸ್ವರೂಪ ಮನೆ-ಕುಟುಂಬ-ಗ್ರಾಮ-ನಗರದ ಬೀದಿಗಳಲ್ಲಿ ಹೇಗೆ ಕಾಣಿಸಿಕೊಂಡಿತು. ಯಾವ ಪರಿಣಾಮವನ್ನುಂಟು ಮಾಡಿತು ಎಂದು ಇಲ್ಲಿನ ಕಥೆಗಳು ಅರಿಯಲು ಪ್ರಯತ್ನಿಸುತ್ತವೆ.
ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳವಳಿಯೂ ಆಗಿತ್ತು. ಅದು ಪುರುಷ, ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು
ಕವಯತ್ರಿ ವಿದ್ಯಾ ಭರತನಹಳ್ಳಿಯವರು ಕಥಾ ಪ್ರಪಂಚಕ್ಕೆ ಕಾಲಿರಿಸಿದ್ದು ಇತ್ತೀಚೆಗೆ. ನೋಡನೋಡುತ್ತ ಮೂಡಿಬಂದ ಹದಿಮೂರು ಕಥೆಗಳ ಸಂಕಲನ 'ಬೇಸೂರ್'. ರೋಚಕತೆಯ ಮೋಹಕ್ಕೆ ಬೀಳದಿದ್ದರೂ ಶೈಲಿ ಚುರುಕಾಗಿದೆ. ವಸ್ತು ಮತ್ತು ಪಾತ್ರಗಳ ಆಯ್ಕೆ ತುಂಬಾ ಅಥೆಂಟಿಕ್ ಆಗಿದೆ. ಕಥೆಗಾರನಿಗೆ ಅಗತ್ಯವಾದ ನಿರ್ಲಿಪ್ತತೆ ವಿದ್ಯಾರಿಗೆ ಸಿದ್ದಿಸಿದೆ. ಕೆಲವು ಕತೆಗಳಂತೂ ಹೃದಯದಾಳವ ಹೊಕ್ಕು ಬಗೆಯುವಂತಿವೆ. ಗಂಡನೆಂಬ ಪ್ರಾಣಿಯ ಕ್ರೌರ್ಯಕ್ಕೆ ಸಿಕ್ಕು. ಹಿಚುಕಲ್ಪಟ್ಟು ಮಸಣ ಸೇರುವ 'ಆಯಿ'ಯ ಕಮಲಾಕ್ಷಿ, ಅಂಥದೇ ಇನ್ನೊಬ್ಬ ಗಂಡನನ್ನು ಧಿಕ್ಕರಿಸಿ ಹೊರಬಂದು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ 'ಹೇಳೆ ಮೇದಿನಿ'ಯ ಮೇದಿನಿ. ಸ್ತ್ರೀ ಹೃದಯದ ಉದಾತ್ತತೆ ಮೆರೆಯುವ 'ಗಿಂಡಿ ತುಂಬಿದ ಹಾಲಿ'ನ ಶಾಂತಲೆ. ತನ್ನ ಉಕ್ಕುವ ಪ್ರತಿಭೆಯನ್ನು ಸದಾ ಸಿಟ್ಟು, ಸೆಡವು, ಕೊಂಕು ಮಾತುಗಳಿಂದ ಮುರುಟಿಸುವ ಗಂಡನನ್ನು ಕಟ್ಟಿಕೊಂಡು ವಿಲ ವಿಲ ಒದ್ದಾಡುವ ವರ್ಷಾ ದೇಶಪಾಂಡೆ ಮುಂತಾದ ಜೀವಗಳು ಕಥೆ ಓದಿ ಮುಗಿಸಿಯಾದಮೇಲೂ ಬಹುಕಾಲ ನೆನಪಿನಲ್ಲಿ ಸ್ಥಾಯಿಯಾಗುತ್ತವೆ. ಮನ ಕದಡುತ್ತವೆ. ಚಿಂತನೆಗೆ ಹಚ್ಚುತ್ತವೆ. ವಸ್ತುವಿನ ಗಟ್ಟಿತನದಿಂದ, ಶೈಲಿಯ ದಟ್ಟತೆಯಿಂದ, ಜೀವನಾನುಭವದ ಸಮೃದ್ಧತೆಯಿಂದ ವಿದ್ಯಾ ಭರತನಹಳ್ಳಿಯವರ 'ಬೇಸೂರ್' ಕಥಾ ಸಂಕಲನ ಸಾಹಿತ್ಯ ಲೋಕದಲ್ಲಿ ತನ್ನದೇ ಒಂದು ಛಾಪು ಮೂಡಿಸುತ್ತದೆ.
” ಭಾನುಮತಿಯ ಪರಿವಾರ” ಎಂಬುದು ಹಿಂದಿ ನಾಣ್ಣುಡಿ “ಭಾನುಮತೀ ಕಾ ಕುನ್ ಬಾ”ದ ಕನ್ನಡ ಅನುವಾದ.
ನಟನ ಕಥೆ. ಮಂಡ್ಯ ರಮೇಶ್ ಕಟ್ಟಿದ ನಾಟಕ ಕೂಟದ ಸಾಹಸಗಾಥೆ. ಭೂಮಿ ಪಡೆಯುವುದರಿಂದ ಕಟ್ಟಡ ಕಟ್ಟುವವರೆಗಿನ ಬವಣೆಗಳು ಮನಸ್ಸನ್ನು ತಟ್ಟುತ್ತವೆ. ಜೊತೆಗೆ ಮಂಡ್ಯ ರಮೇಶ್ ಅವರ ಅಂಕಿತ ಭಾವ, ಪಾತ್ರಧಾರಿಗಳಿಂದ ಪರಿಪೂರ್ಣ ಅಭಿನಯಕ್ಕೆ ತರಬೇತಿ ಅನನ್ಯ. ಅವರ ವಿದೇಶ ಪ್ರವಾಸ… ಅವರ ವಿನೀತ ಭಾವ… ಅವರ ಪುಸ್ತಕ ಪಠಣ ಮುದ ನೀಡುತ್ತವೆ. ಕನ್ನಡ ಸ್ಪಷ್ಟವಾಗಿ ಮಾತಾಡಲು ಬರದ ಮಕ್ಕಳು ರಜಾಮಜಾ ಕೂಟ ಸೇರಿ ವೇದಿಕೆ ಹತ್ತುವ ಭಯ ಕಳೆದು ನಟಿಸುವುದು… ಹ್ಯಾಟ್ಸ್ ಆಫ್ ಟು ಮಂಡ್ಯ ರಮೇಶ್.
ವಿತ್ತ ಜಗತ್ತಿನ ಬರಹಗಾರರಾಗಿ ಖ್ಯಾತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಪುಸ್ತಕವೇ ‘ಮನಿ ಮನಿ ಎಕಾನಮಿ.’ ಇದು ಬ್ಯಾಂಕಿಂಗ್, ಹಣಕಾಸು ಕ್ಷೇತ್ರ ಕುರಿತ ಮಾಹಿತಿಪೂರ್ಣ ಪುಸ್ತಕವಾಗಿದೆ. ವಿತ್ತ ಜತ್ತಿನ ಆಗುಹೋಗುಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಳಿದುಕೊಳ್ಳುವ ಅಗತ್ಯವಿದೆ. ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಲೇಖಕರು ಹಲವು ಉಪಯುಕ್ತ ಮಾಹಿತಿಯ ಲೇಖನಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಾಮಾನ್ಯ ಪ್ರಜೆಗಳಿಗೂ ಉಪಯುಕ್ತ ಪುಸ್ತಕ ಇದಾಗಿದೆ.
ಮನೆ ಇಂಜಿನಿಯರ್" ಶೀರ್ಷಿಕೆ ಹೊತ್ತ ಈ ಪುಸ್ತಕದಲ್ಲಿ ನಿವೇಶನದಿಂದ ಮೊದಲಾಗಿ ಮನೆಯನ್ನು ಕಟ್ಟಲು ಅಗತ್ಯವಿರುವ ಎಲ್ಲ ತರಹದ ಉಪಯುಕ್ತ ಮಾಹಿತಿಗಳನ್ನು ಅಚ್ಚುಕಟ್ಟಾಗಿ, ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಕನ್ನಡ ಭಾಷೆಯಲ್ಲಿ ರಾಮ್‌ಕದಮ್‌ರವರು ಬರೆದಿದ್ದಾರೆ. ನನ್ನ ಬಹುಕಾಲದ ಪರಿಚಿತರಾದ ಇವರು ಕನ್ನಡ ಸಾರಸ್ವತ ಲೋಕಕ್ಕೆ ಒಂದು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕೆಲವು ವಿಷಯಗಳು ಸಂಕ್ಷಿಪ್ತವಾಗಿವೆಯಾದರೂ ಅಗತ್ಯವಿರುವಷ್ಟು ವಿವರಣೆಯನ್ನು ಒಳಗೊಳ್ಳುವ ಮೂಲಕ 'ಮನೆ ಇಂಜಿನಿಯರ್' ಪರಿಪೂರ್ಣತೆಯನ್ನು ಪಡೆದು ಕೊಳ್ಳುವುದರಲ್ಲಿ ಸಫಲವಾಗಿದೆ. ವಿಶ್ವದ ಕೆಲವು ದೇಶಗಳಲ್ಲಿ ಬಳಕೆಯಲ್ಲಿರುವ ಆಯ್ದ ಮನೆಗಳ ಮಾದರಿ ನಕಾಶೆಗಳೂ ಇದರಲ್ಲಿವೆ. ವಾಸ್ತುಶಾಸ್ತ್ರದ ಗೊಂದಲಗಳಿಗೆ ಆಧಾರಸಹಿತವಾದ ಸ್ಪಷ್ಟ ವಿವರಣೆಯಿದೆ. ವಿದ್ಯುತ್, ಪ್ಲಂಬಿಂಗ್, ಒಳಾಂಗಣ ವಿನ್ಯಾಸ, ತಾಂತ್ರಿಕ ಸಲಹೆ ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಮನೆಯನ್ನು ಕಟ್ಟುವವರಿಗೆ ಅಗತ್ಯವಾಗಬಹುದಾದ ಎಲ್ಲ ಮಾಹಿತಿಗಳು ಇಲ್ಲಿ ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಲಭ್ಯವಿದೆ. 'ಮನೆ ಕಟ್ಟಿನೋಡು, ಮದುವೆ ಮಾಡಿನೋಡು' ಎಂಬ ಕನ್ನಡದ ಗಾದೆ ಮಾತೊಂದಿದೆ. ಮದುವೆಯೇನೋ ಹಾಗೂ ಹೀಗೂ ಕೆಲವು ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಮಾಡಿ ಮುಗಿಸಿಬಿಡಬಹುದು. ಆದರೆ ಮನೆಯನ್ನು ಕಟ್ಟುವುದು ಹಾಗಾಗುವುದಿಲ್ಲ. ಅದು ಕಷ್ಟದ ಕೆಲಸ. ಎಲ್ಲವನ್ನೂ ತರ್ಕಬದ್ಧವಾಗಿ ಹೊಂದಿಸಬೇಕಾದ ಅನಿವಾರ್ಯತೆಯಿರುತ್ತದೆ. ಈ ನಿಟ್ಟಿನಲ್ಲ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ವೃತ್ತಿಪರರಾದ ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಮನೆಯನ್ನು ಕಟ್ಟುವ ಮಾಲೀಕರು ಹೀಗೆ ಪ್ರತಿಯೊಬ್ಬರಿಗೂ ಈ ಪುಸ್ತಕವು ಅತ್ಯಂತ ಉಪಯುಕ್ತವಾಗಿದೆ. ಇವರಿಗೆ ಶುಭವಾಗಲಿ.
ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ
ಕೇವಲ ಮಾದಕ ವಸ್ತುಗಳ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರು ಇದ್ದಾರೆ. ಆದರೆ ಪಾಬ್ಲೊ ಕೇವಲ ಮಾದಕ ದೊರೆ ಮಾತ್ರ ಅಲ್ಲ. ಅವನ ಜನರ ಆರಾಧ್ಯ ದೈವ. ಅಮೆರಿಕ ಸರ್ಕಾರಕ್ಕೆ ತಲೆನೋವಾಗಿ… ಕೊನೆಗೆ ತನ್ನ ದೇಶದ ಮಕುಟವಿಲ್ಲದ ಮಹಾರಾಜನಾದ. ಪಾಬ್ಲೊನ ಗೆಳತಿಯರು… ಮಕ್ಕಳು… ಅವನ ದೊಡ್ಡ ವಿಲ್ಲಾ.. ಅವನನ್ನು ಹಿಡಿಯಲು ಪ್ರಯತ್ನಿಸಿದ ಅಧಿಕಾರಿಗಳು. ರೋಚಕ ನಿರೂಪಣೆ.
ಮಕ್ಕಳ ಸಾಹಿತ್ಯ ರಚನೆಗೆ ಬೇಕಾದ ಮುಗ್ಧ ಮನಸ್ಥಿತಿ, ಆದರ್ಶಪ್ರಿಯತೆ ಮತ್ತು ಬೆರಗು ನಮ್ಗಳಲ್ಲಿ ಇನ್ನೂ ಕಲುಷಿತಗೊಳ್ಳದೇ ಹಾಗೆಯೇ ಉಳಿದುಕೊಂಡು ໙໐໖໖. ಜನಪದ ಕತೆಗಳ ಹಾಗೂ ಪ್ರಾಣಿ ಪ್ರಪಂಚದ ಕಥನಗಳ ಜಾಡಿನಲ್ಲಿ ನವ್ಯ ಇಲ್ಲಿನ ಕತೆಗಳನ್ನು ಬರೆದಂತೆ ತೋರಿದರೂ ಮನುಷ್ಯನಲ್ಲಿ ನೆಲೆಗೊಂಡಿರುವ ಕ್ರೌರ್ಯ, ದುರಾಸೆ, ಅಪ್ರಮಾಣಿಕತೆ ಮುಂತಾದೆ ಅಪಸವ್ಯಗಳ ಎದುರಿಗೆ ಬಾಲಕರು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವ ಮಾದರಿಯನ್ನು ಇಲ್ಲಿನ ಕತೆಗಳು ನೀಡುತ್ತವೆ.
ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ
Nil
ಆಸ್ಕರ್ ಟಿವಿಯಲ್ಲಿ 1992ರ ಬಾರ್ಸಿಲೋನಾ ಒಲಂಪಿಕ್ಸ್ ಹೈಲೈಟ್ಸ್ ಹಲ್ಲು ಕಿಸಿದು ಕೊಂಡು ನೋಡಿದ ನೆನಪು ಅಚ್ಚಳಿಯದೆ ಮಸ್ತಕದಲ್ಲಿ ಅಚ್ಚಾಗಿದೆ. ಅವತ್ತಿಗೆ ಯಾರಾದರೂ ಇನ್ನೊಂದು ಹತ್ತು ವರ್ಷದಲ್ಲಿ ಈ ಒಲಂಪಿಕ್ ಆಟಗಾರರಿಗೆ ಎಂದು ಕಟ್ಟಿರುವ ಸುಸಜ್ಜಿತ ಮನೆಯೊಂದರ ಒಡೆಯ ನೀನಾಗುತ್ತೀಯ ಎಂದಿದ್ದರೆ ಹುಚ್ಚಾಪಟ್ಟೆ ನಕ್ಕು, ಹಂಗಿಸುವುದಕ್ಕೂ ಒಂದು ಮಿತಿ ಇರುತ್ತೆ ಗೆಳೆಯ ಎಂದು ಹೇಳಿ ಕಳಿಸುತ್ತಿದ್ದೆ. ಆದರೆ ದೈವೇಚ್ಛೆ ಬೇರೆಯಿತ್ತು, ಬಾರ್ಸಿಲೋನಾದಲ್ಲಿ ಒಂದಕ್ಕಿಂತ ಹೆಚ್ಚು ಮನೆಕೊಳ್ಳುವಂತಾಯ್ತು. 17 ವರ್ಷ ಬಾರ್ಸಿಲೋನಾ ನೆಲೆಯಾಯ್ತು, ಭಾಷೆ, ಬದುಕುವ ರೀತಿ, ಈ ಅಗಾಧ ಪ್ರಪಂಚದಲ್ಲಿ ನಾವೇನೂ ಅಲ್ಲ ಎನ್ನುವುದನ್ನ ಕಲಿಸಿತು.ಸಹಜೀವಿಗಳ ಬಗ್ಗೆ ಪ್ರೀತಿ, ಮಮಕಾರ ಕೂಡ ಕಲಿಸಿದ್ದು ಬಾರ್ಸಿಲೋನಾ. ಈ ಪುಸ್ತಕದಲ್ಲಿ, ಬಾರ್ಸಿಲೋನಾ ನನಗೆ ಉಣಬಡಿಸಿದ ಅನುಭವಗಳ ಕಥೆಯನ್ನ ಕಟ್ಟಿಕೊಟ್ಟಿದ್ದೇನೆ.
ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ.. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚಿತ್ರಗಳ ಬಿಡಿಸಿದ್ದಾರೆ. ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.
ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ. ಕನ್ನಡ ಚಿತ್ರರಂಗದ ಲೆಜೆಂಡ್‌ಗಳ ಕೊನೆಯ ದಿನಗಳ ಚಿತ್ರಣ ಇಲ್ಲಿದೆ. ನಿಮ್ಮ ಇಷ್ಟ ಕಲಾವಿದರ ಬಗ್ಗೆ ನೀವಿಲ್ಲಿ ಓದಿದ ಮೇಲೆ ನಮ್ಮ ಮನಸ್ಸು ಮೂಕವಾಗುತ್ತೆ. ಈ ಪುಸ್ತಕ ಭಾವಸ್ಪರ್ಶಿಯಾಗಿದೆ, ಹೃದಯಸ್ಪರ್ಶಿಯಾಗಿದೆ. ಕಲಾವಿದರ ಹೃದಯವಿದ್ರಾವಕ ಘಟನೆಗಳ ಚಿತ್ರಣ ನಮ್ಮ ಕರುಳು ಹಿಂಡಿ ಮನಕಲಕುತ್ತವೆ. ಒಂದು ಕಾಲದಲ್ಲಿ ತೆರೆಯ ಮೇಲೆ ಮಿಂಚಿದವರು ಇನ್ನೊಂದು ಕಾಲದಲ್ಲಿ ಹಲವು ಸಂಕಷ್ಟಗಳಿಂದ ನರಳುವ ಕಥಾನಕ ನಮ್ಮ ಮನ ಕರಗಿಸಿಬಿಡುತ್ತದೆ.
ಬೇರೆಯವರಿಗೆ ಕತೆ ಹೇಳುವ,ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿದಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ.
ರವೀಂದ್ರ ವೆಂಶಿಯವರ ಲೈಫ್ ಸಖತಾಗಿತ್ತು ಕಣ್ರೀ ಪುಸ್ತಕದಲ್ಲಿನ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯದ ಹಲವಾರು ಘಟನೆಗಳು ನೆನಪಾದದ್ದು ಸತ್ಯ. ಓದುವಾಗ ನನಗೆ ಇದು ಕಥೆಯಾ..? ಆತ್ಮಚರಿತ್ರೆಯಾ..? ಸುಲಲಿತ ಪ್ರಬಂಧವಾ..? ಎನ್ನುವ ಪ್ರಶ್ನೆ ಕಾಡುತ್ತಲೇ ಓದಿಸಿಕೊಂಡಿತು. ಓದಿಯಾದ ಮೇಲೆ ನನಗನ್ನಿಸಿದ್ದು ಇದು ಎಲ್ಲವೂ ಹೌದು ಎಂದು. ಭಾಗ-1ರಲ್ಲಿನ ಬರಹಗಳಲ್ಲಿ ತಿಳಿ ಹಾಸ್ಯದ ಮೂಲಕ ಘಟನೆಗಳನ್ನು ಕಟ್ಟಿಕೊಡುತ್ತಾ ನಿಧಾನಕ್ಕೆ ನಮ್ಮನ್ನು ಬರಹದೊಳಕ್ಕೆ ಸೆಳೆದುಕೊಂಡು ಬಿಡುತ್ತಾರೆ ಲೇಖಕರು. ಇಸ್ತ್ರೀಪೆಟ್ಟಿಗೆಯ ಪ್ರಸಂಗ, ಹೇರ್ ಕಟ್ ಸುತ್ತಲಿನ ವೃತ್ತಾಂತಗಳು, ಸಿನಿಮಾಗಳನ್ನು ಟೆಂಟ್ ನಲ್ಲಿ ನೋಡುವ ಸೊಬಗು - ಇವುಗಳನ್ನು ಲಘುಹಾಸ್ಯಮಯವಾಗಿ ಬರೆಯುತ್ತಾ, ಕಲಿಸಿದ್ದು ಕಲಿತದ್ದು ಲೇಖನದ ಮೂಲಕ ಚಿಂತನೆಗೆ ದೂಡುತ್ತಾರೆ. ಭಾಗ-2 ರಲ್ಲಿ ಕತೆಗಳ ಸ್ವರೂಪದಲ್ಲಿ ಬದುಕನ್ನು ತೆರೆದಿಡುತ್ತಾರೆ. ಒಂದೊಂದು ಕತೆಯೂ ಬೇರೆ ಬೇರೆಯದೇ ಆದ ದ್ರವ್ಯ, ನಿರೂಪಣೆ ಮತ್ತು ಭಾಷೆಯನ್ನು ಹೊಂದಿರುವುದು ರವೀಂದ್ರ ವೆಂಶಿಯವರ ವಿಶೇಷವೆನಿಸುವ ವಸ್ತುಗ್ರಹಿಕೆ ಮತ್ತು ಕತೆಯ ಕಟ್ಟುವಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಸರಳವಾದ, ಅರ್ಥಪೂರ್ಣವಾದ, ನಮ್ಮದೇ ಬದುಕಿನ ಸನ್ನಿವೇಶಗಳು ಎನ್ನುವ ಆತ್ಮೀಯತೆ ಬೆಳೆಸುವ ಬರವಣಿಗೆಯ ಈ ಹೊತ್ತಗೆ ಪ್ರತಿಯೊಬ್ಬರೂ ಓದಲೇಬೇಕಾದದ್ದಾಗಿದೆ.
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ.
ಒಂದು… ಎರಡು… ಮೂರು… ಈ ಎಣಿಕೆಗೆ ಕೊನೆ ಎಲ್ಲಿದೆ? ಅಥವಾ ಕೊನೆಯೇ ಇಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ. ಗಣಿತಲೋಕಕ್ಕೂ ಭೌತಶಾಸ್ತ್ರಕ್ಕೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ನಮಗೆ ಒಬ್ಬ ಚಂದಮಾಮ ಇದ್ದಾನೆ. ಬೇರೆ ಗ್ರಹಗಳಲ್ಲಿ ಮನುಷ್ಯರಿದ್ದರೆ, ಅಲ್ಲಿನ ತಾಯಂದಿರು ಮಕ್ಕಳಿಗೆ ತೋರಿಸಲು ಎಷ್ಟೊಂದು ಚಂದಮಾಮಗಳು! ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ‘ವಿಶ್ವಯಾನಕ್ಕೆ ಗಣಿತವಾಹನ’ ಪುಸ್ತಕ ಓದಿ…
ಕನ್ನಡದ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಅವರು ಬರೆದಿರುವ ವಿನೂತನ ಕಾದಂಬರಿ ಇದಾಗಿದೆ. ಕುತೂಹಲ ಕಥಾವಸ್ತು ಹೊಂದಿರುವ ಕಾದಂಬರಿ ರೋಚಕವಾಗಿದೆ. ಹಲವು ಫ್ಯಾಂಟಸಿ ಕಥೆಗಳ ಮೂಲಕ ಶತಮಾನದ ‘ವಿಶ್ವಸುಂದರಿ’ ಪಾತ್ರಧಾರಿಯಾಗಿರುವ ಅಜ್ಜಿ ನಿಮ್ಮನ್ನು ಆವರಿಸಲಿದ್ದಾಳೆ. ನಿಮಗೆ ಸುಲಭವಾಗಿ ಓದಿಸುವ ನಿಟ್ಟಿನಲ್ಲಿ ಲೇಖಕರು ಭಾಷೆ, ಶೈಲಿಯನ್ನು ಸರಳೀಕರಿಸಿ ಬರೆದಿದ್ದಾರೆ. ಒಮ್ಮೆ ನೀವು ಕಾದಂಬರಿಯ ಪುಟಗಳನ್ನು ಓದಲು ಶುರು ಮಾಡಿದರೆ ಸಾಕು ಕೊನೆತನಕ ಓದಿಸಿಕೊಳ್ಳುವ ಗುಣವಿದೆ. ಕನ್ನಡಿಗರಾದ ನೀವು ಈ ಕಾದಂಬರಿಯನ್ನು ಓದಲೇಬೇಕು, ಇದರಿಂದ ನಿಮಗೆ ಎಷ್ಟೊಂದು ಮನರಂಜನೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ. ಅಷ್ಟೊಂದು ಚೆಂದವಿದೆ ಕಾದಂಬರಿ.
Showing 91 to 120 of 146 results